ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ರಾಹ್ಮಣರಿಗೂ ಜಾತಿ ಪ್ರಮಾಣಪತ್ರ ಸಿಕ್ಕಿದ್ದು ನಮ್ಮ ಸರ್ಕಾರದಿಂದ: ಕಂದಾಯ ಸಚಿವ ಆರ್ ಅಶೋಕ್

|
Google Oneindia Kannada News

ಬೆಂಗಳೂರು, ಜು. 05: "ಬ್ರಾಹ್ಮಣ ಸಮುದಾಯದಲ್ಲಿ ಎಲ್ಲಾ ಬ್ರಾಹ್ಮಣರು ಶ್ರೀಮಂತರಾಗಿಲ್ಲ, ಅನೇಕರು ಬಡವರು ಇದ್ದಾರೆ. ನಾವು ಅವರಿಗೆ ಸಹಾಯ ಮಾಡಬೇಕಾಗಿದೆ" ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿ ಆವರಣದಲ್ಲಿ ಕೋವಿಡ್ ನಿಂದ ಸಂಕಷ್ಟಕ್ಕೆ ಒಳಗಾದ ಬ್ರಾಹ್ಮಣ ಸಮುದಾಯದ ಒಂದು ಸಾವಿರ ಜನರಿಗೆ ದಿನಸಿ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು. "ಜನರು ನನ್ನ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ ಮತ್ತು ನನಗೆ ಮತ ಹಾಕಿದ್ದಾರೆ. ಇದು ನನ್ನ ಜವಾಬ್ದಾರಿಯಾಗಿದೆ. ನಾನು ಜನರ ಸೇವೆಯನ್ನು ಮುಂದುವರಿಸುತ್ತೇನೆ.

ಬ್ರಾಹ್ಮಣರಿಗೆ ಈ ಹಿಂದೆ ಇಲ್ಲದಿದ್ದ ಜಾತಿ ಪ್ರಮಾಣಪತ್ರವನ್ನು ನೀಡಲು ಸ್ವಯಂಪ್ರೇರಣೆಯಿಂದ ಆದೇಶ ಹೊರಡಿಸಿದ್ದೇನೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ತಿಳಿಸಲಾಗಿದೆ. ಬಡ ಬ್ರಾಹ್ಮಣ ಬಾಲಕಿಯರ ಉಚಿತ ಶಿಕ್ಷಣಕ್ಕಾಗಿ ನಾವು ಪದ್ಮನಾಭನಗರ ಕ್ಷೇತ್ರದಲ್ಲಿ ಕಟ್ಟಡವನ್ನು ನಿರ್ಮಿಸಿದ್ದೇವೆ ಮತ್ತು ಭೂಮಿ ಮತ್ತು ಆರ್ಥಿಕ ನೆರವು ನೀಡಿದ್ದೇವೆ" ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

bjp took initiative of providing caste certificate to Brahmins: Revenue Minister R Ashoka

"ಕೋವಿಡ್ ನಿಂದ ತಮ್ಮ ಕುಟುಂಬದವರನ್ನು ಕಳೆದುಕೊಂಡವರು ದೇಹಗಳನ್ನು ಪಡೆಯಲು ವಿಫಲರಾಗಿದ್ದಾರೆ. ಮತ್ತು ಕೆಲವರು ಹೆದರಿ ಮೃತದೇಹವನ್ನು ಪಡೆಯಲು ಮುಂದೆ ಬಂದಿರಲಿಲ್ಲ. ಆದ್ದರಿಂದ, ನಾವು ಅಸ್ತಿ ವಿಸರ್ಜನೆ ಮಾಡಲು ನಿರ್ಧರಿಸಿದೆವು. ನಾನು ಮೂರು ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡ ಧಾರ್ಮಿಕ ಕಾರ್ಯವನ್ನ ಮುಗಿಸಿದೆ. ಅದು ನನ್ನ ಕರ್ತವ್ಯ ಎಂದು ಬಲವಾಗಿ ನಂಬಿದ್ದೆ. ಈಗ ನಾನು ಇನ್ನೂ ಒಂದು ಧಾರ್ಮಿಕ ಆಚರಣೆ ಮಾಡುವುದಿದೆ.

bjp took initiative of providing caste certificate to Brahmins: Revenue Minister R Ashoka

Recommended Video

IPL ಆಡ್ತೀನಿ ಆದ್ರೆ ನಾಯಕತ್ವದ ಬಗ್ಗೆ ಗೊತ್ತಿಲ್ಲ ಎಂದ ಶ್ರೇಯಸ್ ಅಯ್ಯರ್ | Oneindia Kannada

ಅದಕ್ಕಾಗಿ ನಾನು ಕೇರಳದ ವಿಷ್ಣು ಪಾಡಾಗೆ ಅಥವಾ ವಾರಣಾಸಿಗೆ ಭೇಟಿ ನೀಡಬೇಕಿದೆ. ನಾನು ಈ ಎಲ್ಲಾ ಕೆಲಸಗಳನ್ನು ಮಾಡುತ್ತೇನೆ, ನನ್ನ ಜನ ನನಗೆ ಶಾಸಕನಾಗಿ ಸೇವೆ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ. ಶೀಘ್ರದಲ್ಲೇ ಈ ಕಾರ್ಯವನ್ನು ಸಹ ಮಾಡಿ ಮುಗಿಸುತ್ತೇನೆ" ಎಂದು ಇದೇ ಸಂದರ್ಭದಲ್ಲಿ ಆರ್. ಅಶೋಕ್ ಹೇಳಿದರು.

English summary
Revenue Minister R Ashoka gave away food kits to 1,000 members of Brahmin community at MLA's office in Padmanabhanagar constituency. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X