• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕನ್ನಡ ಬರದಿದ್ರೆ ಸಿದ್ದುಮೇಷ್ಟ್ರನ್ನ ಕೇಳಿ:HDK ಗೆ ಬಿಜೆಪಿ ಗುದ್ದು

|
   Lok Sabha Elections 2019 : ಕುಮಾರಸ್ವಾಮಿ ಮಾತನ್ನು ತಳ್ಳಿಹಾಕಿದ ಬಿಜೆಪಿ

   ಬೆಂಗಳೂರು, ಏಪ್ರಿಲ್ 12: ತಾವು ಸೈನಿಕರನ್ನು ಅವಹೇಳಿನ ಮಾಡಿದ ವಿಡಿಯೋ ನಕಲಿಯಾಗಿದ್ದು, ಅದನ್ನು ಬಿಜೆಪಿಯೇ ಬೇಕೆಂದೇ ಸಿದ್ಧಪಡಿಸಿದೆ ಎಂಬ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಬಿಜೆಪಿ, ಕನ್ನಡ ಅರ್ಥವಾಗದಿದ್ದರೆ ಮೇಷ್ಟು ಸಿದ್ದರಾಮಯ್ಯ ಅವರ ಬಳಿ ಕೇಳಿ ಎಂದು ಲೇವಡಿ ಮಾಡಿದೆ.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   "ಆ ಗಡಿ ಕಾಯೋರು, ಶ್ರೀಮಂತರ ಮಕ್ಕಳಲ್ಲ. ಬಡವರ ಮಕ್ಕಳು, ಎರಡ್ಹೊತ್ತಿನ ಊಟಕ್ಕೆ ಗತಿ ಇಲ್ಲದೆ, ಕೆಲಸ ಇಲ್ಲದೆ ಕೊನೆಗೆ ಸೇನೆ ಸೇರಿರೋರು, ಅಂಥವರ ಬಾಳಿನ ಜೊತೆ ಚೆಲ್ಲಾಟ ಆಡುವ ಪ್ರಧಾನಿ ಇವರು" ಎಂದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದರು.

   ಎರಡ್ಹೊತ್ತಿನ ಊಟಕ್ಕೆ ಗತಿ ಇಲ್ದೋರು ಸೇನೆ ಸೇರ್ತಾರೆ ಎಂದ ಎಚ್ಡಿಕೆ!

   ನಂತರ "ಈ ವಿಡಿಯೋ ನಕಲಿಯಾಗಿದ್ದು, ಬಿಜೆಪಿ ಎಂದಿನಂತೇ ತನ್ನ ಷಡ್ಯಂತ್ರ ರೂಪಿಸುತ್ತಿದೆ, ನಾನು ಹೇಳಿದ್ದನ್ನು ಬೇರೆ ರೀರತಿ ಅರ್ಥೈಸಲಾಗಿದೆ" ಎಂದು ಕುಮಾರಸ್ವಾಮಿ ನಮತರ ಸಮಜಾಯಿಷಿ ನೀಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ, ನಿಮಗೆ ಅರ್ಥವಾಗಲೆಂದೇ ಕನ್ನಡದಲ್ಲಿ ನೀವೇ ಮಾತನಾಡಿದ ವಿಡೀಯೋ ಹಾಕಿದ್ದೇವೆ, ಕನ್ನಡ ಅರ್ಥವಾಗದಿದ್ದರೆ ಕನ್ನಡ ಮೇಷ್ಟು ಸಿದ್ಧರಾಮಯ್ಯ ಅವರನ್ನು ಕೇಳಿ ಎಂದು ಬಿಜೆಪಿ ಪ್ರತಿಕ್ರಿಯೆ ನೀಡಿದೆ.

   ಎಚ್ ಡಿ ಕುಮಾರಸ್ವಾಮಿ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿವಾದ ಎಬ್ಬಿಸಿದೆ.

   ಎಚ್ ಡಿ ಕುಮಾರಸ್ವಾಮಿ ಹೇಳಿದ್ದೇನು?

   "ಗಡಿ ಕಾಯೋರು, ಶ್ರೀಮಂತರ ಮಕ್ಕಳಲ್ಲ. ಬಡವರ ಮಕ್ಕಳು, ಎರಡ್ಹೊತ್ತಿನ ಊಟಕ್ಕೆ ಗತಿ ಇಲ್ಲದೆ, ಕೆಲಸ ಇಲ್ಲದೆ ಕೊನೆಗೆ ಸೇನೆ ಸೇರಿರೋರು, ಅಂಥವರ ಬಾಳಿನ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಚೆಲ್ಲಾಟವಾಡುತ್ತಿದ್ದಾರೆ" ಎಂದು ಕುಮಾರಸ್ವಾಮಿ ಮದ್ದೂರಿನಲ್ಲಿ ಹೇಳಿದ್ದರು.

   ಬಿಜೆಪಿ ಪ್ರತಿಕ್ರಿಯೆ

   "ಕುಮಾರಸ್ವಾಮಿ ಅವರೇ, ದೇಶದ ಬಗ್ಗೆ ಭಕ್ತಿ ಇರುವವರು, ರಾಷ್ಟ್ರಪ್ರೇಮ ಇರುವವರು ಸೇನೆ ಸೇರುತ್ತಾರೆ. ಅಷ್ಟಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಿಣತ ನಿಮ್ಮ ಮಗನಿಗೆ ಸೇನೆಗೆ ಸೇರಲು ಹೇಳಿ. ಯೋಧರಾಗಲು ಏನು ಬೇಕು ಎಂಬುದು ನಿಮಗೆ ಆಗ ತಿಳಿಯಬಹುದು" ಎಂದು ಬಿಜೆಪಿ ಟ್ವೀಟ್ ಮಾಡಿ ಅವರೇ ಮಾತನಾಡಿದ ವಿಡಿಯೋವನ್ನೂ ಟ್ವೀಟ್ ಮಾಡಿತ್ತು.

   ಮಂಡ್ಯದಲ್ಲಿ ಇಂದು ನಿಖಿಲ್ ಕುಮಾರಸ್ವಾಮಿ ಬದಲು ಅನಿತಾ ಪ್ರಚಾರ!

   ಎಚ್ ಡಿಕೆ ಸಮಾಜಿಯಿಷಿ

   "ಬಿಜೆಪಿ ಮತ್ತೆ ತನ್ನ ಹಳೆಯ ತಂತ್ರ ಮಾಡುತ್ತಿದೆ. ಅವರು ಮತ್ತೊಂದು ಎಡಿಟೆಡ್ ವಿಡಿಯೋ ಹಾಕಿ ನನಗೆ ಅವಮಾನ ಮಾಡಲು ಪ್ರಯತ್ನಿಸುತ್ತಿದೆ. ಸೇನೆಗೆ ಸೇರುವವರೆಲ್ಲರೂ ಶ್ರೀಮಂತರಾಗಿರುವುದಿಲ್ಲ ಎಂದು ನಾನು ಹೇಳಿದ್ದೆ. ಮತಕ್ಕಾಗಿ ಅಂಥವರ ಬಾಲಿನ ಜೊತೆ ಪ್ರಧಾನಿ ಆಟವಾಡುತ್ತಿದ್ದಾರೆ ಎಂದಿದ್ದೆ. ಕೇವಲ ಜೀವನೋಪಾಯಕ್ಕಾಗಿ ಯೋಧರು ಸೇನೆಯಲ್ಲಿರುತ್ತಾರೆ ಎಂದು ನಾನು ಎಲ್ಲಿಯೂ ಹೇಳಿಲ್ಲ" ಎಂದು ಎಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ ಸಮಜಾಯಿಷಿ ನೀಡಿದ್ದರು.

   ಸಿಕ್ಕಿಹಾಕಿಕೊಂಡಾಗ ಎಡಿಟೆಡ್ ವಿಡಿಯೋ ಅನ್ನೋದು!

   "ಎಚ್ ಡಿ ಕುಮಾರಸ್ವಾಮಿ ಅವರು ತಾವು ಸಿಕ್ಕಿಹಾಕಿಕೊಂಡರೆ, ಅದನ್ನು ಎಡಿಟೆಡ್ ವಿಡಿಯೋ ಎಂದು ಹೇಳಿ ಅಳುವುದು ಹೊಸತಲ್ಲ. ನಿಮಗೆ ಅರ್ಥವಾಗಲೆಂದೇ ನೀವೇ ಕನ್ನಡದಲ್ಲಿ ಮಾತನಾಡಿದ ವಿಡಿಯೋವನ್ನು ಹಾಕಿದ್ದೇವೆ. ನಿಮಗೆ ಕನ್ನಡ ಅರ್ಥವಾಗದಿದ್ದರೆ ಕನ್ನಡದ ಮೇಷ್ಟ್ರು ಸಿದ್ದರಾಮಯ್ಯ ಅವರನ್ನು ಕೇಳಿ ತಿಳಿದುಕೊಳ್ಳಿ. ಇದರಲ್ಲಾದರೂ ನೀವು ಮತ್ತು ಅವರು 'ಸಮನ್ವಯ' ಸಾಧಿಸುವಂತಾಗಲಿ" ಎಂದು ಬಿಜೆಪಿ ಅದಕ್ಕೆ ಉತ್ತರ ನೀಡಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   BJP strongly opposes Chief minister HD Kumaraswamy's controversial statement on soldiers and rejects his allegation that BJP edited video of his speech.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more