ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಲೀಗಲ್ ನೋಟಿಸ್ ನೀಡಿದ ಬಿಜೆಪಿ

|
Google Oneindia Kannada News

ಬೆಂಗಳೂರು, ಜುಲೈ 31: ವೈದ್ಯಕೀಯ ಸಲಕರಣೆ ಖರೀದಿಯಲ್ಲಿ 2000 ಕೋಟಿ ಅಕ್ರಮ ನಡೆದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದರು.

ಈ ಆರೋಪಕ್ಕೆ ಸಂಬಂಧಿಸಿಂತೆ ಬಿಜೆಪಿ ಪಕ್ಷ ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಲೀಗಲ್ ನೋಟಿಸ್ ನೀಡಿದೆ. ಹದಿನೈದು ದಿನಗಳಲ್ಲಿ ನೋಟಿಸ್‌ಗೆ ಉತ್ತರ ನೀಡಬೇಕು ಹಾಗೂ ಸಾರ್ವಜನಿಕ ಕ್ಷಮೆಯಾಚಿಸಬೇಕೆಂದು ಬಿಜೆಪಿ ಆಗ್ರಹಿಸಿದೆ.

ಕೋವಿಡ್ ಭ್ರಷ್ಟಾಚಾರ: ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಒತ್ತಾಯಕೋವಿಡ್ ಭ್ರಷ್ಟಾಚಾರ: ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಒತ್ತಾಯ

ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ್, ರವಿಕುಮಾರ್ ಸುದ್ದಿಗೋಷ್ಠಿ ನಡೆಸಿ, ಸಾರ್ವಜನಿಕ ಕ್ಷಮೆಯಾಚಿಸಬೇಕು ಅಥವಾ ಕಾನೂನು ಹೋರಾಟ ಮುಂದುವರಿಸಬೇಕಾಗುತ್ತದೆ ಎಂದರು. ಇನ್ನು ಅಶ್ವಥ್ ನಾರಾಯಣ್ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಗುಡುಗಿದರು. ಮುಂದೆ ಓದಿ...

ಕೊರೊನಾ ವಾರಿಯರ್ಸ್ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ

ಪ್ರಸ್ತಾವನೆಗಳನ್ನೇ ಖರ್ಚು ಎನ್ನುವ ರೀತಿಯಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ. ಎರಡು ಪದಗಳ‌ ನಡುವಿನ ವ್ಯತ್ಯಾಸ ಅವರಿಗೆ ಗೊತ್ತಿಲ್ಲ ಅನ್ನಿಸುತ್ತದೆ. ಕೊವಿಡ್ ಸಂಕಷ್ಟ ಸಮಯದಲ್ಲಿ ಕೊರೊನಾ ವಾರಿಯರ್ಸ್, ವೈದ್ಯರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡ್ತಿದ್ದಾರೆ. ವೈದ್ಯರು ಹಾಕಿಕೊಳ್ಳುವ ಪಿಪಿಇ ಕಿಟ್ ಬಗ್ಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮಾತಾಡ್ತಾರೆ. ನಮ್ಮ‌ ಲೀಗಲ್ ನೋಟಿಸ್ ಗೆ 15 ದಿನದಲ್ಲಿ ಉತ್ತರ ಕೊಡಬೇಕು' ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವಥ್ ನಾರಾಯಣ್ ಕಿರಿಕಾರಿದ್ದಾರೆ.

ಯಾವ ನೈತಿಕತೆ ಇಟ್ಕೊಂಡು ಡಿಕೆಶಿ ಪಕ್ಕ ಕೂರುತ್ತೀರಿ?

ಯಾವ ನೈತಿಕತೆ ಇಟ್ಕೊಂಡು ಡಿಕೆಶಿ ಪಕ್ಕ ಕೂರುತ್ತೀರಿ?

'ಸಿದ್ದರಾಮಯ್ಯನವರೇ ಯಾವ ನೈತಿಕತೆ ಇಟ್ಟುಕೊಂಡು ಡಿ.ಕೆ. ಶಿವಕುಮಾರ ಪಕ್ಕದಲ್ಲಿ ಕೂರುತ್ತೀರಿ? ಯಾವ ನೈತಿಕತೆ ಇಟ್ಕೊಂಡು ಡಿಕೆ ಶಿವಕುಮಾರ ಜೊತೆ ಸೇರಿ ಪ್ರತಿಭಟನೆ ಮಾಡ್ತೀರಾ? ಡಿ.ಕೆ. ಶಿವಕುಮಾರ್ ಹೇಗೆ ಆಸ್ತಿ ದುಪ್ಪಟ್ಟು ಮಾಡಿಕೊಂಡರು? ನಮಗೂ ಹೇಳಿ ಕೊಡಿ. ಕಡಿಮೆ ಅವಧಿಯಲ್ಲಿ ಹೇಗೆ ಜಾಸ್ತಿ ಆಯ್ತು‌ ಇವರ ಆಸ್ತಿ?' ಎಂದು ಡಿಕೆ ಶಿವಕುಮಾರ್ ಕುರಿತು ವಾಗ್ದಾಳಿ ನಡೆಸಿದರು.

'4 ಲಕ್ಷದ ವೆಂಟಿಲೇಟರ್ ಖರೀದಿಗೆ 18 ಲಕ್ಷ ನೀಡಿದ ರಾಜ್ಯ ಸರ್ಕಾರ''4 ಲಕ್ಷದ ವೆಂಟಿಲೇಟರ್ ಖರೀದಿಗೆ 18 ಲಕ್ಷ ನೀಡಿದ ರಾಜ್ಯ ಸರ್ಕಾರ'

ಮಾಹಿತಿ ಪಡೆಯದೆ ಅಕ್ರಮ ಎಂದರಾ?

ಮಾಹಿತಿ ಪಡೆಯದೆ ಅಕ್ರಮ ಎಂದರಾ?

20 ಪತ್ರ ಬರೆದರೂ ಒಂದಕ್ಕೂ ಉತ್ತರ ಕೊಟ್ಟಿಲ್ಲ, ಮಾಹಿತಿ ನೀಡಿಲ್ಲ ಅಂತಾ ಸಿದ್ದರಾಮಯ್ಯ ಹೇಳ್ತಾರೆ. ಹಾಗಾದ್ರೆ ಅಂಕಿ ಅಂಶಗಳನ್ನಿಟ್ಟುಕೊಂಡು ಹೇಳಿದ್ದೀರಲ್ಲಾ 4000 ಕೋಟಿ ಖರ್ಚಾಗಿದೆ, 2000 ಕೋಟಿ ಅಕ್ರಮವಾಗಿದೆ ಎಂದು ಹೇಗೆ ಹೇಳಿದ್ರಿ?

ಭ್ರಮನಿರಸನರಾಗಿ ಹೀಗೆಲ್ಲಾ ಮಾತಾಡ್ತಿದ್ದೀರಾ?

ಭ್ರಮನಿರಸನರಾಗಿ ಹೀಗೆಲ್ಲಾ ಮಾತಾಡ್ತಿದ್ದೀರಾ?

ಸತ್ಯಕ್ಕೆ ದೂರವಾದ ಹೇಳಿಕೆ, ಆರೋಪ ಮಾಡಿರುವ ಕಾರಣ‌ ನೋಟೀಸ್ ನೀಡಲಾಗುತ್ತಿದೆ. ನೀವು ಮಾಹಿತಿ ಕೇಳಿದ್ರಿ, ಸರ್ಕಾರ ಮಾಹಿತಿ ನೀಡಲು ರೆಡಿಯಿದೆ. ಆದ್ರೆ ನೀವು ಮಾಹಿತಿ ಇಲ್ಲದೇ 4167 ಕೋಟಿ ಖರ್ಚು ಮಾಡಿ 2000 ಕೋಟಿ ಅಕ್ರಮ ಎಂದು ಹೇಳಿ ಸರ್ಕಾರಕ್ಕೆ ಕೆಟ್ಟ ಹೆಸರು ಮಾಡುವ ಯತ್ನ ಮಾಡಿದ್ದೀರಿ ಹೇಗೆ ಎನ್ನುವ ಮಾಹಿತಿಯುಳ್ಳ ನೋಟೀಸ್ ನೀಡಲಾಗುತ್ತಿದೆ. ಭ್ರಮ‌ನಿರಸನರಾಗಿ ಹೀಗೆಲ್ಲಾ ಮಾತಾಡ್ತಿದ್ದೀರಾ? ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದೀರಿ. ಹ್ಯೂಬ್ಲೋಟ್ ವಾಚ್ ಬಗ್ಗೆ ಸಿದ್ದರಾಮಯ್ಯನವರೇ ಉತ್ತರ ಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

English summary
Rs 2000 cr scam allegations on state Govt: BJP sends legal notice to congress leader Siddaramaiah and Kpcc president DK shivakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X