• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿದ್ದರಾಮಯ್ಯರನ್ನು ಬುರುಡೆ ರಾಮಯ್ಯ ಎಂದ ಬಿಜೆಪಿ

|
Google Oneindia Kannada News

ಬೆಂಗಳೂರು ಮೇ 28: ರಾಷ್ಟ್ರೀಯ ಸ್ವಯಂ ಸೇವಕ್ ಸಂಘ ( ಆರ್‌ಎಸ್‌ಎಸ್‌) ಮೂಲವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೆಣಕಿರುವುದು ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಬಿಜೆಪಿಯು ಸಿದ್ದರಾಮಯ್ಯ ಅವರನ್ನು #ಬುರುಡೆರಾಮಯ್ಯ ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಸರಣಿ ಕೂ ಮಾಡುವ ಮೂಲಕ ವಾಗ್ದಾಳಿ ನಡೆಸಿದೆ.

ಆಫ್ಘಾನಿಸ್ತಾನದ ಬಾಬುರ್ ಸಮಾಧಿಗೆ, 1959ರಲ್ಲಿ ನೆಹರೂ 1968ರಲ್ಲಿ ಇಂದಿರಾ ಗಾಂಧಿ 2005ರಲ್ಲಿ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ! ‌ಭೇಟಿಯ ಬಳಿಕ "ಮೈ ಟ್ರೂ ಹೋಮ್‌ ಕಮಿಂಗ್" ಎಂದು ಉದ್ಘರಿಸಿದ್ದರು ಇಂದಿರಾ!!! ಸಾವಿರಾರು ಹಿಂದೂಗಳನ್ನು ಹತ್ಯೆಗೈದ ಬಾಬುರ್ ಎಂಬ ಮತಾಂಧನ ಮೂಲ ಹಾಗೂ ಇವರ ಮೂಲ ಎರಡೂ ಒಂದೇ ಆಗಿದೆಯೇ? ಬುರುಡೆರಾಮಯ್ಯ ಎಂದು ಬಿಜೆಪಿ ಪ್ರಶ್ನಿಸಿದೆ.

'ಸ್ವಾತಂತ್ರ್ಯಾ ನಂತರ ಕಾಂಗ್ರೆಸ್​ ಪಕ್ಷವನ್ನು ವಿಸರ್ಜನೆ ಮಾಡಬೇಕು ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಈಗಿರುವ ಕಾಂಗ್ರೆಸ್ ಪಕ್ಷ, ಇಂದಿರಾ ಕಾಂಗ್ರೆಸ್ ಪಕ್ಷ ಮತ್ತು ನಕಲಿ ಗಾಂಧಿಗಳ ಪಕ್ಷ. ಅಂದಹಾಗೆ ಸಿದ್ದರಾಮಯ್ಯ ಅವರೇ, ನೀವು ಕೂಡ ಜನತಾದಳ ಪಕ್ಷದಿಂದ, ಅಧಿಕಾರದ ಮೋಹದಿಂದ ನಕಲಿ ಗಾಂಧಿ ಪಕ್ಷಕ್ಕಕ್ಕೆ ಬಂದವರಲ್ಲವೇ?' ಎಂದು ಬಿಜೆಪಿ ಕುಟುಕಿದೆ.

'ಸಿದ್ದರಾಮಯ್ಯ ಅವರೇ, ನೀವು ಯಾರ ವಿಶ್ವಾಸಕ್ಕಾಗಿ ಹೇಳಿಕೆ ನೀಡುತ್ತಿದ್ದೀರೋ, ಅವರ ಮೂಲ ನಿಮಗೆ ತಿಳಿದಿಲ್ಲವೇ? ಫಿರೋಜ್ ಗಾಂಧಿ - ಫಿರೋಜ್ ಜೆಹಾಂಗೀರ್ ಗ್ಯಾಂಡಿ, ಪರ್ಷಿಯನ್‌ ಮೂಲ, ಸೋನಿಯಾ ಗಾಂಧಿ - ಎಡ್ವಿಜ್ ಆಂಟೋನಿಯಾ ಅಲ್ಬಿನಾ ಮೈನೊ, ಇಟಲಿ ಮೂಲ, ರಾಹುಲ್ ಗಾಂಧಿ - ರೌಲ್ ವಿನ್ಸಿ

ಸಿದ್ದರಾಮಯ್ಯ ಅವರೇ,ಇಂದಿರಾ ಕಾಂಗ್ರೆಸ್‌, ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ ಆಗಿದ್ದೇಗೆ? ಇಂದಿರಾ ಪ್ರಿಯದರ್ಶಿನಿ ಗ್ಯಾಂಡಿ, ಇಂದಿರಾ ಗಾಂಧಿ ಆಗಿದ್ದೇಗೆ? ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

   ಆರಂಭದಲ್ಲೇ ಎಡವಟ್ಟು ಮಾಡಿ ಗುಜರಾತ್ ಗೆ ಗೆಲ್ಲೊ ದಾರಿ ಬಿಟ್ಟುಕೊಟ್ಟ Sanju Samson |#cricket |Oneindia Kannada

   English summary
   Opposition leader Siddaramaiah's clash over the origin of the Rashtriya Swayamsevak Sangh (RSS) has led to BJP's outrage. Against this backdrop, the BJP has branded Siddaramaiah with a hash tag called Burude Ramaiah.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X