• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಿಂಗಾಯತ ಮುಖಂಡರು 'ಸಿಎಂ' ಗಾದಿಗೆ,ಎಂಬಿ ಪಾಟೀಲರ ನೆರವು ಕೇಳಿದ ರವಿ

|
   ಎಂ ಬಿ ಪಾಟೀಲ್ vs ಸಿ ಟಿ ರವಿ | ಏನಿದು ವಾದ ವಿವಾದ?

   ಬೆಂಗಳೂರು, ಜೂನ್ 04: 'ಯಡಿಯೂರಪ್ಪ ಸಿಎಂ ಮಾಡಲು ಎಂಬಿ ಪಾಟೀಲ ನೆರವು ಕೋರಿದ ಸಿಟಿ ರವಿ' ಶೀರ್ಷಿಕೆ ನೋಡಿ ಅರೇ ಇದೇನಿದು ಎಂದುಕೊಳ್ಳಬೇಡಿ. ಮೋದಿ ಸಂಪುಟದಲ್ಲಿ ಕರ್ನಾಟಕದ ಸಂಸದರಿಗೆ ಸಿಕ್ಕಿರುವ ಪ್ರಾತಿನಿಧ್ಯ ಕುರಿತು ಗೃಹ ಸಚಿವ ಎಂಬಿ ಪಾಟೀಲ್ ಅವರು ಮಾಡಿದ್ದ ಟ್ವೀಟ್ ಗೆ ಶಾಸಕ ಸಿಟಿ ರವಿ ಕೊಟ್ಟ ತಿರುಗೇಟು ಈ ರೀತಿ ಇತ್ತು.

   ಕರ್ನಾಟಕದಿಂದ 25 ಮಂದಿ ಸಂಸದರು ಆಯ್ಕೆಯಾಗಿದ್ದಾರೆ ಈ ಪೈಕಿ ಮೂವರಿಗೆ ಮಾತ್ರ ಮೋದಿ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.

   ಸಂಘಟನಾ ಚತುರ ಸಂತೋಷ್ ಗೆ ಬಡ್ತಿ, ಬಿಜೆಪಿ ಅಧ್ಯಕ್ಷ ಸ್ಥಾನ ರವಿಗೆ ಖಾತ್ರಿ? ಸಂಘಟನಾ ಚತುರ ಸಂತೋಷ್ ಗೆ ಬಡ್ತಿ, ಬಿಜೆಪಿ ಅಧ್ಯಕ್ಷ ಸ್ಥಾನ ರವಿಗೆ ಖಾತ್ರಿ?

   ಪ್ರಲ್ಹಾದ ಜೋಶಿ ನಾಲ್ಕು ಬಾರಿ, ಸುರೇಶ್ ಅಂಗಡಿ ಕೂಡಾ ನಾಲ್ಕು ಬಾರಿ ಗೆದ್ದಿದ್ದಾರೆ, ಆದರೆ, ಜೋಶಿ ಅವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಸಿಕ್ಕಿದೆ, ಅಂಗಡಿ ಅವರಿಗೆ ರಾಜ್ಯ ಸಚಿವ ಸ್ಥಾನ ಸಿಕ್ಕಿದೆ ಇದು ಲಿಂಗಾಯತರಿಗೆ ಆಗಿರುವ ಅನ್ಯಾಯ, ಯಾಕೆ ಈ ರೀತಿ ತಾರತಮ್ಯದ ನೀತಿ ಎಂದು ಪ್ರಶ್ನಿಸಿ ಎಂಬಿ ಪಾಟೀಲ್ ಅವರು ಟ್ವೀಟ್ ಮಾಡಿದ್ದರು.

   ಇದಕ್ಕೆ ಉತ್ತರ ನೀಡಿರುವ ಸಿಟಿ ರವಿ, ಕರ್ನಾಟಕ ಬಿಜೆಪಿ ಸಂಸದರ ಬಗ್ಗೆ ಯಾಕೆ ಚಿಂತಿಸುತ್ತೀರಿ? ರಾಜ್ಯದಲ್ಲಿ ಲಿಂಗಾಯತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳೋಣ, ನಿಮಗೆ ನಿಜಕ್ಕೂ ಲಿಂಗಾಯತರ ಬಗ್ಗೆ ಕಾಳಜಿ ಇದ್ದರೆ,

   ನಿಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಲಿಂಗಾಯತ ನಾಯಕ ಬಿಎಸ್ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಲು ಬೆಂಬಲಿಸಿ ಎಂದಿದ್ದಾರೆ.

   ಯಡಿಯೂರಪ್ಪ ಅವರ ಸ್ಥಿತಿಯೂ ಹೀಗೆ ಆಗಬಹುದೇನೋ

   ಆದರೆ, ಜೋಶಿ ಅವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ್ ಸಿಕ್ಕಿದೆ, ಅಂಗಡಿ ಅವರಿಗೆ ರಾಜ್ಯ ಸಚಿವ ಸ್ಥಾನ ಸಿಕ್ಕಿದೆ ಇದು ಲಿಂಗಾಯತರಿಗೆ ಆಗಿರುವ ಅನ್ಯಾಯ, ಯಾಕೆ ಈ ರೀತಿ ತಾರತಮ್ಯದ ನೀತಿ ಎಂದು ಪ್ರಶ್ನಿಸಿ ಎಂಬಿ ಪಾಟೀಲ್ ಅವರು ಟ್ವೀಟ್ ಮಾಡಿದ್ದರು. ನಂತರ ಯಡಿಯೂರಪ್ಪ ಅವರ ಸ್ಥಿತಿಯೂ ಹೀಗೆ ಆಗಬಹುದೇನೋ ಎಂದು ಮತ್ತೊಂದು ಟ್ವೀಟ್ ಹಾಕಿದ್ದರು.

   ಲಿಂಗಾಯತ ಪರ ಕಾಳಜಿ ತೋರಿಸಿ ಎಂದು ಸವಾಲು

   ನಿಮ್ಮ ಕೈಯಲ್ಲಿ ಇಲ್ಲದ ಭವಿಷ್ಯ ಹೇಳುವುದನ್ನು ಬಿಟ್ಟು ವರ್ತಮಾನದ ಬಗ್ಗೆ ಮಾತನಾಡಿ, ರೈತ ಬಂಧು, ಲಿಂಗಾಯತ ನಾಯಕ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ಸಿದ್ಧವಿದೆ, ಲಿಂಗಾಯತ ಪರ ಕಾಳಜಿ ತೋರಿಸಿ ನಿಮ್ಮ ಹುದ್ದೆಗೆ ರಾಜೀನಾಮೆ ನೀಡುವುದು ನಿಮ್ಮ ಕೈಯಲ್ಲಿದೆ ಎಂದು ಟಾಂಗ್ ಕೊಟ್ಟ ಸಿಟಿ ರವಿ.

   ವಿಶ್ವನಾಥ್ ರಾಜೀನಾಮೆ ಬಳಿಕ ಸಿಟಿ ರವಿ ಟ್ವೀಟ್

   ವಿಶ್ವನಾಥ್ ರಾಜೀನಾಮೆ ಬಳಿಕ ಸಿಟಿ ರವಿ ಟ್ವೀಟ್ ಮಾಡಿ, ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ದೂರಿದ್ದಾರೆ. ಆಡಳಿತ ಯಂತ್ರ ಕುಸಿದಿದ್ದು, ಹೊಸದಾಗಿ ಜನಾದೇಶ ಪಡೆಯಲು ಎಚ್ ಡಿ ಕುಮಾರಸ್ವಾಮಿ ಮುಂದಾಗಲಿ ಎಂದ ಸಿಟಿ ರವಿ.

   ಜಾತಿ ನೋಡಿ ಸಚಿವ ಸ್ಥಾನ ನೀಡಿಲ್ಲ

   ಜಾತಿ ನೋಡಿ ಸಚಿವ ಸ್ಥಾನ ನೀಡೋಕೆ ಅದು ಕರ್ನಾಟಕ ಸರ್ಕಾರ ಅಲ್ಲ, ಮೋದಿ ಸರ್ಕಾರ, ಯೋಗ್ಯತೆಗೆ ತಕ್ಕಂತೆ ಸ್ಥಾನಮಾನ ಸಿಗುತ್ತದೆ ಎಂದ ಸಾರ್ವಜನಿಕರು.

   English summary
   If you(MB Patil) are so genuinely concerned about Lingayats why don't you resign from your post and support us to install the tallest Lingayat leader(Yeddyurappa) as CM? tweeted BJP MLA CT Ravi.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X