ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೈಕಮಾಂಡಿಗೆ ಕಪ್ಪ ಆರೋಪ: ಸಾಕ್ಷಿ ನೀಡಿ ಉತ್ತರಿಸಿದ ಬಿಜೆಪಿ

|
Google Oneindia Kannada News

ಬೆಂಗಳೂರು, ಮಾರ್ಚ್ 22: ಹೈಕಮಾಂಡಿಗೆ ಕಪ್ಪ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿ ಎಸ್ ಯಡಿಯೂರಪ್ಪ ಮತ್ತು ಮಾಜಿ ಕೇಂದ್ರ ಸಚಿವ ದಿ.ಅನಂತ್ ಕುಮಾರ್ ಸಂಭಾಷಣೆ ನಡೆಸಿದ ದಾಖಲೆಗಳ ಬಗ್ಗೆ ಕಾಂಗ್ರೆಸ್ ಮತ್ತೆ ಧ್ವನಿ ಏರಿಸಿದೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಆದರೆ ಈ ಆರೋಪ ಶುದ್ಧ ಸುಳ್ಳು ಎಂದು ಆರೋಪಿಸಿರುವ ಬಿಜೆಪಿ, ಡೈರಿಯಲ್ಲಿ ಬಿ ಎಸ್ ಯಡಿಯೂರಪ್ಪ ಬರೆದಿದ್ದಾರೆ ಎನ್ನಲಾದ ಸಾಲುಗಳಲ್ಲಿರುವುದು ಯಡಿಯೂರಪ್ಪ ಅವರ ಕೈಬರಹವಲ್ಲ ಎಂದು ಟ್ವೀಟ್ ಮಾಡಿದೆ. ಜೊತೆಗೆ ಯಡಿಯೂರಪ್ಪ ಅವರ ಕೈಬರಹದ ಕೆಲವು ಸಾಲುಗಳನ್ನೂ ಈ ಟ್ವೀಟ್ ನಲ್ಲಿ ಲಗತ್ತಿಸಿದೆ.

BJP reaction to Diary allegation from Congress

ಹೈಕಮಾಂಡಿಗೆ ಕಪ್ಪ ಕೊಟ್ಟ ಯಡಿಯೂರಪ್ಪ ವಿರುದ್ಧ ಲೋಕಪಾಲ ತನಿಖೆಗೆ ಆಗ್ರಹ ಹೈಕಮಾಂಡಿಗೆ ಕಪ್ಪ ಕೊಟ್ಟ ಯಡಿಯೂರಪ್ಪ ವಿರುದ್ಧ ಲೋಕಪಾಲ ತನಿಖೆಗೆ ಆಗ್ರಹ

"ರಣದೀಪ್ ಸುರ್ಜೇವಾಲಾ ಅವರು ಮಾಧ್ಯಮ ಮಿತ್ರರ ಅಮೂಲ್ಯ ಸಮಯವನ್ನು ಸುಳ್ಳು ಆರೋಪಕ್ಕಾಗಿ ವ್ಯರ್ಥಮಾಡಿದ್ದಾರೆ. ಈ ಆರೋಪ ತಿರುಳಿಲ್ಲದ್ದು, ಮತ್ತು ಕಾಂಗ್ರೆಸ್ಸಿಗರೇ ಸೃಷ್ಟಿಸಿದ ನಕಲಿ ಡೈರಿ ಇದು.
ಕಾಂಗ್ರೆಸ್ ಬಿಡುಗಡೆ ಮಾಡಿದ ಡೈರಿಯಲ್ಲಿರುವ ಕೈಬರಹ ಮತ್ತು ಸಹಿ ಎರಡೂ ಸುಳ್ಳು ಎಂಬುದಕ್ಕೆ ಇಲ್ಲಿದೆ ಸಾಕ್ಷಿ."ಎಂದು ಯಡಿಯೂರಪ್ಪ ಕೈಬರಹದ ಸಾಲುಗಳಿರುವ ಪ್ರತಿಯನ್ನೂ ಟ್ವಿಟ್ಟರ್ ನಲ್ಲಿ ಲಗತ್ತಿಸಿದೆ.

ಯಡಿಯೂರಪ್ಪ ಅವರು ಕಪ್ಪ ಕಾಣಿಕೆ ನೀಡಿರುವ ಬಗ್ಗೆ ಡೈರಿಯಲ್ಲಿ ಉಲ್ಲೇಖವಿದೆ. ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಸೇರಿದಂತೆ ವಿವಿಧ ನಾಯಕರಿಗೆ 1800 ಕೋಟಿ ರು ನೀಡಿದ್ದಾರೆ ಈ ಬಗ್ಗೆ ತನಿಖೆ ನಡೆಯಲಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಆಗ್ರಹಿಸಿದ್ದರು.

ಕಪ್ಪ ಕಾಣಿಕೆ ಸಿಡಿ ಪ್ರಕರಣ, ಅನಂತ್- ಯಡಿಯೂರಪ್ಪಗೆ ಹಿನ್ನಡೆಕಪ್ಪ ಕಾಣಿಕೆ ಸಿಡಿ ಪ್ರಕರಣ, ಅನಂತ್- ಯಡಿಯೂರಪ್ಪಗೆ ಹಿನ್ನಡೆ

ವಿಎಸ್ ಉಗ್ರಪ್ಪ, ಸಚಿವರಾದ ಎಂ.ಬಿ.ಪಾಟೀಲ್, ಈಶ್ವರಖಂಡ್ರೆ, ಡಾ.ಶರಣಪ್ರಕಾಶ್ ಪಾಟೀಲ್, ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಅವರು ಸುದ್ದಿಗೋಷ್ಠಿ ನಡೆಸಿ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ನಡುವಿನ ಸಂಭಾಷಣೆಯ ಸಿಡಿಯನ್ನು 2017ರಲ್ಲಿ ಬಿಡುಗಡೆ ಮಾಡಿದ್ದರು.

English summary
Bribary CD Case: BJP reacts to Congress and its spokeperson Randeep Surjewala for Diary allegation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X