ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಜೆಟ್ ಪುಸ್ತಕ ವಿತರಣೆ ಹೊಸ ವ್ಯವಸ್ಥೆಗೆ ಬಿಜೆಪಿ ವಿರೋಧ

|
Google Oneindia Kannada News

ಬೆಂಗಳೂರು, ಫೆಬ್ರವರಿ 8: ರಾಜ್ಯ ಸಮ್ಮಿಶ್ರ ಸರ್ಕಾರದ 2019-20ರ ಬಿಜೆಟ್ ಇಂದು ಮಂಡನೆಯಾಗುವ ಸಾಧ್ಯತೆ ಇದೆ. ಆದರೆ ಬಜೆಟ್ ಮುಗಿದ ಬಳಿಕವಷ್ಟೇ ಬಜೆಟ್ ಪ್ರತಿಯನ್ನು ನೀಡುವ ಕುರಿತು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತೆಗೆದುಕೊಂಡಿರುವ ನಿರ್ಧಾರಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

Karnataka Budget 2019 LIVE : ಇಂದು ಬಜೆಟ್ ಮಂಡನೆಯಾಗುತ್ತಾ?

ಬಜೆಟ್ ಭಾಷಣ ಆರಂಭಕ್ಕೂ ಮುನ್ನ ಎಲ್ಲಾ ಸದಸ್ಯರಿಗೂ ಬಜೆಟ್ ಪ್ರತಿ ನೀಡುವುದು ಸಂಪ್ರದಾಯ. ಆದರೆ ಈ ಬಾರಿ ಸಂಪ್ರದಾಯವನ್ನು ಮುರಿಯುವ ನಿರ್ಣಯವನ್ನು ಸಿಎಂ ಎಚ್‌ಡಿಕೆ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದೇ ವಿಷಯವನ್ನೇ ಇಟ್ಟುಕೊಂಡು ಬಿಜೆಪಿ ಪ್ರತಿಭಟನೆಗೆ ಹೋಗಲು ನಿರ್ಧರಿಸಿದೆ ಎನ್ನಲಾಗಿದೆ.

ಬಜೆಟ್ ಮಂಡನೆ ಬಳಿಕವೇ ಬಿಜೆಪಿಗೆ ಬಜೆಟ್ ಪ್ರತಿ: ಎಚ್‌ಡಿಕೆ ತಂತ್ರ ಬಜೆಟ್ ಮಂಡನೆ ಬಳಿಕವೇ ಬಿಜೆಪಿಗೆ ಬಜೆಟ್ ಪ್ರತಿ: ಎಚ್‌ಡಿಕೆ ತಂತ್ರ

ಹೀಗಾಗಿ ಸಿಎಂ ಎಚ್​​.ಡಿ ಕುಮಾರಸ್ವಾಮಿಯವರು ಬಜೆಟ್ ಭಾಷಣ ಆರಂಭಿಸುವ ಮುನ್ನವೇ ಸದನದಲ್ಲಿ ಬಿಜೆಪಿ ಗದ್ದಲ ಎಬ್ಬಿಸಲು ನಿರ್ಧರಿಸಿದೆ ಎನ್ನಲಾಗತ್ತಿದೆ. ಪ್ರತಿಸಲ ಮಂಡನೆಗೆ ಮುನ್ನವೇ ಬಜೆಟ್​​ ಪ್ರತಿ ಸಿಗುತ್ತಿತ್ತು, ಆದರೆ, ಈ ಬಾರಿ ಸಂಪೂರ್ಣ ಮಂಡನೆಯಾಗುವವರೆಗೂ ಸಿಎಂ ಬಜೆಟ್​​ ಪ್ರತಿ ನೀಡುವುದಿಲ್ಲ ಎಂದಿದ್ದಾರೆ.

BJP opposing government decision over budget book distribution

ಹೀಗಾಗಿ ಬಜೆಟ್ ಪ್ರತಿಗಳನ್ನು ಮುಂಚೆಯೇ ನೀಡುವೆ ಎಂದಿದ್ದ ಎಚ್‌ಡಿಕೆ ಈಗ ನಿರ್ಣಯ ಬದಲಿಸಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಎಂದು ಬಿಜೆಪಿ ಪ್ರತಿಭಟಿಸಲು ಮುಂದಾಗಿದೆ.

ಸಿಎಂ ದಿಢೀರ್ ಸುದ್ದಿಗೋಷ್ಠಿ, ಬಿಜೆಪಿಗೆ ಭಾರೀ ಶಾಕ್ ನೀಡಲು ಸಿದ್ಧತೆ?ಸಿಎಂ ದಿಢೀರ್ ಸುದ್ದಿಗೋಷ್ಠಿ, ಬಿಜೆಪಿಗೆ ಭಾರೀ ಶಾಕ್ ನೀಡಲು ಸಿದ್ಧತೆ?

ಅಲ್ಲದೇ ಬಜೆಟ್‌ಗೆ ಮುನ್ನವೇ ಪ್ರತಿಗಳನ್ನು ನೀಡಬೇಕೆಂದು ಈಗಾಗಲೇ ಯಡಿಯೂರಪ್ಪ ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಜೆಟ್ ಪ್ರತಿಗಳು ಭಾಷಣಕ್ಕೆ ಮುನ್ನವೇ ವಿತರಣೆ ಆಗಬೇಕು. ಇಲ್ಲವಾದಲ್ಲಿ ಬಿಜೆಪಿ ಗದ್ದಲ ಎಬ್ಬಿಸಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

English summary
BJP shown its anger over budget book distribution system. Government decided to distribute after the chief minister HD Kumaraswamy speech.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X