ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೆಂಕಟರಾವ್ ರಸ್ತೆ ಮರು ನಾಮಕರಣಕ್ಕೆ ಬಿಜೆಪಿ ವಿರೋಧ

|
Google Oneindia Kannada News

ಬೆಂಗಳೂರು, ಜೂ. 01 : ಚಾಮರಾಜಪೇಟೆಯ ಆಲೂರು ವೆಂಕಟರಾವ್ ರಸ್ತೆಗೆ ಟಿಪ್ಪು ಸುಲ್ತಾನ್ ಹೆಸರಿಡಬಾರದು ಎಂದು ಬಿಜೆಪಿ ಬಿಬಿಎಂಪಿ ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಟಿಪ್ಪು ಸುಲ್ತಾನ್ ಹೆಸರಿಡಲು ಎಂ.ಚಿದಾನಂದಮೂರ್ತಿ ಅವರು ವಿರೋಧ ವ್ಯಕ್ತಪಡಿಸಿದ್ದರು.

ಮಾಜಿ ಸಚಿವ ಮತ್ತು ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಸೋಮವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತಾಧಿಕಾರಿ ಟಿ.ಎಂ.ವಿಜಯ ಭಾಸ್ಕರ್ ಅವರನ್ನು ಭೇಟಿ ಮಾಡಿ ಮರು ನಾಮಕರಣದ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಮನವಿ ಸಲ್ಲಿಸಿದರು. [ವೆಂಕಟರಾವ್ ರಸ್ತೆಗೆ ಟಿಪ್ಪು ಹೆಸರೇಕೆ?]

bbmp

ಆಲೂರು ವೆಂಕಟರಾಯರು ಕನ್ನಡ ನಾಡಿನ ಕುಲಪುರೋಹಿತರು. ರಾಜ್ಯದ ಏಕೀಕರಣದಲ್ಲಿ ಅವರ ಪಾತ್ರ ಅನನ್ಯವಾದದ್ದು. ಅಂತಹ ಹಿರಿಯ ಚೇತನದ ನೆನಪಿಗೆ ಅನ್ಯಾಯ ಮಾಡುವ ಕಾರ್ಯವನ್ನು ಪಾಲಿಕೆ ಮಾಡಬಾರದು. ಇಂತಹ ಕಾರ್ಯಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ನಾಯಕರು ಆಗ್ರಹ ಪಡಿಸಿದರು.

ರಸ್ತೆಯೊಂದಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ನಮ್ಮ ವಿರೋಧವಿಲ್ಲ. ಆದರೆ, ಈಗಾಗಲೇ ಆಲೂರು ವೆಂಕಟರಾವ್ ರಸ್ತೆ ಎಂದು ನಾಮಕರಣವಾಗಿರುವ ರಸ್ತೆಗೆ ಮರು ನಾಮಕರಣ ಮಾಡುವ ಅಗತ್ಯವಿಲ್ಲ ಎಂದು ಬಿಜೆಪಿ ನಾಯಕರು ಮನವಿಯಲ್ಲಿ ತಿಳಿಸಿದ್ದಾರೆ.

ಚಿದಾನಂದಮೂರ್ತಿ ವಿರೋಧ ವ್ಯಕ್ತಪಡಿಸಿದ್ದರು : ಆಲೂರು ವೆಂಕಟರಾವ್ ರಸ್ತೆಗೆ ಟಿಪ್ಪು ಸುಲ್ತಾನ್ ಹೆಸರಿಡುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರಸ್ತಾವನೆಗೆ ಹಿರಿಯ ಸಂಶೋಧಕ ಎಂ.ಚಿದಾನಂದ ಮೂರ್ತಿ ವಿರೋಧ ವ್ಯಕ್ತಪಡಿಸಿದ್ದರು.

ಟಿಪ್ಪು ಹೆಸರಿಡುವ ಮೂಲಕ ಪಾಲಿಕೆ ಕನ್ನಡಿಗರಿಗೆ ಅವಮಾನ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದರು. 'ಟಿಪ್ಪು ಸುಲ್ತಾನ್ ಒಬ್ಬ ದೇಶದ್ರೋಹಿ. ಆತನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆಯುವುದು ನಾಚಿಕೆಗೇಡಿನ ವಿಚಾರ. ಆಲೂರು ವೆಂಕಟರಾವ್ ರಸ್ತೆಗೆ ಟಿಪ್ಪು ಹೆಸರಿಟ್ಟರೆ, ಘೋರ ಅಪಚಾರವಾಗುತ್ತದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

English summary
Bharatiya Janata Party (BJP) Karnataka leaders submited memorandum to BBMP Administrator T M Vijay Bhaskar and requested him not to rename Aloor Venkatarao road as Tippu Sultan road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X