ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಯಿಂದ ಡಿಸಿಎಂ ಆಫರ್, ಜಾರಕಿಹೊಳಿ ಸಿಡಿಸಿದ ಹೊಸ ಬಾಂಬ್!

|
Google Oneindia Kannada News

Recommended Video

ರಮೇಶ್ ಜಾರಕಿಹೊಳಿ ಬಿಜೆಪಿಯಿಂದ ಡಿಸಿಎಂ ಹುದ್ದೆಗೆ ಆಫರ್ ಬಂದಿದೆ ಎಂಬ ಬಾಂಬ್ ಸಿಡಿಸಿದ್ದು ನಿಜಾನಾ?|Oneindia Kannada

ಬೆಂಗಳೂರು, ಸೆಪ್ಟೆಂಬರ್ 18: 'ಬಿಜೆಪಿಯಿಂದ ನನಗೆ ಉಪಮುಖ್ಯಮಂತ್ರಿ ಹುದ್ದೆಯ ಆಫರ್ ಇದೆ' ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ!

ಕರ್ನಾಟಕದ ರಾಜಕೀಯವಂತೂ ಥ್ರಿಲ್ಲರ್ ಕಾದಂಬರಿ ರೀತಿಯಲ್ಲಿ ದಿನೇ ದಿನೇ ಹೊಸ ತಿರುವು ಪಡೆಯುತ್ತಿದೆ. ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದಿರುವ ಜಾರಕಿಹೊಳಿ ಸಹೋದರರು ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ.

ಸಿದ್ದರಾಮಯ್ಯ ಎದುರು ರಮೇಶ್ ಜಾರಕಿಹೊಳಿ ಇರಿಸಿದ ಮೂರು ಬೇಡಿಕೆಗಳುಸಿದ್ದರಾಮಯ್ಯ ಎದುರು ರಮೇಶ್ ಜಾರಕಿಹೊಳಿ ಇರಿಸಿದ ಮೂರು ಬೇಡಿಕೆಗಳು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಕಿಹೊಳಿ ಸಹೋದರರನ್ನು ಭೇಟಿ ಆಡಿ ಮಾತನಾಡಿದರೂ, ಅವರ ಸಂಧಾನ ಫಲನೀಡಿದಂತೆ ಕಾಣುತ್ತಿಲ್ಲ. ಸಿದ್ದರಾಮಮಯ್ಯ ಅವರೊಂದಿಗೆ ಮಾತನಾಡುವ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ತಮಗೆ ಬಿಜೆಪಿಯಿಂದ ಡಿಸಿಎಂ ಹುದ್ದೆಯ ಆಫರ್ ಇದೆ ಎಂದು ಹೇಳಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಜಾರಕಿಹೊಳಿ ಸಹೋದರರಿಗೆ ಸಿದ್ದರಾಮಯ್ಯ 5 ಪ್ರಶ್ನೆಗಳುಜಾರಕಿಹೊಳಿ ಸಹೋದರರಿಗೆ ಸಿದ್ದರಾಮಯ್ಯ 5 ಪ್ರಶ್ನೆಗಳು

ಕಾಂಗ್ರೆಸ್ ನಿಂದಲೂ ತಾವು ಅದೇ ಹುದ್ದೆಯನ್ನು ಅಪೇಕ್ಷಿಸುತ್ತಿರುವುದಾಗಿ ಅವರು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರೊಂದಿಗಿನ ಸಂದಾನ ವಿಫಲವಾದ ಕಾರಣ ರಮೇಶ್ ಜಾರಕಿಹೊಳಿ ಇಂದು ರಾಜೀನಾಮೆ ನೀಡಬಹುದು ಎಂಬ ವದಂತಿಯೂ ಹಬ್ಬಿದೆ. ಅಕಸ್ಮಾತ್ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದೇ ಆದಲ್ಲಿ, ಅವರೊಂದಿಗೆ ಗುರುತಿಸಿಕೊಂದಿರುವ 18 ಕಾಂಗ್ರೆಸ್ ಶಾಸಕರೂ ಕಾಂಗ್ರೆಸ್ ತೊರೆಯುತ್ತಾರಾ ಎಂಬುದು ಈಗ ಕುತೂಹಲ ಕೆರಳಿಸಿರುವ ವಿಷಯ.

ಬಿಜೆಪಿಯಿಂದ ಡಿಸಿಎಂ ಹುದ್ದೆಗೆ ಆಫರ್ ನಿಜವೇ?

ಬಿಜೆಪಿಯಿಂದ ಡಿಸಿಎಂ ಹುದ್ದೆಗೆ ಆಫರ್ ನಿಜವೇ?

ರಮೇಶ್ ಜಾರಕಿಹೊಳಿ ಅವರಿಗೆ ಬಿಜೆಪಿಯಿಂದ ಡಿಸಿಎಂ ಹುದ್ದೆಯ ಆಫರ್ ಬಂದಿದ್ದು ನಿಜವೇ? ಅಕಸ್ಮಾತ್ ಜಾರಕಿಹೊಳಿ ಸಹೋದರರು ಕಾಂಗ್ರೆಸ್ ತೊರೆದು ತಮ್ಮ 18 ಶಾಸಕರೊಂದಿಗೆ ಬಿಜೆಪಿಗೆ ಬೆಂಬಲ ನೀಡಿದರೆ ಬಿಜೆಪಿ ಸರ್ಕಾರ ರಚಿಸಬಹುದು. ಆದರೆ ಆ ನಂತರ ರಮೇಶ್ ಜಾರಕಿಹೊಳಿ ಅವರಿಗೆ ಡಿಸಿಎಂ ಹುದ್ದೆ ನೀಡುವುದಕ್ಕೆ ಬಿಜೆಪಿ ಮುಖಂಡರು ಒಪ್ಪುತ್ತಾರಾ? ಡಿಸಿಎಂ ಹುದ್ದೆಯ ಆಕಾಂಕ್ಷಿಗಳು ಸುಮ್ಮನಿರುತ್ತಾರಾ? ಬಂಡಾಯ ಶಮನಕ್ಕಾಗಿ ಈ ಮೊದಲೂ ಇಬ್ಬರು ಉಪಮುಖ್ಯಮಂತ್ರಿಗಳನ್ನು ಮಾಡಿದ ಪಕ್ಷ ಬಿಜೆಪಿ. ಹಾಗಿರುವಾಗ ಆ ಸ್ಥಾನದ ಮೇಲೆ ಕಣ್ಣಿಟ್ಟವರು ಈಗ ಬಿಜೆಪಿಗೆ ಸೇರಿದವರಿಗೆ ಆಯಕಟ್ಟಿನ ಹುದ್ದೆ ನೀಡುವುದಕ್ಕೆ ಒಪ್ಪುತ್ತಾರಾ?

ರಮೇಶ್ ಜಾರಕಿಹೊಳಿ ಮಾತಿನ ಅರ್ಥವೇನು?

ರಮೇಶ್ ಜಾರಕಿಹೊಳಿ ಮಾತಿನ ಅರ್ಥವೇನು?

ಅಷ್ಟಕ್ಕೂ, 'ಬಿಜೆಪಿ ಡಿಸಿಎಂ ಹುದ್ದೆಯ ಆಫರ್ ನೀಡಿದೆ' ಎಂಬ ರಮೇಶ್ ಜಾರಕಿಹೊಳಿ ಮಾತಿನ ಅರ್ಥವೇನು? ಈ ಬೆದರಿಕೆಗೆ ಬಗ್ಗಿಯಾದರೂ ಕಾಂಗ್ರೆಸ್ ತಮಗೆ ಆಯಕಟ್ಟಿನ ಹುದ್ದೆ ನೀಡಬಹುದು ಎಂಬುದೆ? ಅಥವಾ ತಾವು ಕಾಂಗ್ರೆಸ್ ತೊರೆದರೆ ತಮಗೇನೂ ನಷ್ಟವಿಲ್ಲ ಎಂಬುದೆ?

ಜಾರಕಿಹೊಳಿ ಸಹೋದರರು ಬಿಜೆಪಿ ಸೇರಿದರೆ ಆಗುವ 5 ಲಾಭಗಳು!ಜಾರಕಿಹೊಳಿ ಸಹೋದರರು ಬಿಜೆಪಿ ಸೇರಿದರೆ ಆಗುವ 5 ಲಾಭಗಳು!

18 ಶಾಸಕರು ಜಾರಕಿಹೊಳಿ ಅವರನ್ನು ಅನುಸರಿಸುತ್ತಾರಾ?

18 ಶಾಸಕರು ಜಾರಕಿಹೊಳಿ ಅವರನ್ನು ಅನುಸರಿಸುತ್ತಾರಾ?

ತಮಗೆ 18 ಜನ ಶಾಸಕರ ಬೆಂಬಲವಿದೆ ಎಂದು ಜಾರಕಿಹೊಳಿ ಸಹೋದರರು ಹೇಳಿದ್ದಾರೆ. ಅಕಸ್ಮಾತ್ ಇಂದು ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದೇ ಆದಲ್ಲಿ ಆ 18 ಶಾಸಕರೂ ರಮೇಶ್ ಜಾರಕಿಹೊಳಿ ಅವರನ್ನು ಅನುಸರಿಸುತ್ತಾರಾ ಎಂಬುದು ಈಗಿರುವ ಪ್ರಶ್ನೆ.

ರಾಹುಲ್ ಗಾಂಧಿ-ಸಿದ್ದರಾಮಯ್ಯ ಭೇಟಿಗೆ ಸಮಯ ನಿಗದಿ

ರಾಹುಲ್ ಗಾಂಧಿ-ಸಿದ್ದರಾಮಯ್ಯ ಭೇಟಿಗೆ ಸಮಯ ನಿಗದಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸೆ.19 ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿಯಾಗಲಿದ್ದು, ರಾಜ್ಯದ ರಾಜಕೀಯ ಬೆಳವಣಿಗೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಭಾನುವಾರದಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಜಾರಕಿಹೊಳಿ ಸಹೋದರರ ಬಂಡಾಯ ಶಮನ ಮಾಡುವಂತೆ ಕೋರಿದ್ದರು. ಯುರೋಪ್ ಪ್ರವಾಸದಲ್ಲಿದ್ದ ಸಿದ್ದರಾಮಯ್ಯ ವಾಪಸ್ ಆಗಮಿಸುತ್ತಿದ್ದಂತೆಯೇ ಬಿರುಸಿನ ರಾಜಕೀಯ ಬೆಳವಣಿಗೆಗಳು ನಡೆದವು. ಸಿದ್ದರಾಮಯ್ಯ ಅವರು ಜಾರಕಿಹೊಳಿ ಸಹೋದರರನ್ನು ಭೇಟಿಯಾಗಿ ಮಾತುಕತೆ ನಡೆಸಿದರೂ ಸಂಧಾನ ವಿಫಲವಾದಂತೆ ಅನ್ನಿಸುತ್ತಿದೆ. ಆದ್ದರಿಂದ ಬುಧವಾರ ರಾಹುಲ್ ಗಾಂಧಿಯವರನ್ನು ಸಿದ್ದರಾಮಯ್ಯ ಭೇಟಿಯಾಗಲಿದ್ದು, ಈ ಭೇಟಿ ಕುತೂಹಲ ಕೆರಳಿಸಿದೆ.

ಜಾರಕಿಹೊಳಿ-ಡಿಕೆಶಿ ವಾರ್

ಜಾರಕಿಹೊಳಿ-ಡಿಕೆಶಿ ವಾರ್

ಪಿಎಲಲ್ ಡಿ ಬ್ಯಾಂಕ್ ಚುನಾವಣೆಯ ಸಮಯದಲ್ಲಿ ಬೆಳಗಾವಿ ರಾಜಕೀಯದಲ್ಲಿ ಕೈಯಾಡಿಸಿದ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ನಡೆ ಜಾರಕಿಹೊಳಿ ಸಹೋದರರಿಗೆ ಇಷ್ಟವಾಗಿಲ್ಲ. ಇಷ್ಟೂ ರಾಜಕೀಯ ಬೆಳವಣಿಗೆಗೆ ಕಾರಣವೇ ಅದು. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬಣ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಗೆಲ್ಲುವ ಹಿಂದೆಯೂ ಡಿಕೆಶಿ ಕೈವಾಡವಿದೆ ಎಂಬುದು ಜಾರಕಿಹೊಳಿ ಸಹೋದರರ ಆರೋಪ.

ರಮೇಶ್ ಜಾರಕಿಹೊಳಿ ನನ್ನ ಆಪ್ತ ಸ್ನೇಹಿತರು : ಡಿ.ಕೆ.ಶಿವಕುಮಾರ್ರಮೇಶ್ ಜಾರಕಿಹೊಳಿ ನನ್ನ ಆಪ್ತ ಸ್ನೇಹಿತರು : ಡಿ.ಕೆ.ಶಿವಕುಮಾರ್

English summary
BJP has offered me Deputy chief minister Post, Congress MLA from Gokak constituency and minister Ramesh Jarkiholi told.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X