• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಕ್ರಮ ಬಾರ್, ಪಾರ್ಲರ್ ವಿರುದ್ಧ ದೂರು ಸಲ್ಲಿಸಲು ಬಿಜೆಪಿ ಸಂಸದರ ಕರೆ

|

ಬೆಂಗಳೂರು, ಸೆ. 15: ವಸತಿ ಪ್ರದೇಶಗಳಲ್ಲಿನ ಅಕ್ರಮ ವಾಣಿಜ್ಯ ಚಟುವಟಿಕೆಗಳ ವಿರುದ್ಧ ಹೋರಾಡಲು ಬೆಂಗಳೂರು ನಾಗರಿಕರಿಗೆ ನೆರವಾಗಲು, ಸಂಸದರಾದ ರಾಜೀವ್ ಚಂದ್ರಶೇಖರ್ ಮತ್ತು ಪಿಸಿ ಮೋಹನ್, ತಮ್ಮ ಪ್ರದೇಶಗಳಲ್ಲಿನ ಅಕ್ರಮ ಬಾರ್, ಪಬ್‌ಗಳು, ಪಾರ್ಲರ್‌ಗಳ ವಿರುದ್ಧ ಬಿಬಿಎಂಪಿಗೆ ದೂರು ಸಲ್ಲಿಸುವಂತೆ ಕೋರಿದ್ದಾರೆ. 7 ದಿನಗಳಲ್ಲಿ ಬಿಬಿಎಂಪಿ ಕ್ರಮ ತೆಗೆದುಕೊಳ್ಳಲು ವಿಫಲವಾದರೆ, ಸದರಿ ದೂರುಗಳ ವಿಷಯದಲ್ಲಿ ಮಧ್ಯಪ್ರವೇಶಿಸುವ ಭರವಸೆ ನೀಡಿದ್ದಾರೆ.

ವಸತಿ ಪ್ರದೇಶಗಳಲ್ಲಿ ಅಕ್ರಮ ವಾಣಿಜ್ಯ ಚಟುವಟಿಕೆಗಳ ಕುರಿತಾದ ನಾಗರಿಕರ ಅಹವಾಲುಗಳಿಗೆ ಸೂ ಕ್ತವಾಗಿ ಸ್ಪಂದಿಸಿ, ನಿರ್ಣಾಯಕವಾಗಿ ಕಾರ್ಯನಿರ್ವಹಿಸುವುದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಜವಾಬ್ದಾರಿಯಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿಗಳು ನಡೆಸಿದ ಸಭೆಯಲ್ಲಿಉಪಮುಖ್ಯಮಂತ್ರಿ ಡಾ|| ಅಶ್ವಥ್ ನಾರಾಯಣ್, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಟಿ.ಎಂ ಮತ್ತು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಉಪಸ್ಥಿತರಿದ್ದು, ನಗರದಲ್ಲಿ ವ್ಯಾಪಕವಾಗಿರುವ ಅಕ್ರಮ ವಾಣಿಜ್ಯ ಚಟುವಟಿಕೆಗಳ ಕುರಿತು ನಾನು ಹಾಗು ನಗರದ ಇತರೆ ಜನಪ್ರತಿನಿಧಿಗಳು ಪ್ರಸ್ತಾಪಿಸಿದ್ದೆವು ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಬೆಂಗಳೂರು: ಈ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮದ್ಯ ಮಾರಾಟ ನಿಷೇಧ

ದೂರು ನೀಡಲು ಇಚ್ಛಿಸುವವರು ಸಂಸದ ಪಿಸಿ ಮೋಹನ್, ರಾಜೀವ್ ಚಂದ್ರಶೇಖರ್ ಅವರ ಕಚೇರಿಯನ್ನು ನೇರವಾಗಿ ಸಂಪರ್ಕಿಸಬಹುದು ಅಥವಾ ಇಮೇಲ್ ಕಳಿಸಬಹುದು. ಸರ್ಕಾರವನ್ನು ಉತ್ತರದಾಯಿಯಾಗಿಸುವ ಈ ಉಪಕ್ರಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 'ನಗರದ ಭವಿಷ್ಯ ನಾಗರಿಕರು ನಿರ್ಧರಿಸಬೇಕು' ಮತ್ತು 'ಸ್ವಚ್ಛತೆಯೇ ಸೇವೆ' ಧ್ಯೇಯೋದ್ದೇಶಗಳಿಗೆ ಪೂರಕವಾಗಿದೆ ಎಂದಿದ್ದಾರೆ.

ಮುಖ್ಯಮಂತ್ರಿಗಳು ಬಿಬಿಎಂಪಿ ಆಯುಕ್ತರಿಗೆ ನಿಯಮಬಾಹಿರವಾಗಿ ನಡೆಸಲಾಗುತ್ತಿರುವ ಅಕ್ರಮ ಬಾರ್ ಗಳು, ಪಬ್ ಗಳು, ಮಸಾಜ್ ಪಾರ್ಲರ್ ಗಳು, ಅಕ್ರಮ ರೆಸ್ಟೋರೆಂಟ್ ಗಳು ಸೇರಿದಂತೆ ಅಕ್ರಮ ವಾಣಿಜ್ಯ ಚಟುವಟಿಕೆಗಳ ವಿರುದ್ಧ ಕಾನೂನಿನ ಪ್ರಕಾರ ಕೂಡಲೇ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ನಿರ್ದೇಶನ ನೀಡಿದ್ದಾರೆ.

ಬಿಬಿಎಂಪಿ ಜಂಟಿ ಆಯುಕ್ತರು ಇದಕ್ಕೆ ಜವಾಬ್ದಾರರಾಗಿರುತ್ತಾರೆಂಬುದು ಕೂಡ ಅಂದೆ ಸ್ಪಷ್ಟವಾಗಿದೆ. ನಮ್ಮ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಬೆಂಗಳೂರಿನಲ್ಲಿ ಸ್ವಚ್ಛ, ನಾಗರಿಕ-ಕೇಂದ್ರಿತ ಮತ್ತು ಉತ್ತರದಾಯಿಯಾದ ಆಡಳಿತ ನೀಡುವ ತಮ್ಮ ಬದ್ಧತೆಯನ್ನು ಕೂಡ ಪುನರುಚ್ಛರಿಸಿದ್ದಾರೆ.

ಓಣಂ ಸೀಸನ್ ದಾಖಲೆ: ಮಲ್ಲುಗಳ ಮದ್ಯ ಸೇವನೆ ಚಟಕ್ಕೆ ಮಿತಿಯೇ ಇಲ್ಲ!

ತಮ್ಮ ಪ್ರದೇಶದಲ್ಲಿನ ಅಕ್ರಮ ವಾಣಿಜ್ಯ ಚಟುವಟಿಕೆಗಳು/ಸಂಸ್ಥೆಗಳು, ಕಾನೂನುಬದ್ಧ ವಾಣಿಜ್ಯ ಸಂಸ್ಥೆಯಾಗಿದ್ದರೂ ಕಸದ ಸಮಸ್ಯೆ, ಶಬ್ದಮಾಲಿನ್ಯ ಹಾಗು ಕಾನೂನು ಸುವ್ಯವಸ್ಥೆಯನ್ನು ಉಲ್ಲಂಘಿಸಿ ಸಾರ್ವಜನಿಕರಿಗೆ ಉಪದ್ರವ ಉಂಟುಮಾಡುತ್ತಿರುವವರ ವಿರುದ್ಧ ನಾಗರಿಕರು ಮತ್ತು ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು (RWA) ವಲಯ ಜಂಟಿ ಆಯುಕ್ತರಿಗೆ ಮತ್ತು ಪೋಲೀಸ್ ಠಾಣೆಗಳಿಗೆ ಲಿಖಿತ ದೂರುಗಳನ್ನು ಸಲ್ಲಿಸುವಂತೆ ಹಾಗು ಅದರ ಪ್ರತಿಯನ್ನು ಬಿಬಿಎಂಪಿ ಆಯುಕ್ತರಿಗೂ ಸಲ್ಲಿಸುವಂತೆ ಕೋರಿದ್ದಾರೆ.

English summary
BJP Member of Parliament Rajeev Chandrasekhar, PC Mohan has urged citizen to complaint about any illegal Bars, Pubs and parlour in their constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more