ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಬಗ್ಗೆ ರೆಡ್ಡಿ ಹೇಳಿಕೆಗೆ ಬಿಜೆಪಿ ಶಾಸಕರಿಂದಲೇ ವಿರೋಧ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 31: ಸಿದ್ದರಾಮಯ್ಯ ಅವರನ್ನು ಟೀಕಿಸುವ ಆತುರಲ್ಲಿ ಅವರ ವೈಯಕ್ತಿಕ ವಿಷಯಗಳನ್ನು ಜನಾರ್ದನ ರೆಡ್ಡಿ ಪ್ರಸ್ತಾಪಿಸಿರುವುದು ಸರಿಯಲ್ಲ ಎಂದು ಶಾಸಕ ರವಿಸುಬ್ರಹ್ಮಣ್ಯ ಹೇಳಿದ್ದಾರೆ.

ಸರ್ದಾರ್ ಪಟೇಲ್ ಜನ್ಮದಿನದ ಅಂಗವಾಗಿ ಜಯನಗರದಲ್ಲಿ ಬುಧವಾರ ನಡೆದ ಬಿಜೆಪಿ ನಾಯಕರ ನೇತೃತ್ವದ ಏಕತಾ ಓಟದಲ್ಲಿ ಪಾಲ್ಗೊಂಡು ಮಾತನಾಡಿದರು.ಮಾಜಿ‌ ಸಚಿವ ಜನರ್ದಾನರೆಡ್ಡಿ, ಸಿದ್ದರಾಮಯ್ಯ ಅವರ ವೈಯಕ್ತಿಕ ವಿಷಯ ಪ್ರಸ್ತಾಪಿಸಿ ಟೀಕಿಸಿದ್ದಾರೆ.ಯಾರೇ ಆದರು ಯಾರದೇ ವೈಯಕ್ತಿಕ ವಿಚಾರದಲ್ಲಿ ತಲೆ ಹಾಕಬಾರದು ಅದು ಸೂಕ್ತವೂ ಅಲ್ಲ. ರಾಜಕೀಯದಲ್ಲಿ ವೈಯಕ್ತಿಕ ವಿಚಾರವನ್ನು ತರಬಾರದು ಎಂದರು.

ಜನಾರ್ದನ ರೆಡ್ಡಿ ಪಾಪಕ್ಕೆ ಮಕ್ಕಳಿಗೆ ಶಿಕ್ಷೆ ಆಗದಿರಲಿ: ಸಿದ್ದರಾಮಯ್ಯ ಟ್ವೀಟ್ ಜನಾರ್ದನ ರೆಡ್ಡಿ ಪಾಪಕ್ಕೆ ಮಕ್ಕಳಿಗೆ ಶಿಕ್ಷೆ ಆಗದಿರಲಿ: ಸಿದ್ದರಾಮಯ್ಯ ಟ್ವೀಟ್

ಸಿದ್ದರಾಮಯ್ಯ ಮಾಡಿದ ಪಾಪಕ್ಕೆ ಅವರ ಮಗನ ಸಾವಾಗಿದೆ ಎಂದು ಜನಾರ್ದನ ರೆಡ್ಡಿ ಹೇಳಿದ್ದರು. ನಾನು ಮಾತನಾಡಿರುವುದರಲ್ಲಿ ತಪ್ಪಿದ್ದರೆ ಕ್ಷಮೆ ಇರಲಿ ಎಂದು ರೆಡ್ಡಿ ಅವರು ಹೇಳಿದ್ದಾರೆ ನನ್ನ ಹೇಳಿಕೆಯನ್ನು ತಿರುಚಿದ್ದಾರೆ ಎಂದೂ ಹೇಳಿದ್ದಾರೆ.

ಮಾಧ್ಯಮಗಳು ಅವರ ಕೆಲಸವನ್ನು ಮಾಡಿದ್ದಾರೆ.ಜನಾರ್ದನರೆಡ್ಡಿ ಹೇಳಿದ್ದನ್ನೂ ಅವರು ತೋರಿಸಿದ್ದಾರೆ.ನಂತರ ಅವರು ಕ್ಷಮೆಯಾಚಿಸಿದ್ದನ್ನು ತೋರಿಸಿದ್ದಾರೆ.ಇದರಲ್ಲಿ ಯಾರನ್ನು ದೂರುವುದು ಸರಿಯಿಲ್ಲ ಇದನ್ನು ಇಲ್ಲಿಗೆ ಬಿಡುವುದು ಒಳಿತು ಎಂದಿದ್ದಾರೆ.

ಮಗನ ಸಾವಿನ ಕುರಿತ ಹೇಳಿಕೆಗೆ ಸಿದ್ದರಾಮಯ್ಯ ಮಾರ್ಮಿಕ ಪ್ರತಿಕ್ರಿಯೆ ಮಗನ ಸಾವಿನ ಕುರಿತ ಹೇಳಿಕೆಗೆ ಸಿದ್ದರಾಮಯ್ಯ ಮಾರ್ಮಿಕ ಪ್ರತಿಕ್ರಿಯೆ

ಬೆಂಗಳೂರು ಮಹಾನಗರ ಬಿಜೆಪಿ ಅಧ್ಯಕ್ಷ ಪಿ.ಎನ್.ಸದಾಶಿವ, ರಾಜ್ಯ ಕಾರ್ಯದರ್ಶಿ ಜಯದೇವ್, ರಾಜ್ಯ ಬಿಜೆಪಿ ಖಜಾಂಚಿ ಸುಬ್ಬಣ್ಣ,ಶಾಸಕ ಉದಯ ಗರುಡಾಚಾರ್ ಅವರ ನೇತೃತ್ವದಲ್ಲಿ ಜಯನಗರ ಚಂದ್ರಗುಪ್ತ ಮೌರ್ಯ ಕ್ರೀಡಾಂಗಣದಿಂದ ರಾಷ್ಟ್ರೀಯ ಏಕತಾ ದಿನಾಚರಣೆ ಅಂಗವಾಗಿ ಏಕತಾ ಓಟ ನಡೆಯಿತು.ಚಂದ್ರಗುಪ್ತ ಮೌರ್ಯ ಸರ್ಕಲ್ ನಿಂದ ಪ್ರಾರಂಭವಾದ ಓಟ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಮೂಲಕವಾಗಿ ಸಾಗಿ ಚಂದ್ರಗುಪ್ತ ಮೌರ್ಯ ಸರ್ಕಲ್ ನಲ್ಲಿ ಮುಕ್ತಾಯವಾಯಿತು.

ಸಿದ್ದರಾಮಯ್ಯ ಅವರ ವೈಯಕ್ತಿಕ ವಿಚಾರ ಬೇಡ

ಸಿದ್ದರಾಮಯ್ಯ ಅವರ ವೈಯಕ್ತಿಕ ವಿಚಾರ ಬೇಡ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸುವ ಬರದಲ್ಲಿ ಅವರ ಮಗ ಅಥವಾ ಅವರ ವೈಯಕ್ತಿಕ ವಿಚಾರವನ್ನು ತರುವುದು ತಪ್ಪು ಇದನ್ನು ಯಾರು ಮಾಡಿದರೂ ತಪ್ಪೇ ಎಂದು ಶಾಸಕ ರವಿಸುಬ್ರಹ್ಮಣ್ಯ ಹೇಳಿದರು.

ವಿರೋಧಿ ಬಣದ ನಾಯಕನ ಮಗನ ಸಾವು ಚುನಾವಣಾ ಸರಕಾಗಿದೆ

ವಿರೋಧಿ ಬಣದ ನಾಯಕರ ಮಗನ ಸಾವೂ ಚುನಾವಣಾ ಸಂದರ್ಭದಲ್ಲಿ ಪ್ರಚಾರದ ಸರಕಾಗಿರುವುದು ಅತ್ಯಂತ ಅಮಾನವೀಯ. ಮಗನನ್ನು ಕಳೆದುಕೊಂಡ ಆ ಸಂಕಟ ಯಾರಿಗೂ ಬರದಿರಲಿ.‌ ಮನುಷ್ಯತ್ವ ಕಳೆದುಕೊಳ್ಳದಿರೋಣ. ಎಂದು ಶಾಸಕ ಸುರೇಶ್ ಕುಮಾರ್ ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಬಹಿರಂಗ ಚರ್ಚೆಗೆ ನೀವೇ ಸ್ಥಳ ನಿಗದಿ ಮಾಡಿ ರೆಡ್ಡಿಗೆ ಸಿದ್ದರಾಮಯ್ಯ ಸವಾಲು ಬಹಿರಂಗ ಚರ್ಚೆಗೆ ನೀವೇ ಸ್ಥಳ ನಿಗದಿ ಮಾಡಿ ರೆಡ್ಡಿಗೆ ಸಿದ್ದರಾಮಯ್ಯ ಸವಾಲು

ಜನಾರ್ದನ ರೆಡ್ಡಿ ಪಾಪಕ್ಕೆ ಮಕ್ಕಳಿಗೆ ಶಿಕ್ಷೆಯಾಗುವುದು ಬೇಡ

ಜನಾರ್ದನ ರೆಡ್ಡಿ ಪಾಪಕ್ಕೆ ಮಕ್ಕಳಿಗೆ ಶಿಕ್ಷೆಯಾಗುವುದು ಬೇಡ

ಮಾಜಿ ಸಚಿವ ಜನಾರ್ದನರೆಡ್ಡಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ವಯಕ್ತಿಕ ವಾಗ್ದಾಳಿ ತಾರಕಕ್ಕೇರಿದ್ದು, ಪರಸ್ಪರ ವಯಕ್ತಿಕ ದೋಷಾರೋಪಣೆ ನಂತರ ಇದೀಗ ಸಿದ್ದರಾಮಯ್ಯ ತಮ್ಮ ಪುತ್ರನ ಸಾವಿನ ಬಗೆಗೆ ನೀಡಿದ್ದ ಹೇಳಿಕೆ ಕುರಿತಂತೆ ಜನಾರ್ದನ ರೆಡ್ಡಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು.

ನಾಸ್ತಿಕರಾಗಿದ್ದ ಸಿದ್ದರಾಮಯ್ಯ ದೇವರನ್ನು ನಂಬುವುದೇ?

ಹಿಂದೂ ವಿರೋಧಿ ಮತ್ತು ನಾಸ್ತಿಕರಾಗಿದ್ದ ನೀವು ಇತ್ತೀಚಿನ ದಿನಗಳಲ್ಲಿ ದೇವರನ್ನು ನಂಬುತ್ತಿರುವುದು ನನಗೆ ಬಹಳ ಖುಷಿ ಕೊಟ್ಟಿದೆ. ನಿಮಗೆ ಸದ್ಬುದ್ಧಿ ಕೊಡಲಿಯೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರಡ್ಡಿ ಟ್ವಿಟ್ಟರ್‌ನಲ್ಲಿ ತಿರುಗೇಟು ನೀಡಿದ್ದಾರೆ.

ನಿಮ್ಮ ಬಗ್ಗೆ ನಿಮ್ಮ ಸಂಸದರೇ ಬರೆದ ಪುಸ್ತಕ ಓದಿ ಜನಾರ್ದನ ರೆಡ್ಡಿ: ಸಿದ್ದರಾಮಯ್ಯ ಬಿಟ್ಟ ಬಾಣನಿಮ್ಮ ಬಗ್ಗೆ ನಿಮ್ಮ ಸಂಸದರೇ ಬರೆದ ಪುಸ್ತಕ ಓದಿ ಜನಾರ್ದನ ರೆಡ್ಡಿ: ಸಿದ್ದರಾಮಯ್ಯ ಬಿಟ್ಟ ಬಾಣ

English summary
Bjp MLAs have strongly opposed statement by former minister Janardhan Reddy on death of former chief minister Siddaramaih's son. Former minister Sureshkumar and MLA Ravi Subrahmanya have said that the personal comment on any body wouldn't be tolerated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X