ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರೋಗ್ಯ ಸಚಿವ ಶ್ರೀರಾಮುಲು ಖಾತೆ ಬದಲಾವಣೆ: ಅಸಮಾಧಾನ ಸ್ಫೋಟ!

|
Google Oneindia Kannada News

ಬೆಂಗಳೂರು, ಅ. 12: ರಾಜ್ಯ ಸಚಿವ ಸಂಪುಟ ಪುನರ್ ರಸಚನೆ ಕಸರತ್ತು ನಡೆದಿರುವಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಖಾತೆ ಬದಲಾವಣೆ ಮಾಡಿರುವುದಕ್ಕೆ ಅಸಮಾಧಾನ ಉಂಟಾಗಿದೆ. ತಮ್ಮ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆರೋಗ್ಯ ಸಚಿವ ಶ್ರೀರಾಮುಲು ಅವರು ಚರ್ಚೆ ನಡೆಸಲಿದ್ದಾರೆ ಎಂಬ ಮಾಹಿತಿಯಿದೆ. ಇದೇ ಸಂದರ್ಭದಲ್ಲಿ ಸಂಪುಟ ಪುನರ್ ರಚನೆಗೂ ಮುನ್ನ ಸಿಎಂ ಯಡಿಯೂರಪ್ಪ ಅವರ ತೀರ್ಮಾನಕ್ಕೆ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದ ಹಲವು ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಶ್ರೀರಾಮುಲು ಅವರ ಖಾತೆ ದಿಢೀರ್ ಬದಲಾವಣೆಗೆ ಬೇಸರ ವ್ಯಕ್ತವಾಗಿದೆ. ಖಾತೆ ಬದಲಾವಣೆಗೆ ಮೊದಲು ನಿಮ್ಮಲ್ಲಿ ವಿಚಾರಿಸಿದ್ದಾರಾ ಎಂದು ಶ್ರೀರಾಮುಲು ಅವರಿಗೆ ಹಲವು ಶಾಸಕರು ಕೇಳಿದ್ದಾರಂತೆ. ಕೊರೊನಾ ವೈರಸ್ ಆರಂಭವಾದಾಗ ಎಲ್ಲ ಸಚಿವರು ಮನೆ ಸೇರಿದ್ದರು. ಆ ಸಂದರ್ಭದಲ್ಲಿ ಅಪಾಯ ಮೈಮೇಲೆ ಎಳೆದುಕೊಂಡು ರಾಜ್ಯದ್ಯಾಂತ ಪ್ರವಾಸ ಮಾಡಿದ್ದರಿ. ಕೋವಿಡ್ ಆಸ್ಪತ್ರೆಗಳಿಗೆ ಯಾವ ಸಚಿವರೂ ಭೇಟಿ ನೀಡಿದ ಸಂದರ್ಭದಲ್ಲಿ ಬಳ್ಳಾರಿ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಕೊರೊನಾ ಪಾಸಿಟಿವ್ ಆದವರನ್ನು ಭೇಟಿ ಮಾಡಿ ಆತ್ಮವಿಶ್ವಾಸ ತುಂಬುವ ಪ್ರಯತ್ನವನ್ನು ಮಾಡಿದ್ದೀರಿ ಎಂದು ಬಳ್ಳಾರಿ ಮೂಲದ ಶಾಸಕರು ಶ್ರೀರಾಮುಲು ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದೆ.

ಖಾತೆ ಬದಲಾವಣೆ: ರಾಜೀನಾಮೆಗೆ ಮುಂದಾದ ಸಚಿವ ಶ್ರೀರಾಮುಲು?ಖಾತೆ ಬದಲಾವಣೆ: ರಾಜೀನಾಮೆಗೆ ಮುಂದಾದ ಸಚಿವ ಶ್ರೀರಾಮುಲು?

ಶಾಸಕರ ಅಸಮಾಧಾನ

ಶಾಸಕರ ಅಸಮಾಧಾನ

ನಿಮಗೆ ಕೊರೊನಾ ವೈರಸ್ ಪಾಸಿಟಿವ್ ಆದಾಗ ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುವ ಮೂಲಕ ಎಲ್ಲರಿಗೂ ಮಾದರಿ ಆಗಿದ್ದೀರಿ. ಈಗ ಈಗ ಏಕಾಏಕಿ ನಮ್ಮನ್ನು ಯಾಕೇ ಬದಲಾವಣೆ ಮಾಡಿದ್ದಾರೆ ಎಂದು ಶಾಸಕರು ಆರೋಗ್ಯ ಸಚಿವ ಶ್ರೀರಾಮುಲು ಅವರನ್ನು ಪ್ರಶ್ನೆ ಮಾಡಿದ್ದಾರೆ.

ಖಾತೆ ಬದಲಾವಣೆ ನನಗೂ ಗೊತ್ತಿಲ್ಲ

ಖಾತೆ ಬದಲಾವಣೆ ನನಗೂ ಗೊತ್ತಿಲ್ಲ

ಈ ಬಗ್ಗೆ ಶಾಸಕರ ಪ್ರಶ್ನೆಗೆ ಪ್ರತಿಕ್ರಿಯೆ ಕೊಟ್ಟಿರುವ ಶ್ರೀರಾಮುಲು ಅವರು, ಖಾತೆ ಬದಲಾವಣೆ ವಿಚಾರ ನನಗೂ ಗೊತ್ತಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ. ಆಮೇಲೆ ನೋಡೋನ ಎಂದು ಶಾಸಕರಿಗೆ ಶ್ರೀರಾಮುಲು ತಿಳಿಸಿದ್ದಾರೆ ಎನ್ನಲಾಗಿದೆ.

ಇಲಾಖೆಯಲ್ಲಿ ಹಸ್ತಕ್ಷೇಪ?

ಇಲಾಖೆಯಲ್ಲಿ ಹಸ್ತಕ್ಷೇಪ?

ಜೊತೆಗೆ ಆರೋಗ್ಯ ಇಲಾಖೆ ಖಾತೆಯಲ್ಲಿ ವಿಪರೀತ ಹಸ್ತಕ್ಷೇಪ ಆಗುತ್ತಿತ್ತು ಎಂಬ ವಿಚಾರವನ್ನು ಆ ಶಾಸಕರ ಬಳಿ ಶ್ರೀರಾಮುಲು ಹಂಚಿಕೊಂಡಿದ್ದಾರೆ ಎಂಬ ಮಾಹಿತಿಯಿದೆ. ಸುಗಮ ಆಡಳಿತಕ್ಕೆ ಖಾತೆಯ ಸಚಿವನಾಗಿ ವರ್ಗಾವಣೆ ಮಾಡಲು ಮೇಲಿನವರ ಅನುಮತಿ ಬೇಕಾಗುತ್ತಿತ್ತು. ಈಗ ಆರೋಗ್ಯ ಖಾತೆ ಬೇಡವೇ ಬೇಡ ಬಿಡಿ ಎಂದು ಶ್ರೀರಾಮುಲು ಹೇಳಿದ್ದಾರೆ ಎನ್ನಲಾಗಿದೆ.

Recommended Video

ಮನೆ ಮುಂದೆ ಗಾಂಜಾ ಗಿಡ, ಖತರ್ನಾಕ್ ಕಳ್ಳರು | Oneindia Kannada
ಅಸಮಾದಾನವಿಲ್ಲ

ಅಸಮಾದಾನವಿಲ್ಲ

ಇದೇ ಸಂದರ್ಭದಲ್ಲಿ ಹೆಚ್ಚುವರಿ ಖಾತೆಯನ್ನು ವಾಪಾಸ್ ಪಡೆದಿದ್ದಕ್ಕೆ ಯಾವುದೇ ಬೇಸರವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಹಾಗೂ ಡಿಸಿಎಂ ಗೋವಿಂದ್ ಕಾರಜೋಳ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಖಾತೆ ಬದಲಾವಣೆ ಕುರಿತಂತೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಇನ್ನೂ ಅಧಿಕೃತ ಪ್ರತಿಕ್ರಿಯೆ ಕೊಟ್ಟಿಲ್ಲ.

English summary
It is come to know that BJP MLAs are upset over the withdrawal of health ministry from B Sriramulu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X