• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನಿತಾ ಕುಮಾರಸ್ವಾಮಿಗೆ ಸುರೇಶ್ ಟ್ವೀಟಾಸ್ತ್ರ: ತರಹೇವಾರಿ ಪ್ರತಿಕ್ರಿಯೆ

|
   ಅನಿತಾ ಕುಮಾರಸ್ವಾಮಿಗೆ ಟ್ವೀಟ್ ಅಸ್ತ್ರ ಪ್ರಯೋಗಿಸಿದ ಬಿಜೆಪಿ ಶಾಸಕ | ಟ್ವಿಟ್ಟರ್ ಪ್ರತಿಕ್ರಿಯೆ | Oneindia Kannada

   ಬೆಂಗಳೂರು, ನವೆಂಬರ್ 17: ಶಾಸಕಿಯಾಗಿ ಇತ್ತೀಚೆಗಷ್ಟೇ ಪ್ರಮಾಣವಚನ ಸ್ವೀಕರಿಸಿದ ಅನಿತಾ ಕುಮಾರಸ್ವಾಮಿ ಅವರ ಮೇಲೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಟೀಕಾಸ್ತ್ರ ಪ್ರಯೋಗಿಸಿದ್ದನ್ನು ಓದಿದ್ದೇವೆ.

   ರಾಮನಗರ ಕ್ಷೇತ್ರದ ಜೆಡಿಎಸ್ ಶಾಸಕಿಯಾಗಿ ಉಪಚುನಾವಣೆಯಲ್ಲಿ ಗೆದ್ದ ಅನಿತಾ ಕುಮಾರಸ್ವಾಮಿ, ಗುರುವಾರ ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತ, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ.‌ ಸಚಿವ ಸ್ಥಾನಕ್ಕಾಗಿ ಯಾವುದೇ ಲಾಬಿ ಮಾಡುವುದಿಲ್ಲ.‌ ಆದರೆ ಸಚಿವ ಸ್ಥಾನ ನೀಡಿದರೆ ಉತ್ತಮ‌ ಕೆಲಸ ಮಾಡುತ್ತೇನೆ" ಎಂದಿದ್ದರು.

   ಅನಿತಾ ಕುಮಾರಸ್ವಾಮಿಗೆ ಸುರೇಶ್ ಕುಮಾರ್ 'ಭಲೇ' ಟ್ವೀಟ್!

   ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಸುರೇಶ್ ಕುಮಾರ್, ಪರೋಕ್ಷವಾಗಿ ಸಚಿವ ಸ್ಥಾನದ ಇಂಗಿತ ವ್ಯಕ್ತಪಡಿಸಿದ ಅನಿತಾ ಕುಮಾರಸ್ವಾಮಿ ಅವರನ್ನು ಆಡಿಕೊಂಡಿದ್ದರು. ಅವರ ಟ್ವೀಟ್ ಗೆ ಪರ ವಿರೋಧದ ಪ್ರತಿಕ್ರಿಯೆ ಹೊರಬಂದಿತ್ತು. ಇವತ್ತು ಸಹ ಟ್ವಿಟ್ಟರ್ ನಲ್ಲಿ ಸುರೇಶ್ ಕುಮಾರ್ ಅವರ ಟ್ವೀಟ್ ಗೆ ಪ್ರತಿಕ್ರಿಯೆಯ ಸುರಿಮಳೆ ಸುರಿಯುತ್ತಲೇ ಇದೆ.

   ಸುರೇಶ್ ಕುಮಾರ್ ಟ್ವೀಟಾಸ್ತ್ರ

   "ಭಲೇ, 'ನಾನು ಸಚಿವ ಆಕಾಂಕ್ಷಿಯಲ್ಲ.‌ ಸಚಿವ ಸ್ಥಾನಕ್ಕಾಗಿ ಯಾವುದೇ ಲಾಬಿ ಮಾಡುವುದಿಲ್ಲ.‌ ಆದರೆ ಸಚಿವ ಸ್ಥಾನ ನೀಡಿದರೆ ಉತ್ತಮ‌ ಕೆಲಸ ಮಾಡುತ್ತೇನೆ' ಎಂಬ ಮನದ ಇಂಗಿತ ವ್ಯಕ್ತಪಡಿಸಿದ್ದಾರೆ, ಈಗಾಗಲೇ ಮುಖ್ಯಮಂತ್ರಿ, ಲೋಕೋಪಯೋಗಿ, ಸಾರಿಗೆ ಸಚಿವರನ್ನು ಒಳಗೊಂಡ ಪರಿವಾರದ ಸದಸ್ಯೆ ಹಾಗೂ ನೂತನ ಶಾಸಕಿ. ಯಾವುದೇ ಮುಜುಗರವಿಲ್ಲದೆ!" ಎಂದು ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದರು.

   ಅನಿತಾ ಕುಮಾರಸ್ವಾಮಿ ಪ್ರಮಾಣವಚನ, ಪತಿ-ಪತ್ನಿ ಬರೆಯಲಿದ್ದಾರೆ ಇತಿಹಾಸ

   ನಿಮ್ಮನ್ನು ಬೆಂಬಲಿಸೋಕಾಗಲ್ಲ!

   "ಈ ವಿಷಯದಲ್ಲಿ ನಿಮ್ಮ ಅಭಿಪ್ರಾಯ ಬೆಂಬಲಿಸುವುದು ಅಸಾಧ್ಯ ಸರ್. ವಂಶ ಪಾರಂಪರಿಕ ರಾಜಕೀಯವನ್ನು ಜನಸಂಘ ವಿರೋಧಿಸಿಕೊಂಡೇ ಬಂದಿತ್ತು. ಆದರೆ ಶಿವಮೊಗ್ಗ ಮತ್ತು ಬಳ್ಳಾರಿಯಲ್ಲಿ ನಿಮ್ಮ ಪಕ್ಷವು ಕೂಡ ಆನುವಂಶ ರಾಜಕಾರಣವನ್ನೇ ಮಾಡಿದ್ದಲ್ಲವೇ?" ಎಂದಿದ್ದಾರೆ ಆನಂದಬಾಬು ಕುಲಕರ್ಣಿ.

   ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಪರಿಚಯ

   ಅವರ ಪರಿವಾರಕ್ಕೆ ಮಿನಿ ವಿಧಾನಸೌಧ ಕಟ್ಟಿಸಿ!

   "ಇವರ ಇಡೀ ವಂಶಕ್ಕೆ ಒಂದು ಮಿನಿ ವಿಧಾನಸೌಧ ಕಟ್ಟಿಸಿ, ಹಳೇಮೈಸೂರು, ಮಂಡ್ಯ , ರಾಮನಗರ, ಹಾಸನ ಇವುಗಳನ್ನು ಪ್ರತ್ಯೇಕ ರಾಜ್ಯ ಮಾಡಿ ಇವರಿಗೆ ಕೊಟ್ಟುಬಿಡಬೇಕು!" ಎಂದಿದ್ದಾರೆ ಚಂದ್ರಶೇಖರ್ ಬಿಜಿ

   ಪತ್ನಿ ಜೊತೆ ವಿಧಾನಸಭೆ ಪ್ರವೇಶಿಸಿ ಇತಿಹಾಸ ನಿರ್ಮಿಸಲಿರುವ ಕುಮಾರಸ್ವಾಮಿ!

   ಅದು ಅವರ ವೈಯಕ್ತಿಕ ಅಭಿಪ್ರಾಯ

   "ರೀ ಸ್ವಾಮಿ ಅದು ಅವರ ವೈಯಕ್ತಿಕ ಅಭಿಪ್ರಾಯ ನಿಮ್ಮದು ಏನು ಸಮಸ್ಯೆ.. ಒಬ್ಬರು ಸಂಸದ ಇನ್ನೊಬ್ಬರು ರಾಜ್ಯಾಧ್ಯಕ್ಷರು ಇನ್ನೊಬ್ಬರು ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳಾದರೆ ತಮ್ಮದೇನು ತಕರಾರು ಇಲ್ಲವೊ..? ಮೊದಲು ನಮ್ಮ ತಟ್ಟೆಯಲ್ಲಿರೊ ಹೆಗ್ಗಣ ನೋಡಬೇಕೆ ಹೊರತು ಪರರ ತಟ್ಟೆಯ ನೊಣವನ್ನಲ್ಲ" ಎಂದಿದ್ದಾರೆ ವಿಜಯ್ ಗೌಡ್ರು.

   ದೊಡ್ಡ ಸೊಸೆಯ ಡಿಮ್ಯಾಂಡ್ ಏನೋ?!

   "ಸಾರ್, ಸಣ್ಣ ಸೋಸೆನೇ ಹಿಂಗಾದ್ರೆ , ಇನ್ನು ದೊಡ್ಡ ಸೋಸೆ ಡೀಮ್ಯಾಂಡ್ ಏನೇನೋ?! ಗೌಡರ ದುರಾಸೆ ಎಲ್ಲೂ ನೋಡಿಲ್ಲ... ನಾನು, ಮಕ್ಳು, ಕುಟುಂಬ... ಅಷ್ಟೇ, ಮಿಕ್ಕಿದ್ದು ಆಮೇಲೆ" ಎಂದಿದ್ದಾರೆ ಜಗ್ಗು!

   ಪರಿವಾರ ಸಂಪುಟ!

   ಮುಖ್ಯ ಮಂತ್ರಿ HDK

   ಲೋಕೋಪಯೋಗಿ HDR

   ಸಾರಿಗೆ ಸಚಿವ HDR

   ಭವಿಷ್ಯದಲ್ಲಿ

   ಅನಿತಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ

   ಪ್ರಜ್ವಲ್ ರೇವಣ್ಣ

   ಭಾವಿ ಉಪ ಮುಖ್ಯ ಮಂತ್ರಿ ( ತಂದೆ ಬದಲಾಗಿ)

   ನಿಖಿಲ್ ಗೌಡ

   ಮುಂದಿನ ದಿನಗಳಲ್ಲಿ ಅವರ ತಂದೆಯವರ ಕರ್ನಾಟಕ ಸರ್ಕಾರದಲ್ಲಿ ಮಂತ್ರಿ ಆಗೋದು ಕಚಿತ

   ಅಲ್ಲಿಗೆ

   ಕರ್ನಾಟಕ ಸರ್ಕಾರ ಅಲ್ಲಾ

   ಗೌಡ್ರ ಸರ್ಕಾರ ಎಂದಿದ್ದಾರೆ ಸುರೇಶ್.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   After Rajajinagar BJP MLA Suresh Kumar mocking Karnataka CM HD Kumarawamy's wfe and newly appointed JDS MLA from Ramanagara constituency Anitha Kumaraswamy, Many twitterians react to his tweet.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more