ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಎಎಸ್ ಅಭ್ಯರ್ಥಿಗಳ ಪರವಾಗಿ ಶಾಸಕ ಸುರೇಶ್ ಕುಮಾರ್ ಉಪವಾಸ ಸತ್ಯಾಗ್ರಹ

|
Google Oneindia Kannada News

ಬೆಂಗಳೂರು, ಜುಲೈ 03: ಕೆಎಎಸ್‌ ಅಭ್ಯರ್ಥಿಗಳ ಪರವಾಗಿ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಕೆಪಿಎಸ್‌ಸಿಯು ಕೆಎಎಸ್ ಅಭ್ಯರ್ಥಿಗಳ ಸಂದರ್ಶನ ದಿನಾಂಕವನ್ನು ಶೀಘ್ರವೇ ನಿಗದಿಗೊಳಿಸಬೇಕು ಎಂದು ಸುರೇಶ್ ಕುಮಾರ್ ಅವರು ಕೆಪಿಎಸ್‌ಸಿ ಕಚೇರಿ ಎದುರುಗಡೆಯೇ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಉದ್ಯೋಗ ಕೊಡಿಸುವುದಾಗಿ ವಂಚನೆ : ಶ್ಯಾಂ ಭಟ್ ವಿರುದ್ಧ ಎಫ್‌ಐಆರ್‌ ಉದ್ಯೋಗ ಕೊಡಿಸುವುದಾಗಿ ವಂಚನೆ : ಶ್ಯಾಂ ಭಟ್ ವಿರುದ್ಧ ಎಫ್‌ಐಆರ್‌

ಸುರೇಶ್ ಕುಮಾರ್ ಅವರು ಪ್ರತಿಭಟನೆ ಕೂತಿದ್ದ ಸ್ಥಳಕ್ಕೆ ಧಾವಿಸಿದ ಕೆಪಿಎಸ್‌ಸಿ ಅಧಿಕಾರಿಗಳು ಪ್ರತಿಭಟನೆ ಬಿಡುವಂತೆ ಸುರೇಶ್ ಕುಮಾರ್ ಅವರ ಬಳಿ ಮನವಿ ಮಾಡಿದ್ದಾರೆ. ಜುಲೈ 29 ರಿಂದ ಸಂದರ್ಶನ ನಡೆಸಲಾಗುವುದು ಎಂದು ಲಿಖಿತ ಭರವಸೆಯನ್ನು ಅವರಿಂದ ಪಡೆದ ಬಳಿಕ ಸುರೇಶ್ ಕುಮಾರ್ ಅವರು ಪ್ರತಿಭಟನೆ ಹಿಂಪಡೆದಿದ್ದಾರೆ.

BJP MLA Suresh Kumar calls for hunger strike in support of KAS candidates

ಅಧಿಕಾರಿಗಳು ನೀಡಿರುವ ಭರವಸೆಯಂತೆ 2015 ರ ಗೆಜೆಟೆಡ್ ಪ್ರೊಬೆಷನರ್‌ ಬ್ಯಾಚ್‌ ಅಭ್ಯರ್ಥಿಗಳಿಗೆ ಜುಲೈ 29 ರಿಂದ ಸಂದರ್ಶನ ನಡೆಸಲಾಗುತ್ತದೆ. ಈ ಪ್ರತಿಭಟನೆಯಲ್ಲಿ ಶಾಸಕ ಸುರೇಶ್ ಕುಮಾರ್ ಅವರ ಜೊತೆ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಅವರು ಸಹ ಇದ್ದರು.

ಅಬಕಾರಿ ಇಲಾಖೆ ನೇಮಕಾತಿ : ಕೀ ಉತ್ತರ ಪ್ರಕಟಿಸಿದ ಕೆಪಿಎಸ್‌ಸಿ ಅಬಕಾರಿ ಇಲಾಖೆ ನೇಮಕಾತಿ : ಕೀ ಉತ್ತರ ಪ್ರಕಟಿಸಿದ ಕೆಪಿಎಸ್‌ಸಿ

2015 ರ ಬ್ಯಾಚ್ ನ KAS ಅಧಿಕಾರಿಗಳ ಆಯ್ಕೆಗಾಗಿ ಅಧಿಸೂಚನೆ ಹೊರಬಿದ್ದಿದ್ದು 12-05-2017 ರಂದು. ಅದರ ಪೂರ್ವಭಾವಿ ಪರೀಕ್ಷೆ( preliminary exam) ನಡೆದದ್ದು 20-08-2017 ರಂದು. ಮುಖ್ಯ ಪರೀಕ್ಷೆ ( Mains) ನಡೆದದ್ದು 2017 ರ ಡಿಸೆಂಬರ್ 16 ರಿಂದ 23 ರವರೆಗೆ. ಆದರೆ ಒಂದು ವರ್ಷ ಕಳೆದರೂ ಫಲಿತಾಂಶ ದೊರಕಿರಲಿಲ್ಲ.

BJP MLA Suresh Kumar calls for hunger strike in support of KAS candidates

ಈ ಬಗ್ಗೆ ಶಾಸಕ ಸುರೇಶ್ ಕುಮಾರ್ ಅವರು ಈ ಹಿಂದೆ ಕೆಪಿಎಸ್‌ಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಎಲ್ಲರೊಡನೆ ಚರ್ಚಿಸಿದ್ದರು, ಕಳೆದ ವರ್ಷ ನವೆಂಬರ್‌ ನಲ್ಲಿ ಇದೇ ವಿಷಯದ ಬಗ್ಗೆ ರಾಜ್ಯ ಸಿಎಂ ಅವರಿಗೂ ಪತ್ರ ಬರೆದಿದ್ದರು, ಕಳೆದ ವರ್ಷ ಡಿಸೆಂಬರ್‌ ನಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದರು, ಆದರೆ ಯಾವುದೂ ಫಲ ನೀಡಿರಲಿಲ್ಲ, ಈಗ ಕೆಪಿಎಸ್‌ಸಿಯು ಕಣ್ಣು ತೆರೆದಿದ್ದು ಸಂದರ್ಶನ ಮಾಡುವುದಾಗಿ ಹೇಳಿದ್ದಾರೆ.

English summary
BJP MLA Suresh Kumar today called for hunger strike in front of KPSC in support of KAS candidates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X