ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಕ್ಷದ ವಿರುದ್ಧ ತೊಡೆತಟ್ಟಿರುವ ಯತ್ನಾಳ್‌ರಿಂದ ಶಾ, ನಡ್ಡಾಗೆ ಪತ್ರ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 08: ರಾಜ್ಯಕ್ಕೆ ನೆರೆ ಪರಿಹಾರ ನೀಡುವಲ್ಲಿ ವಿಳಂಬ ನೀತಿ ಅನುಸರಿಸಿದ್ದ ತಮ್ಮದೇ ಪಕ್ಷದ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅಮಿತ್ ಶಾ ಮತ್ತು ಜೆ.ಪಿ.ನಡ್ಡಾಗೆ ಪತ್ರ ಬರೆದಿದ್ದಾರೆ.

ಪಕ್ಷದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿ, ಮೋದಿ ಸಪೇತ ತಮ್ಮದೇ ಪಕ್ಷದ ರಾಜ್ಯ ಸಚಿವ, ರಾಷ್ಟ್ರೀಯ ಕಾರ್ಯದರ್ಶಿಯನ್ನು ಟೀಕಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪಕ್ಷವು ನೊಟೀಸ್ ಜಾರಿ ಮಾಡಿತ್ತು. ಇದಕ್ಕೆ ಉತ್ತರವನ್ನು ಯತ್ನಾಳ್ ಇಂದು ನೀಡಿದ್ದಾರೆ.

ಪಕ್ಷದ ವಿರುದ್ಧವೇ ವಾಗ್ದಾಳಿ: ಬಸನಗೌಡ ಯತ್ನಾಳ್‌ಗೆ ಬಿಜೆಪಿ ನೋಟಿಸ್ಪಕ್ಷದ ವಿರುದ್ಧವೇ ವಾಗ್ದಾಳಿ: ಬಸನಗೌಡ ಯತ್ನಾಳ್‌ಗೆ ಬಿಜೆಪಿ ನೋಟಿಸ್

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಪಕ್ಷದ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು ವೈಯಕ್ತಿಕ ಭೇಟಿಗೆ ಇಬ್ಬರ ಸಮಯ ಕೇಳಿದ್ದಾರೆ.

BJP MLA Basanagouda Patil Yathnal Writes Letter To Amit Shah

ತಮಗೆ ದೊರೆತಿದ್ದ ನೊಟೀಸ್‌ ಬಗ್ಗೆ ಈಗಾಗಲೇ ಪ್ರತ್ಯೇಕವಾಗಿ ಇಬ್ಬರೂ ರಾಷ್ಟ್ರೀಯ ನಾಯಕರಿಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪತ್ರವನ್ನು ಬರೆದು ತಮ್ಮ ಅಸಮಾಧಾನದ ಹಿಂದಿನ ಕಾರಣವನ್ನು ತಿಳಿಸಿದ್ದರು.

ರಾಜ್ಯ, ಕೇಂದ್ರ ಸಚಿವರ ವಿರುದ್ಧ ಬಿಜೆಪಿ ಶಾಸಕ ಯತ್ನಾಳ್ ಚಾಟಿರಾಜ್ಯ, ಕೇಂದ್ರ ಸಚಿವರ ವಿರುದ್ಧ ಬಿಜೆಪಿ ಶಾಸಕ ಯತ್ನಾಳ್ ಚಾಟಿ

ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿಯ ಸೂಕ್ಷ್ಮತೆಯನ್ನು ತಮ್ಮ ಪತ್ರದಲ್ಲಿ ವಿವರಿಸಿರುವ ಅವರು ಈ ವಿಚಾರದ ಬಗ್ಗೆ ತಮ್ಮನ್ನು ಭೇಟಿಯಾಗಿ ಹೆಚ್ಚಿನ ಮಾಹಿತಿ ನೀಡುತ್ತೇನೆ. ಭೇಟಿಗೆ ಸಮಯ ಕೊಡಿ ಎಂದು ಇಬ್ಬರಲ್ಲೂ ಕೇಳಿಕೊಂಡಿದ್ದಾರೆ. ಹಾಗೆಯೇ, ತಾವು ನೆರೆ ಸಂತ್ರಸ್ತರ ಕಾಳಜಿಯಿಂದ ಹೇಳಿಕೆ ನೀಡಿದೆ ಹೊರತು ಪಕ್ಷಕ್ಕೆ ಹಾನಿ ಮಾಡುವ ಉದ್ದೇಶವಿರಲಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ನಾನು ಯಾರಿಗೂ ಹೆದರೊಲ್ಲ: ಬಿಜೆಪಿ ನೋಟಿಸ್‌ಗೆ ಯತ್ನಾಳ್ ಸೆಡ್ಡುನಾನು ಯಾರಿಗೂ ಹೆದರೊಲ್ಲ: ಬಿಜೆಪಿ ನೋಟಿಸ್‌ಗೆ ಯತ್ನಾಳ್ ಸೆಡ್ಡು

ತಮ್ಮ ಮಾತು ಸರಿಯಾಗಿಯೇ ಇದೆ ಎಂದು ಸ್ಪಷ್ಟನೆ ನೀಡಿರುವ ಅವರು, ತಮ್ಮ ಮಾತಿನಿಂದ ಪಕ್ಷಕ್ಕೆ ಹಾನಿ ಆಗಿಲ್ಲ ಬದಲಾಗಿ ಪಕ್ಷದ ಗೌರವ ಹೆಚ್ಚಿದೆ ಎಂದು ಹೇಳಿದ್ದಾರೆ.

English summary
BJP MLA Basanagouda Patil Yathal who wave redd flag against his own party has written a letter to Amit Shah and JP Nadda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X