ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಸಂಸದ ಬಚ್ಚೇಗೌಡ ವಿರುದ್ಧ ಹೈಕಮಾಂಡ್‌ ಗೆ ದೂರು ಸಾಧ್ಯತೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 07: ಉಪಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡದೆ ಬಹುತೇಕ ತಟಸ್ಥವಾಗಿದ್ದ ಬಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ವಿರುದ್ಧ ಹೈಕಮಾಂಡ್‌ ಗೆ ದೂರು ಸಲ್ಲಿಸುವ ಸಾಧ್ಯತೆ ಇದೆ.

ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎಂಟಿಬಿ ನಾಗರಾಜು ಕಣಕ್ಕೆ ಇಳಿದಿದ್ದರು. ಅದೇ ಕ್ಷೇತ್ರದ ಬಿಜೆಪಿ ಮುಖಂಡ ಮತ್ತು ಸಂಸದ ಬಿ.ಎನ್.ಬಚ್ಚೇಗೌಡ ಪ್ರಚಾರ ಕಣದಲ್ಲಿ ಒಂದು ದಿನವೂ ಕಾಣಿಸಿಕೊಳ್ಳಲಿಲ್ಲ. ಅವರ ಪುತ್ರ ಶರತ್ ಬಚ್ಚೇಗೌಡ ಅವರೇ ಬಿಜೆಪಿ ಅಭ್ಯರ್ಥಿಗೆ ಎದುರಾಳಿಯಾಗಿ ಸ್ಪರ್ಧಿಸಿದ್ದರು.

ಎಂಟಿಬಿ ನಾಗರಾಜು-ಯಡಿಯೂರಪ್ಪ ಭೀತಿ: ಸೋಲಿನ ಭೀತಿ?ಎಂಟಿಬಿ ನಾಗರಾಜು-ಯಡಿಯೂರಪ್ಪ ಭೀತಿ: ಸೋಲಿನ ಭೀತಿ?

ಬಿಜೆಪಿ ಸಂಸದ ಬಚ್ಚೇಗೌಡ ಅವರು ಹಲವು ಬಿಜೆಪಿ ಮುಖಂಡರಿಗೆ ಬಿಜೆಪಿ ಗೆ ಮತ ಹಾಕದೆ, ಶರತ್ ಬಚ್ಚೇಗೌಡ ಪರ ನಿಲ್ಲುವಂತೆ ಸೂಚಿಸಿದ್ದಾರೆ ಎಂಬುದು ಬಹಿರಂಗಗೊಂಡಿದ್ದು, ಈ ಬಗ್ಗೆ ಆಡಿಯೋ ವನ್ನು ಸಹ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜು ಸಂಪಾದನೆ ಮಾಡಿದ್ದಾರೆ ಎನ್ನಲಾಗಿದೆ.

BJP May Take Action Against BJP MP BN Bache Gowda

ಇಂದು ಬೆಳಿಗ್ಗೆ ಯಡಿಯೂರಪ್ಪ ಅವರನ್ನು ಭೇಟಿ ಆಗಿರುವ ಎಂಟಿಬಿ ನಾಗರಾಜ್ ಬಚ್ಚೇಗೌಡರು ಶರತ್‌ ಬಚ್ಚೇಗೌಡಗೆ ಬೆಂಬಲ ನೀಡಿ ಎಂದು ಬಿಜೆಪಿ ಮುಖಂಡರಿಗೆ ಹೇಳಿರುವ ಆಡಿಯೋ ವನ್ನು ಯಡಿಯೂರಪ್ಪ ಅವರಿಗೆ ನೀಡಿ ಬಚ್ಚೇಗೌಡ ಅವರನ್ನು ಪಕ್ಷದಿಂದ ಹೊರಗಟ್ಟುವಂತೆ ಒತ್ತಾಯಿಸಿದ್ದಾರೆ.

ಐದು ಗೆದ್ದರೂ ಬಿಜೆಪಿ ಸರಕಾರ ಸೇಫ್: ಅಡ್ಡಗೋಡೆ ಮೇಲೆ ಸಿದ್ದರಾಮಯ್ಯ ದೀಪ ಐದು ಗೆದ್ದರೂ ಬಿಜೆಪಿ ಸರಕಾರ ಸೇಫ್: ಅಡ್ಡಗೋಡೆ ಮೇಲೆ ಸಿದ್ದರಾಮಯ್ಯ ದೀಪ

ಎಂಟಿಬಿ ನಾಗರಾಜ್ ಮನವಿಗೆ ಯಡಿಯೂರಪ್ಪ ಸ್ಪಂದಿಸಿದ್ದಾರೆ ಎನ್ನಲಾಗಿದ್ದು, ಬಿಜೆಪಿ ಗೆ ವಿರುದ್ಧವಾಗಿ ಚುನಾವಣೆಯಲ್ಲಿ ಕೆಲಸ ಮಾಡಿರುವ ಬಚ್ಚೇಗೌಡ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಉಪಚುನಾವಣೆ ಫಲಿತಾಂಶದ ಬಳಿಕ ಬಚ್ಚೇಗೌಡ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೋ ಬೇಡವೋ ಎಂಬ ಬಗ್ಗೆ ನಿರ್ಧಾರ ಮಾಡಲಾಗುತ್ತದೆ.

English summary
BJP may take action against Chikkaballapura BJP MP BN Bache Gowda. He did not work for BJP in by elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X