• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಾಮ್ರಾಟ್ ಆರ್ ಅಶೋಕ್ 'ಭೀಷ್ಮ ಪ್ರತಿಜ್ಞೆ' ಹಿಂದಿನ ಅಸಲಿಯತ್ತು!

|
   Lok Sabha Elections 2019: ಸಾಮ್ರಾಟ್ ಆರ್.ಅಶೋಕ್ ಅವರ ಭೀಷ್ಮ ಪ್ರತಿಜ್ಞೆಯ ಹಿಂದಿನ ಕಾರಣ ಏನು? |Oneindia Kannada

   ಪ್ರಧಾನಿ ನರೇಂದ್ರ ಮೋದಿಯವರ 'ವಿಜಯ ಸಂಕಲ್ಪ' ಯಾತ್ರೆಯ ಜವಾಬ್ದಾರಿಯನ್ನು ವಹಿಸಿಕೊಂಡು, ಅದನ್ನು ಸದ್ಯದ ಮಟ್ಟಿಗೆ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿರುವ ಆರ್ ಅಶೋಕ್ ಗೆ ಬಿಜೆಪಿ ವರಿಷ್ಠರು ಟಾರ್ಗೆಟ್ ಕಮ್ ಎಚ್ಚರಿಕೆಯನ್ನು ನೀಡಿದ್ದಾರಾ?

   ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

   ಬಿಜೆಪಿ ವಲಯದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಅದೇನು ಮಾಡುತ್ತೀರೋ ಗೊತ್ತಿಲ್ಲ ಬೆಂಗಳೂರು ದಕ್ಷಿಣ ಯಾವ ಕಾರಣಕ್ಕೂ ಬಿಜೆಪಿ ಹಿಡಿತದಿಂದ ಕೈತಪ್ಪ ಬಾರದು ಎನ್ನುವ ಕಟ್ಟುನಿಟ್ಟಿನ ಟಾರ್ಗೆಟ್ ಅನ್ನು ಅಮಿತ್ ಶಾ ನೀಡಿದ್ದಾರೆ ಎನ್ನುವ ಮಾಹಿತಿಯಿದೆ.

   ರಾಜ್ಯದ ನಾಲ್ಕು 'ಕೇಸರಿ ಕೋಟೆ ಕ್ಷೇತ್ರದಲ್ಲಿ' ಹೇಗಿದೆ ಸದ್ಯದ ರಾಜಕೀಯ ಹವಾ

   ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರನ್ನು ರಾಜ್ಯ ಬಿಜೆಪಿ ಘಟಕ ಅನುಮೋದನೆ ಮಾಡುವ ಮೊದಲು, ಅದಕ್ಕೂ ಅಶೋಕ್ ಮತ್ತು ವಿ ಸೋಮಣ್ಣ ಅವರ ತಕರಾರು ಇತ್ತು. ಆದರೆ. ಪಕ್ಷದ ಬೆಂಗಳೂರು ಘಟಕದಲ್ಲಿ ಹಿಡಿತ ಸಾಧಿಸ ಬೇಕಾದರೆ, ತೇಜಸ್ವಿನಿ ಆಯ್ಕೆಯೇ ಸೂಕ್ತ ಎಂದು ಅವರ ಹೆಸರನ್ನು ಅಂತಿಮಗೊಳಿಸಲು ಯಡಿಯೂರಪ್ಪನವರಿಗೆ ಅಶೋಕ್ ಮನವಿ ಮಾಡಿದ್ದರು.

   ಗೌಡ್ರು ತಿನ್ನೋದನ್ನಾ 3ದಿನ ತಿಂದು ಮೋದಿ ಬದುಕಿದ್ರೆ, ನಾ ಒಪ್ಕೋತೀನಿ: ಸಿ ಎಂ ಇಬ್ರಾಹಿಂ

   ಆದರೆ, ಕೊನೆಯ ಕ್ಷಣದವರೆಗೂ ಗೌಪ್ಯತೆ ಕಾಯ್ದುಕೊಂಡ ಅಮಿತ್ ಶಾ, ನಾಮಪತ್ರಿಕೆ ಸಲ್ಲಿಕೆ ಅಂತಿಮ ದಿನದ ಮುನ್ನಾದಿನ ರಾತ್ರಿ ತೇಜಸ್ವಿ ಸೂರ್ಯ ಹೆಸರನ್ನು ಅಭ್ಯರ್ಥಿಯಾಗಿ ಪ್ರಕಟಿಸಿತು. ಬಿಜೆಪಿ ವರಿಷ್ಠರು ತೆಗೆದುಕೊಂಡ ನಿರ್ಧಾರ ಅಶೋಕ್ ಆದಿಯಾಗಿ ರಾಜ್ಯ ಬಿಜೆಪಿ ಮುಖಂಡರನ್ನು ಅಕ್ಷರಸಃ ಬೆಚ್ಚಿಬೀಳಿಸಿತ್ತು.

   ಯಡಿಯೂರಪ್ಪ ಕೂಡಾ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದರು

   ಯಡಿಯೂರಪ್ಪ ಕೂಡಾ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದರು

   ಸೋಮಣ್ಣ ಬಹಿರಂಗವಾಗಿಯೇ ಅಭ್ಯರ್ಥಿಯ ಆಯ್ಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಯಡಿಯೂರಪ್ಪ ಕೂಡಾ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದರು. ತಾನು ಬಯಸಿದ್ದು ಒಂದು ಆಗಿದ್ದು ಇನ್ನೊಂದು ಎಂದು ಮೊದಮೊದಲು ಬೆಂಗಳೂರು ದಕ್ಷಿಣದ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಕಾಟಾಚಾರಕ್ಕೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಅಶೋಕ್ ಅವರ ನಡೆಗೆ ಆರ್ ಎಸ್ ಎಸ್ ಕೂಡಾ ಅಸಮಾಧಾನ ಹೊರಹಾಕಿತ್ತು. ಜೊತೆಗೆ, ಅಮಿತ್ ಶಾ ಅವರಿಗೂ ಅಶೋಕ್ ವಿರುದ್ದ ದೂರು ಹೋಗಿತ್ತು.

   ಪಕ್ಷಕ್ಕಾಗಿ ಕೆಲಸ ಮಾಡುವುದು ಮುಖ್ಯ, ಸ್ವಯಂ ಪ್ರತಿಷ್ಠೆಯನ್ನು ಬದಿಗೊತ್ತಿ

   ಪಕ್ಷಕ್ಕಾಗಿ ಕೆಲಸ ಮಾಡುವುದು ಮುಖ್ಯ, ಸ್ವಯಂ ಪ್ರತಿಷ್ಠೆಯನ್ನು ಬದಿಗೊತ್ತಿ

   ಪಕ್ಷಕ್ಕಾಗಿ ಕೆಲಸ ಮಾಡುವುದು ಮುಖ್ಯ, ಸ್ವಯಂ ಪ್ರತಿಷ್ಠೆಯನ್ನು ಬದಿಗೊತ್ತಿ ಇತರರಿಗೆ ಉದಾಹರಣೆಯಾಗಿ ಎನ್ನುವ ಸಂದೇಶವನ್ನು ವರಿಷ್ಠರು ಅಶೋಕ್ ಗೆ ರವಾನಿಸಿದ್ದರು. ಪಕ್ಷದಲ್ಲಿ ನಿಮ್ಮ ಉತ್ತಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ, ಈ ಕೂಡಲೇ ಸಕ್ರಿಯವಾಗಿ ಪ್ರಚಾರ/ಕಾರ್ಯತಂತ್ರದಲ್ಲಿ ತೊಡಗಿಸಿಕೊಳ್ಳಿ ಎನ್ನುವ ಎಚ್ಚರಿಕೆಯನ್ನು ಅಮಿತ್ ಶಾ ನೀಡಿದ್ದರು ಎನ್ನುವ ಮಾಹಿತಿಯಿದೆ.

   'ಮೋದಿ ಚುನಾವಣಾ ಪ್ರಚಾರ'ದ ಉಸ್ತುವಾರಿ, ಮತ್ತೆ ಅಶೋಕರೇ ಜವಾಬ್ದಾರಿ

   ಬೆಂಗಳೂರಿನಲ್ಲಿ ನಡೆದ ಅಮಿತ್ ಶಾ ಅವರ ಬೃಹತ್ ರೋಡ್ ಶೋ

   ಬೆಂಗಳೂರಿನಲ್ಲಿ ನಡೆದ ಅಮಿತ್ ಶಾ ಅವರ ಬೃಹತ್ ರೋಡ್ ಶೋ

   ಇದಾದ ಮೇಲೆ, ಬೆಂಗಳೂರಿನಲ್ಲಿ ನಡೆದ ಅಮಿತ್ ಶಾ ಅವರ ಬೃಹತ್ ರೋಡ್ ಶೋಗೆ ಮುನ್ನ, ಅಶೋಕ್ ಗೆ ಪ್ರಮುಖವಾಗಿ ಬೆಂಗಳೂರು ದಕ್ಷಿಣದಲ್ಲಿ ಯಾವಕಾರಣಕ್ಕೂ ಪಕ್ಷ ಸೋಲಬಾರದು. ಒಂದು ವೇಳೆ ನಮ್ಮ ಅಭ್ಯರ್ಥಿ ಸೋತರೆ, ಅದಕ್ಕೆ ನೀವೇ ಕಾರಣ ಎನ್ನುವ ಸಂದೇಶ ರವಾನೆಯಾಗುತ್ತದೆ. ಇದು ಭವಿಷ್ಯದಲ್ಲಿ ನಿಮಗೆ ಮುಳುವಾಗಬಹುದು ಎನ್ನುವ ಎಚ್ಚರಿಕೆಯನ್ನು ಅಶೋಕ್ ಗೆ ನೀಡಲಾಗಿತ್ತು ಎನ್ನುವ ಸುದ್ದಿ ಹರಿದಾಡುತ್ತಿದೆ.

   ಬೆಂಗಳೂರು ದಕ್ಷಿಣ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು

   ಬೆಂಗಳೂರು ದಕ್ಷಿಣ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು

   ಈ ಕಾರಣಕ್ಕಾಗಿಯೇ ಬೆಂಗಳೂರು ದಕ್ಷಿಣ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು ಎನ್ನುವ ಪ್ರತಿಜ್ಞೆಯನ್ನು ಅಶೋಕ್ ಮಾಡಿರುವುದು. ಅಮಿತ್ ಶಾ ರೋಡ್ ಶೋ ಅನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಅಶೋಕ್ ಬೆನ್ನು ತಟ್ಟಿ ಹೋಗಿದ್ದ ಅಮಿತ್ ಶಾ, ಮತ್ತೆ ಅವರ ಜವಾಬ್ದಾರಿಯನ್ನು ನೆನಪಿಸಿ ಹೋಗಿದ್ದರು.

   ಯಲಹಂಕದಲ್ಲಿ ರೋಡ್‌ ಶೋ ಮೂಲಕ ಅಮಿತ್ ಶಾ ಮತಬೇಟೆ

   ಅಶೋಕ್ ಪೂರ್ಣ ಪ್ರಮಾಣದಲ್ಲಿ ತೇಜಸ್ವಿ ಸೂರ್ಯ ಪರ ಪ್ರಚಾರ ಆರಂಭಿಸಿದ್ದು

   ಅಶೋಕ್ ಪೂರ್ಣ ಪ್ರಮಾಣದಲ್ಲಿ ತೇಜಸ್ವಿ ಸೂರ್ಯ ಪರ ಪ್ರಚಾರ ಆರಂಭಿಸಿದ್ದು

   ಇದಾದ ನಂತರವೇ ಅಶೋಕ್ ಪೂರ್ಣ ಪ್ರಮಾಣದಲ್ಲಿ ತೇಜಸ್ವಿ ಸೂರ್ಯ ಪರ ಪ್ರಚಾರ ಆರಂಭಿಸಿದ್ದು. ಬಹುತೇಕ ಅಶೋಕ್ ಗರಡಿಯಲ್ಲೇ ಕಾಣಿಸಿಕೊಳ್ಳುವ ಮತ್ತು ಹಿಂದಿನಿಂದಲೂ ಅನಂತ್ ಕುಮಾರ್ ಗೆ ಭರ್ಜರಿ ಲೀಡ್ ಕೊಡಿಸುವ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಕೂಡಾ ಕ್ಯಾಂಪೇನ್ ಆರಂಭಿಸಿದ್ದು. ವಿ ಸೋಮಣ್ಣ ಕೂಡಾ ಪೂರ್ಣ ಪ್ರಮಾಣದಲ್ಲಿ ಪ್ರಚಾರ ನಡೆಸುತ್ತಿರುವುದು. ಈಗ, ಬೆಂಗಳೂರು ದಕ್ಷಿಣದ ಫಲಿತಾಂಶದ ಮೇಲೆ, ಅಶೋಕ್ ಭವಿಷ್ಯ ನಿಂತಿದೆ ಎನ್ನುವ ಮಾತು ಕೇಳಿಬರುತ್ತಿದೆ.

   ಬೆಂಗಳೂರು ದಕ್ಷಿಣದಲ್ಲಿ ಗೆಲುವಿನ ಅಂತರ ಹೆಚ್ಚಿಸುವುದೊಂದೇ ಗುರಿ ಎಂದ ಅಶೋಕ್

   English summary
   BJP leader R Ashok taken responsibility of winning party candidate in Bengaluru South, what is the real reason. Is Ashok taken responsibility after Amit Shah warning?
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X