ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಶವಂತಪುರದಲ್ಲಿ ಯಾರಿಗೆ ಬಿಜೆಪಿ ಟಿಕೆಟ್: ಜಗ್ಗೇಶ್ ಏನಂದ್ರು?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 25: ಬಿಜೆಪಿಯು ನನಗೆ ನೆರಳು ಕೊಡುವ ಮರವಿದ್ದಂತೆ, ನಾನು ಮರದ ಕೆಳಗೆ ಕೂರುವೆ ವಿನಃ ರೆಂಬೆ ಕಡಿಯುವ ಕೆಲಸ ಎಂದೂ ಮಾಡುವುದಿಲ್ಲ ಎಂದು ನಟ, ಬಿಜೆಪಿ ಮುಖಂಡ ಜಗ್ಗೇಶ್ ಹೇಳಿದ್ದಾರೆ.

ನಾನು ಇರುವ ಪಕ್ಷವನ್ನು ಶಿಸ್ತಿನಿಂದ ಹಿಂಬಾಲಿಸುತ್ತಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಯಶವಂತಪುರ ಕ್ಷೇತ್ರ ಪರಿಚಯ: ಯಶಸ್ಸು ಯಾರಿಗೂ ಸುಲಭವಲ್ಲಯಶವಂತಪುರ ಕ್ಷೇತ್ರ ಪರಿಚಯ: ಯಶಸ್ಸು ಯಾರಿಗೂ ಸುಲಭವಲ್ಲ

ನಮ್ಮ ಪಕ್ಷದ ಸಿದ್ಧಾಂತ, ದೇಶ ಮೊದಲು ಅಂದಮೇಲೆ ನಾವು ಎಲ್ಲಾ ತ್ಯಾಗಕ್ಕೂ ಸಿದ್ಧ, ಹಾಗಾಗಿ ಬಂಡಾಯದ ಗುಣ ನನ್ನದಲ್ಲ ಎಂದು ಟ್ವೀಟ್ ಮಾಡುವ ಮೂಲಕ ಯಶವಂತಪುರ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಕೆಲಸ ಮಾಡುವುದಾಗಿ ಸಂದೇಶ ನೀಡಿದ್ದಾರೆ.

ರಿಯಲ್ ಎಸ್ಟೇಟ್ ಏರು ಮುಖವಾಗಿರುವ ಈ ವ್ಯಾಪ್ತಿಯಲ್ಲಿ ಅತಿಕ್ರಮಣ, ಖಾತೆಗಳ ಸಮಸ್ಯೆ ಕೂಡ ಅಷ್ಟೇ ಪ್ರಮಾಣದಲ್ಲಿದೆ. ಬೇಡಿಕೆಗಳ ಬಾಯಿಗೆ ಬೀಗ ಹಾಕಲು ಯಾರಿಗೆ ಸಾಧ್ಯ. ಯಶವಂತಪುರಕ್ಕೆ ಸಮಸ್ಯೆಗಳ ಬಂಧನಕ್ಕಿಂತ ಬಿಡುಗಡೆ ಅಗತ್ಯ ಇರುವಂತೆ ಕಾಣುತ್ತಿದೆ.

ಕನ್ನಡಿಗರ ಚಪ್ಪಾಳೆ ನನಗೆ ಮುಖ್ಯ

ಕನ್ನಡಿಗರ ಚಪ್ಪಾಳೆ ಮುಂದೆ ಸರ್ವವೂ ನನಗೆ ನಗಣ್ಯ , ಬಿಜೆಪಿಯ ನಿಷ್ಠಾವಂತ ಸಿಪಾಯಿ ನಾನು. ನನ್ನ ಒಂದು ಪ್ರಾರ್ಥನೆ ಮಂಡಿಸಿದರೆ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದ ಎಲ್ಲಾ ಮತ್ರಿಗಳು ಶಾಸಕರು ನನ್ನ ಬೇಡಿಕೆಗೆ ಮರು ಚಿಂತಿಸದೆ ಕಾರ್ಯ ಮಾಡುತ್ತಿದ್ದಾರೆ. ಇನ್ಯಾವ ಅಧಿಕಾರ ಬೇಕು ನನಗೆ. ನಿಮ್ಮ ಪ್ರೀತಿ ಸಾಕು ಎಂದು ಟ್ವೀಟ್ ಮಾಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಗ್ಗೇಶ್ ಅಭ್ಯರ್ಥಿ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಗ್ಗೇಶ್ ಅಭ್ಯರ್ಥಿ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಜಗ್ಗೇಶ್ ಅವರು ಕಾಂಗ್ರೆಸ್ ಅಭ್ಯರ್ಥಿ ಎಸ್‌ಟಿ ಸೋಮಶೇಖರ್ ವಿರುದ್ಧ ಪರಾಭವಗೊಂಡಿದ್ದರು. ಸೋಮಶೇಖರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸರ್ಕಾರ ರಚಿಸಲು ನೆರವಾಗಿದ್ದರು.

ಉಪ ಚುನಾವಣೆ; ಒಂದು ಕ್ಷೇತ್ರದಲ್ಲಿ ಬಿಜೆಪಿಗೆ ಸುಲಭದ ಗೆಲುವು!ಉಪ ಚುನಾವಣೆ; ಒಂದು ಕ್ಷೇತ್ರದಲ್ಲಿ ಬಿಜೆಪಿಗೆ ಸುಲಭದ ಗೆಲುವು!

ಎಸ್‌ಟಿ ಸೋಮಶೇಖರ್‌ಗೆ ಬಿಜೆಪಿಯಿಂದ ಟಿಕೆಟ್ ಸಾಧ್ಯತೆ

ಎಸ್‌ಟಿ ಸೋಮಶೇಖರ್‌ಗೆ ಬಿಜೆಪಿಯಿಂದ ಟಿಕೆಟ್ ಸಾಧ್ಯತೆ

ಈಗ ಸೋಮಶೇಖರ್ ಅವರಿಗೆ ಪಕ್ಷ ಟಿಕೆಟ್ ನೀಡಲಿದೆ ಎಂಬ ಕಾರಣಕ್ಕೆ ಈ ಹಿಂದೆ ಟ್ವೀಟ್ ಮಾಡಿರುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ್ದಾರೆ.

ಅತ್ಯಧಿಕ ಮತದಾರರನ್ನು ಹೊಂದಿರುವ ಕ್ಷೇತ್ರ

ಅತ್ಯಧಿಕ ಮತದಾರರನ್ನು ಹೊಂದಿರುವ ಕ್ಷೇತ್ರ

ಒಕ್ಕಲಿಗ, ಬ್ರಾಹ್ಮಣ ಸಮುದಾಯದ ಹೆಚ್ಚಿನ ಮತಗಳನ್ನು ಹೊಂದಿರುವ ಈ ಕ್ಷೇತ್ರಕ್ಕೆ ಪ್ರಚಾರ ಮಾಡುವುದೇ ದೊಡ್ಡ ಸವಾಲಾಗಿದೆ. ಏಕೆಂದರೆ ಈ ಕ್ಷೇತ್ರವು ಅತ್ಯಧಿಕ ಮತದಾರರು ಹಾಗೂ ವ್ಯಾಪ್ತಿಯನ್ನು ಹೊಂದಿರುವ ಕ್ಷೇತ್ರವಾಗಿದೆ. ಕಳೆದ 2018ರ ಚುನಾವಣೆಯಲ್ಲಿ ಒಂದು ಲಕ್ಷ ಹತ್ತು ಸಾವಿರಕ್ಕೂ ಹೆಚ್ಚು ಮತ ಪಡೆದ ಎಸ್‌ಟಿ ಸೋಮಶೇಖರ್ ಸುಮಾರು ಆರು ಸಾವಿರ ಮತಗಳಿಂದ ಜೆಡಿಎಸ್‌ ಅಭ್ಯರ್ಥಿ ಜವರಾಯಿ ಗೌಡ ಸೋಲನ್ನು ಅನುಭವಿಸಿದ್ದರು.

ಉಪ ಚುನಾವಣೆ: ಮೂಲ ಬಿಜೆಪಿಗರ ಅತೃಪ್ತಿ ಶಮನಕ್ಕೆ ತಂಡ ರಚನೆಉಪ ಚುನಾವಣೆ: ಮೂಲ ಬಿಜೆಪಿಗರ ಅತೃಪ್ತಿ ಶಮನಕ್ಕೆ ತಂಡ ರಚನೆ

English summary
BJP Leader and Actor Jaggesh statement over By election and Yashwanthpur BJP candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X