ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ಸೋಂಕಿತರ ಸಹಾಯಕ್ಕೆ ಬಿಜೆಪಿ ಕಾರ್ಯಕರ್ತರು: ಜೆಡಿಎಸ್, ಕಾಂಗ್ರೆಸ್ಸಿಗೆ ಅವಕಾಶವಿಲ್ಲವೇ?

|
Google Oneindia Kannada News

ಕೊರೊನಾ ನಿರ್ವಹಣೆಗೆ ಸರಕಾರಕ್ಕೆ ವಾರಿಯರ್ಸ್ ಸಮಸ್ಯೆ ಕಾಡುತ್ತಿದೆಯೇ? ಕೆಲವು ದಿನಗಳ ಹಿಂದೆ, "ರಾಜ್ಯ ಸರಕಾರೀ ನೌಕರರನ್ನು ಬೇಕಾದರೆ ಈ ಕೆಲಸಕ್ಕೆ ಬಳಸಿಕೊಳ್ಳಬಹುದು" ಎಂದು ಸಂಘದ ಅಧ್ಯಕ್ಷರು ಹೇಳಿಕೆಯನ್ನು ನೀಡಿದ್ದರು.

Recommended Video

Huawei out of UK ಭಾರತದ ನಂತರ ಚೀನಾಗೆ ದೊಡ್ಡ ಶಾಕ್ ಕೊಟ್ಟ ಬ್ರಿಟನ್ | Oneindia Kannada

ಈಗ, ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್, "ಬಿಜೆಪಿಯ ಕಾರ್ಯಕರ್ತರು ಕೋವಿಡ್-19 ಸಂತ್ರಸ್ತರ ಸಹಾಯಕ್ಕೆ ನೆರವಾಗಲಿದ್ದಾರೆ. ಪ್ರತೀ ಬೂತ್ ನಲ್ಲಿಯೂ ನಮ್ಮ ಕಾರ್ಯಕರ್ತರು ಇರಲಿದ್ದಾರೆ"ಎಂದು ಹೇಳಿದ್ದಾರೆ.

ಕೊರೊನಾ ಭೀತಿ; ಮಹಾನಗರಗಳಲ್ಲಿ ಬೆಂಗಳೂರು ಸುರಕ್ಷಿತ!ಕೊರೊನಾ ಭೀತಿ; ಮಹಾನಗರಗಳಲ್ಲಿ ಬೆಂಗಳೂರು ಸುರಕ್ಷಿತ!

ಲಾಕ್ ಡೌನ್ ದಿನಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರೂ, ಇಂತಹ ಕ್ಲಿಷ್ಟ ಪರಿಸ್ಥಿಯಲ್ಲಿ, ನಾವೂ ಸಾಮಾಜಿಕ ಕೆಲಸ ಮಾಡುತ್ತೇವೆ ಎಂದಿದ್ದರು. ಆದರೆ, ಯಡಿಯೂರಪ್ಪ ಸರಕಾರ ಅನುಮತಿ ನೀಡಿರಲಿಲ್ಲ. ಇದು, ಸರಕಾರ ಮತ್ತು ವಿರೋಧ ಪಕ್ಷದ ವಾಕ್ಸಮರಕ್ಕೆ ಕಾರಣವಾಗಿತ್ತು.

ಬೆಂಗಳೂರಿನಲ್ಲಿ ಶತಮಾನದ ಹಿಂದೆ ಜಾರಿಯಾಗಿತ್ತು ಲಾಕ್‌ಡೌನ್!ಬೆಂಗಳೂರಿನಲ್ಲಿ ಶತಮಾನದ ಹಿಂದೆ ಜಾರಿಯಾಗಿತ್ತು ಲಾಕ್‌ಡೌನ್!

ಮನುಕುಲಕ್ಕೆ ಎದುರಾಗಿರುವ ಈ ಆರೋಗ್ಯ ಸಂಕಷ್ಟಕ್ಕೆ ಜಾತಿ,ಧರ್ಮ, ಪಕ್ಷದ ಬೇಧಬಾವವಿಲ್ಲ. ಎಲ್ಲರೂ ಈ ಸಮಯದಲ್ಲಿ ಒಗ್ಗಟ್ಟಾಗಿ ಶ್ರಮಿಸಿ, ವೈರಸ್ ನಿಂದ ಮುಕ್ತವಾದರೆ, ರಾಜಕೀಯ ಮುಂದಿನ ವರ್ಷದಿಂದಾರೂ ಮಾಡಬಹುದು.

ಸಾಮಾಜಿಕ ಸಂಘಟನೆಗಳು ಊಟ, ತಿಂಡಿ, ಕಿಟ್ ನೀಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವು

ಸಾಮಾಜಿಕ ಸಂಘಟನೆಗಳು ಊಟ, ತಿಂಡಿ, ಕಿಟ್ ನೀಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವು

ಲಾಕ್ ಡೌನ್ ವೇಳೆ ವಿವಿಧ ಸಾಮಾಜಿಕ ಸಂಘಟನೆಯ ಜೊತೆ, ಸಂಘ ಪರಿವಾರವೂ ಊಟ, ತಿಂಡಿ, ಕಿಟ್ ನೀಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವು. ಆ ವೇಳೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಮ್ಮ ಕಾರ್ಯಕರ್ತರಿಗೂ ಸಮಾಜಮುಖಿ ಕೆಲಸ ಮಾಡಲು ಅನುಮತಿ ಕೋರಿದ್ದರು. ಆದರೆ, ಸರಕಾರ ಅನುಮತಿ ಕೊಡಲಾಗುವುದಿಲ್ಲ ಎಂದಿತ್ತು.

ಕಾಂಗ್ರೆಸ್ ಕೋವಿಡ್ ಫಂಡ್

ಕಾಂಗ್ರೆಸ್ ಕೋವಿಡ್ ಫಂಡ್

"ಬಿಜೆಪಿಯವರು ಇಂತಹ ಪರಿಸ್ಥಿತಿಯಲ್ಲೂ ರಾಜಕೀಯ ಲಾಭ ಪಡೆದುಕೊಳ್ಳಲು ನೋಡುತ್ತಿದ್ದಾರೆಂದು" ಡಿಕೆಶಿ, ಕಾಂಗ್ರೆಸ್ ಕೋವಿಡ್ ಫಂಡ್ ಸ್ಥಾಪಿಸಿದ್ದರು. ತನ್ನ ಎಲ್ಲಾ ಜನಪ್ರತಿನಿಧಿಗಳಿಗೆ ಕನಿಷ್ಠ ಒಂದು ಲಕ್ಷ ದೇಣಿಗೆ ನೀಡಬೇಕು ಎನ್ನುವ ಫರ್ಮಾನು ಹೊರಡಿಸಿದ್ದರು. ಜೊತೆಗೆ, ಕಾಂಗ್ರೆಸ್ ಶಾಸಕರು/ಸಂಸದರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ, ಕಿಟ್ ವಿತರಿಸುವ ಕೆಲಸವನ್ನೂ ಮಾಡಿದ್ದರು.

ಬಿಜೆಪಿ ಕಾರ್ಯಕರ್ತರ ವರ್ಚುವಲ್ ರ‍್ಯಾಲಿ

ಬಿಜೆಪಿ ಕಾರ್ಯಕರ್ತರ ವರ್ಚುವಲ್ ರ‍್ಯಾಲಿ

ಈಗ, ಮಲ್ಲೇಶ್ವರ ಮತ್ತು ಹೆಬ್ಬಾಳ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ವರ್ಚುವಲ್ ರ‍್ಯಾಲಿಯಲ್ಲಿ, "ಇನ್ನೆರಡು ದಿನಗಳಲ್ಲಿ, ಬಿಜೆಪಿ ಕಾರ್ಯಕರ್ತರು ಕೊರೊನಾ ವಾರಿಯರ್ ಗಳಾಗಿ ಕೆಲಸ ಮಾಡಲಿದ್ದಾರೆ" ಎನ್ನುವ ಹೇಳಿಕೆಯನ್ನು ಡಿಸಿಎಂ ಡಾ.ಅಶ್ವಥ್ ನಾರಾಯಣ್ ನೀಡಿದ್ದಾರೆ. ಪ್ರತೀ ವಾರ್ಡ್ ನಲ್ಲೂ ಆರೋಗ್ಯವಂತ ಐವತ್ತು ಕಾರ್ಯಕರ್ತರು ಜನಸೇವೆಗಾಗಿ ಮುಂದಾಗಲಿದ್ದಾರೆ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

ಕೊರೊನಾ ತೀವ್ರವಾಗಿ ಹರಡುತ್ತಿರುವ ಈ ಸಮಯದಲ್ಲಿ

ಕೊರೊನಾ ತೀವ್ರವಾಗಿ ಹರಡುತ್ತಿರುವ ಈ ಸಮಯದಲ್ಲಿ

ಕೊರೊನಾ ತೀವ್ರವಾಗಿ ಹರಡುತ್ತಿರುವ ಈ ಸಮಯದಲ್ಲಿ ಒಂದು ಕಡೆ ಬೆಡ್ ಸಮಸ್ಯೆ, ಇನ್ನೊಂದು ಕಡೆ ಅಂಬುಲೆನ್ಸ್ ಸಮಸ್ಯೆ, ಮತ್ತೊಂದು ಕಡೆ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳು ಎಡ್ಮಿಟ್ ಆಗುವ ವಿಚಾರದ ಸಮಸ್ಯೆ. ಇದು, ಮನುಷ್ಯ ಮನುಷ್ಯನಿಗೆ ಆಗಿಬರಬೇಕಾದ ಸಮಯ. ಇಲ್ಲಿ ಪಕ್ಷಬೇಧ ಮಾಡದೇ, ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರೂ ಕೋವಿಡ್ ಸೋಂಕಿತರ ಸಹಾಯಕ್ಕೆ ವಾರಿಯರ್ಸ್ ಆಗಿ ಬರುತ್ತಾರೆ ಎಂದರೆ, ಯಡಿಯೂರಪ್ಪನವರು ರಾಜಕೀಯ ಮುತ್ಸದ್ದಿತನ ತೋರಬೇಕಿದೆ.

English summary
BJP Karyakartas As Corona Warriors In Each Bengaluru Booth; Will Government Allow JDS And Congress?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X