ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಮಲ್ ನಾಥ್ 'ಚಡ್ಡಿ' ಹೇಳಿಕೆಗೆ, ಬಿಜೆಪಿಯಿಂದ ಸಖತ್ ಪ್ರತ್ಯುತ್ತರ

|
Google Oneindia Kannada News

ಭೋಪಾಲ್, ಏಪ್ರಿಲ್ 15: ಈಗಿನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಿಯಾಗಿ ಪಾಯ್ಜಾಮಾ, ಚಡ್ಡಿ ಹಾಕಿಕೊಳ್ಳುವುದಕ್ಕೂ ಬಾರದ ಸಮಯದಲ್ಲಿ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಭಾರತೀಯ ಸೇನೆ ಕಟ್ಟಿದ್ದರು ಎಂಬ ಕಮಲ್ ನಾಥ್ ಹೇಳಿಕೆ ಬಿಜೆಪಿ ಪ್ರತ್ಯುತ್ತರ ನೀಡಿದೆ.

ಒಂಡಿಲ್ಲೊಂದು ಕ್ರಿಯೇಟಿವ್ ಟ್ವೀಟ್ ಮಾಡುವುದರಲ್ಲಿ ಎಂದಿಗೂ ಅಗ್ರಸ್ಥಾನ ಕಾಯ್ದುಕೊಂಡಿರುವ ಬಿಜೆಪಿ ಕರ್ನಾಟಕ ಟ್ವಿಟ್ಟರ್ ಖಾತೆ ಕಮಲ್ ನಾಥ್ ಅವರಿಗೆ ಸಖತ್ತಾಗಿ ಪ್ರತಿಕ್ರಿಯೆ ನೀಡಿದೆ.

ಮುಖ್ಯಮಂತ್ರಿ ಮಗ ಬರೋಬ್ಬರಿ 660 ಕೋಟಿ ರೂಪಾಯಿ ಒಡೆಯ!ಮುಖ್ಯಮಂತ್ರಿ ಮಗ ಬರೋಬ್ಬರಿ 660 ಕೋಟಿ ರೂಪಾಯಿ ಒಡೆಯ!

"ಕಮಲ್ ನಾಥ್ ಹೇಳುತ್ತಾರೆ, 'ನರೇಂದ್ರ ಮೋದಿ ಅವರಿಗತೆ ಚಡ್ಡಿ ಹಾಕಿಕೊಳ್ಳುವುದು ಹೇಗೆ ಎಂದು ಗೊತ್ತಿಲ್ಲದ ಕಾಲದಲ್ಲೇ ನೆಹರೂ, ಇಂದಿರಾ ಭಾರತೀಯ ಸೇನೆ ಕಟ್ಟಿದ್ದರು' ಎಂದಿದ್ದಾರೆ. ಆದರೆ ಭಾರತೀಯ ಸೇನೆಯನ್ನು ಕಟ್ಟಿದ್ದು 1895 ರಲ್ಲಿ. ನೆಹರು ಹುಟ್ಟಿದ್ದು 1889 ರಲ್ಲಿ. ಆರು ವರ್ಷ ವಯಸ್ಸಿನ ನೆಹರು ಭಾರತೀಯ ಸೇನೆ ಕಟ್ಟಿದ್ದರೆ? ಅಷ್ಟಕ್ಕೂ ಆಗ ನೆಹರು ಏನು ಧರಿಸಿದ್ದರು ಎಂದು ಕಮಲ್ ನಾಥ್ ಸ್ಪಷ್ಟಪಡಿಸಲಿ" ಎಂದು ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿದೆ.

BJP Karnatakas creative answer to Kamal Naths statement

ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಖಾಂದ್ವಾ ಜಿಲ್ಲೆಯ ಹರ್ಸುದ್ ನಲ್ಲಿ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದ ಕಮಲ್ ನಾಥ್, "ಮೋದಿ ಎಂದಿಗೂ ದೇಶದ ಭದ್ರತೆ ಬಗ್ಗೆ ಮಾತನಾಡುತ್ತಾರೆ. ಆದರೆ ಅತೀ ಹೆಚ್ಚು ಉಗ್ರದಾಳಿ ನಡೆದಿದ್ದು ಬಿಜೆಪಿ ಆಡಳಿತದ ಅವಧಿಯಲ್ಲಿ. ದೇಶದ ಭದ್ರತೆಯ ಬಗ್ಗೆ ಮಾತನಾಡುವ ಮೋದಿ, ಸೇನೆಯ ಶ್ರೇಯಸ್ಸನ್ನು ತಾವು ತೆಗೆದುಕೊಳ್ಳುತ್ತಾರೆ. ಮೋದಿ ಅವರಿಗೆ ಗೊತ್ತಿರಲಿ, ಅವರು ಚಡ್ಡಿ ಧರಿಸುವುದನ್ನು ಕಲಿಯುವ ಮೊದಲೇ ನೆಹರು, ಇಂದಿರಾ ಭಾರತೀಯ ಸೇನೆ ಕಟ್ಟಿದ್ದರು" ಎಂದಿದ್ದರು.

English summary
BJP Karnataka one of the most creative Twitter handles tweeted, "Kamal Nath says, “Nehru, Indira Built Army When Narendra Modi Didn't Even Learn to Wear Pants” Indian Army was established in 1895. Nehru was born in 1889. A 6-year-old Nehru built Indian army?Will Kamal Nath also clarify what was Nehru wearing then?"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X