ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಒಡೆದ ಮನೆ : ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 08 : ಬಿಜೆಪಿ ಒಡೆದ ಮನೆಯಂತಾಗಿದೆ ಹಾಗಾಗಿ ಉಮೇಶ್ ಕತ್ತಿಯಂತಹ ಹಿರಿಯ ನಾಯಕರು ಬಿಜೆಪಿ ನಾಯಕತ್ವದ ವಿರುದ್ಧ ವಾಗ್ಧಾಳಿ ಮಾಡುವಂತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹೇಳಿದರು.

ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಉಮೇಶ್ ಕತ್ತಿ ನನ್ನ ಜತೆ ಮಾತುಕತೆ ನಡೆಸಿಲ್ಲ. ಆದರೆ ಸಿಎಂ ಜತೆ ಮಾತುಕತೆ ನಡೆಸಿರಬಹುದು. ಆದರೆ ಉಮೇಶ್ ಕತ್ತಿ ಕಾಂಗ್ರೆಸ್ ಗೆ ಬಂದರೆ ಸ್ವಾಗತಿಸುತ್ತೇವೆ. ಹೈಕಮಾಂಡ್ ಜತೆ ಚರ್ಚಿಸಿ ತೀರ್ಮಾಣ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

BJP is a divided house: KPCC Prez

೨೦೧೮ರಲ್ಲಿ ಕಾಂಗ್ರೆಸ್ ಗೆಲ್ಲುವುದು ಖಚಿತವಾಗಿರುವುದರಿಂದ ವಿರೋಧಪಕ್ಷಗಳಿಗೆ ಹೆಸರಿಕೆ ಉಂಟಾಗಿದೆ. ಹಾಗಾಗಿ ಕಾಂಗ್ರೆಸ್ ನಾಯಕರ ಯಾತ್ರೆ ಬಗ್ಗೆ ಇಲ್ಲ ಸಲ್ಲದ ವದಂತಿ ಹಮ್ಮಿಸುತ್ತಿದ್ದಾರೆ. ಸಿಎಂ ಸರ್ಕಾರಿ ಕಾರ್ಯಕ್ರಮಗಳ ಉದ್ಘಾಟನೆಗೆ ಐವತ್ತು ಕೋಟಿ ಖರ್ಚು ಎನ್ನುವುದು ಸುಳ್ಳು.

ಸಿಎಂ ಹಾರ ಹಾಕಿದ್ದು, ಸ್ವಾಗತಿಸಿದ್ದಕ್ಕೆಲ್ಲ ಲೆಕ್ಕ ಕೇಳಿದರೆ ಹೇಗೆ. ಈ ಹಿಂದೆ ಸಿಎಂ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮಾಡಿಲ್ಲವಾ ಎಂದು ಪ್ರಶ್ನಿಸಿದರು. ಬಿಜೆಪಿಯಲ್ಲಿ ಯಡಿಯೂರಪ್ಪನವರನ್ನು ಬೇರೆ ಇಡುವ ಪ್ರಯತ್ನ ನಡೆದಿದೆ. ಮೂಲ ಬಿಜೆಪಿಗರು ಇನ್ನೂ ಯಡಿಯೂರಪ್ಪ ಕೆಜೆಪಿ ಪಕ್ಷದವರು ಎಂಬ ಭಾವನೆ ಇದೆ ಎಂದರು.

English summary
KPCC president Dr. G Parameshwar opined that the state BJP id divided house as former minister Umesh Katti criticized their party leadership.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X