ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ರಚಿಸಿದ್ದ ಎಸಿಬಿ ರದ್ದು?: ಬಿಎಸ್‌ವೈ ಪ್ಲ್ಯಾನ್ ಏನು?

|
Google Oneindia Kannada News

Recommended Video

ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಹೆಜ್ಜೆ ಇಟ್ಟ ಬಿ ಎಸ್ ಯಡಿಯೂರಪ್ಪ | Oneindia Kannada

ಬೆಂಗಳೂರು, ಆಗಸ್ಟ್ 2: ಸಿದ್ದರಾಮಯ್ಯ ಸರ್ಕಾರ ರಚಿಸಿದ್ದ ಎಸಿಬಿಯನ್ನು ರದ್ದುಗೊಳಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದು ನಿಂತಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಭ್ರಷ್ಟಾಚಾರ ನಿಗ್ರಹ ದಳ ನಿಷ್ಕ್ರಿಯಗೊಳಿಸಲು ಹಿಂದಿನಂತೆ ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅಧಿಕಾರ ನೀಡುವ ಬಗ್ಗೆ ಚರ್ಚೆ ನಡೆದಿದೆ. ಸರ್ಕಾರಕೂಡ ಈ ನಿಟ್ಟಿನಲ್ಲಿ ಚಿಂತನೆ ಆರಂಭಿಸಿದೆ.

ತೆಲಂಗಾಣದಲ್ಲಿ ಸಿಎಂ ಯಡಿಯೂರಪ್ಪ ಟೆಂಪಲ್ ರನ್ತೆಲಂಗಾಣದಲ್ಲಿ ಸಿಎಂ ಯಡಿಯೂರಪ್ಪ ಟೆಂಪಲ್ ರನ್

ಲೋಕಾಯುಕ್ತ ಎಂಬುದು ಅರೆ ನ್ಯಾಯಾಂಗ ಸಂಸ್ಥೆ , ಭ್ರಷ್ಟಾಚಾರ ತಡೆ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲು ಅದಕ್ಕೆ ಅಧಿಕಾರವಿತ್ತು. ಈ ದೂರುಗಳ ತನಿಖೆಗೆ ಪೊಲೀಸ್ ವಿಭಾಗವನ್ನೂ ಹೊಂದಿತ್ತು.

BJP Government Want to Give Special Power to Lokayukta

ಲೋಕಾಯುಕ್ತ ಸಂಸ್ಥೆ ಬಲವನ್ನು ಕುಸಿಯುವಂತೆ ಮಾಡಿ ಅದರ ಪರಮಾಧಿಕಾರವನ್ನು ಕಿತ್ತುಕೊಳ್ಳುವ ಸಲುವಾಗಿಯೇ ಎಸಿಬಿಯನ್ನು ಸ್ಥಾಪಿಸಲಾಗಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು.

ಪ್ರತಿಪಕ್ಷದ ಸ್ಥಾನದಲ್ಲಿದ್ದ ಬಿಜೆಪಿ ಕೂಡ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿತ್ತು. ನಂತರದ ಚುನಾವಣೆಗಳಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಗಳಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡುವುದಾಗಿ ಘೋಷಣೆ ಕೂಡ ಮಾಡಿತ್ತು.

ಟಿಪ್ಪು ಜಯಂತಿ ರದ್ದು: ಸದನದಲ್ಲಿ ವಿಪಕ್ಷಗಳ ಆಕ್ರೋಶ ಟಿಪ್ಪು ಜಯಂತಿ ರದ್ದು: ಸದನದಲ್ಲಿ ವಿಪಕ್ಷಗಳ ಆಕ್ರೋಶ

ಇದೀಗ ಆ ಭರವಸೆ ಈಡೇರಿಸುವ ಸಂಬಂಧ ತೆರೆಮರೆಯಲ್ಲಿ ಪ್ರಯತ್ನಗಳು ಆರಂಭವಾಗಿವೆ.ಹಾಗೆಂದ ಮಾತ್ರಕ್ಕೆ ಏಕಾಏಕಿಯಾಗಿ ಈ ನಿರ್ಧಾರವನ್ನು ಕೈಗೊಳ್ಳುವುದಿಲ್ಲ.ಸಾಧಕ ಬಾಧಕಗಳನ್ನು ಚರ್ಚಿಸಿ, ಸಂಪುಟ ವಿಸ್ತರಣೆ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಆದರೆ ಲೋಕಾಯುಕ್ತ ಕಾಯ್ದೆಯಡಿ ಕೆಲಸ ನಿರ್ವಹಿಸಲು ಮಾತ್ರ ಲೋಕಾಯುಕ್ತಕ್ಕೆ ಅವಕಾಶ ನೀಡಿ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆ ನಡೆಸಲೆಂದು ಎಸಿಬಿ ಎಂಬ ಹೊಸ ಸಂಸ್ಥೆಯನ್ನು ಸರ್ಕಾರ 2016ರ ಮಾರ್ಚ್‌ನಲ್ಲಿ ಹುಟ್ಟುಹಾಕಿತ್ತು.

ಯಾವುದೇ ಭ್ರಷ್ಟ ಅಧಿಕಾರಿ ವಿರುದ್ಧ ತನಿಖೆ ನಡೆಸುವ ಮೊದಲು ಸರ್ಕಾರದ ಪೂರ್ವಾನುಮತಿಯನ್ನು ಎಸಿಬಿ ಪಡೆಯಬೇಕು. ಇದು ಆಕ್ರೋಶಕ್ಕೆ ಕಾರಣವಾಗಿತ್ತು.

English summary
BS Yeddyurappa lead Government want to give special power to Lokayukta again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X