ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಯನ್ನು ಭ್ರಷ್ಟರ ಸಂತೆಯಾಗಿಸಿದೆ ಬಿಜೆಪಿ ಸರ್ಕಾರ?

|
Google Oneindia Kannada News

ಬಿಬಿಎಂಪಿಯ ಯೋಜನೆಗಳ ವಿಭಾಗದ ಮುಖ್ಯ ಇಂಜಿನಿಯರ್ ಆಗಿ ಎನ್.ಜಿ.ಗೌಡಯ್ಯ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ಈ ಎನ್.ಜಿ. ಗೌಡಯ್ಯ 2018ರಲ್ಲಿ 6,000 ಕೋಟಿ ಅಕ್ರಮ ಆಸ್ತಿ ಸಂಪಾದಿಸಿ ಐಟಿ ತನಿಖೆಯಲ್ಲಿ ಸಿಕ್ಕಿಬಿದ್ದ ಒಬ್ಬ ಭ್ರಷ್ಟ ಅಧಿಕಾರಿ. ಇವರನ್ನು ಮತ್ತೆ ಬಿಬಿಎಂಪಿಯ ಮುಖ್ಯ ಇಂಜಿನಿಯರ್ (ಯೋಜನೆ) ಆಗಿ ನೇಮಿಸಿರುವುದು ಬಿಬಿಎಂಪಿಯನ್ನು ಭ್ರಷ್ಟಚಾರದ ಎಟಿಎಂ ಮಾಡಿಕೊಳ್ಳಲು ಸರ್ಕಾರ ಮುಂದಾಗಿರುವಂತಿದೆ ಎಂದು ಆಮ್ ಅದ್ಮು ಪಕ್ಷ ಅರೋಪಿಸಿದೆ.

Recommended Video

ರಾಹುಲ್ ದ್ರಾವಿಡ್ ಬಳಿ ಬಂದ ಹಾರ್ದಿಕ್ ಪಾಂಡ್ಯ | Rahul Dravid | Hardik Pandya | Oneindia Kannada

2008-13ರವರೆಗೆ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನೇತೃತ್ವದ ಆಡಳಿತದಲ್ಲಿ ದೇಶವೇ ಕರ್ನಾಟಕದತ್ತ ತಿರುಗಿ ನೋಡುವಷ್ಟು ಭ್ರಷ್ಟಾಚಾರಗಳನ್ನು ನಡೆಸಿದ್ದಾರೆ. ಜನಾರ್ಧನ ರೆಡ್ಡಿಯ ಅಕ್ರಮ ಗಣಿಗಾರಿಕೆ ಹಗರಣ, ಕಟ್ಟಾ ಸುಬ್ರಮಣ್ಯ ನಾಯ್ಕರ ಭೂ ಕಬಳಿಕೆ ಹಗರಣ, ವಿ.ಸೋಮಣ್ಣ ಅಕ್ರಮ ಗಣಿಗಾರಿಕೆ ಮತ್ತು ಡಿನೋಟಿಫಿಕೇಷನ್ ಹಗರಣಗಳಲ್ಲಿ ಭಾಗಿಯಾಗಿ ದೇಶದಲ್ಲಿ ಅತೀ ದೊಡ್ಡ ಭ್ರಷ್ಟಾಚಾರಿ ಸರ್ಕಾರವೆಂದು ದೇಶಾದ್ಯಂತ ಕುಖ್ಯಾತಿ ಪಡೆದುಕೊಂಡು ಕರ್ನಾಟಕದ ಮಾನ ಕಳೆದಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರೇ ಖೈದಿಯಾಗಿ (10462) ಜೈಲು ಸೇರುವ ಮಟ್ಟಕ್ಕೆ ಬಿಜೆಪಿ ಸರ್ಕಾರ ಭ್ರಷ್ಟಾಚಾರ ನಡೆಸಿತ್ತು. ಅಲ್ಲದೆ ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕಡತಗಳಿದ್ದ ಕಚೇರಿಯನ್ನೇ ಸುಟ್ಟುಹಾಕಿದ್ದರು.

ಬಿಬಿಎಂಪಿ ಚುನಾವಣಾ ತಯಾರಿಗಾಗಿ ಎಎಪಿ ಅಧ್ಯಕ್ಷರ ನೇಮಕಬಿಬಿಎಂಪಿ ಚುನಾವಣಾ ತಯಾರಿಗಾಗಿ ಎಎಪಿ ಅಧ್ಯಕ್ಷರ ನೇಮಕ

ತನ್ನ ಹಳೇ ಚಾಳಿಯನ್ನು ಮತ್ತೆ ಮುಂದುವರೆಸುವುದಕ್ಕೆ ಬಿಜೆಪಿ ಸರ್ಕಾರ ಮುಂದಾಗಿದೆ. ಅದರ ಮೊದಲ ಹಂತವಾಗಿ ಈಗಾಗಲೇ ಎಸಿಬಿಯ ತನಿಖೆಗೆ ಒಳಗಾಗಿ 6 ಕೋಟಿ ಅಕ್ರಮ ಆಸ್ತಿ ಸೀಜ್ ಮಾಡಲ್ಪಟ್ಟಿರುವ ಒಬ್ಬ ಭ್ರಷ್ಟ ಅಧಿಕಾರಿಯನ್ನು ಬಿಬಿಎಂಪಿ ಪ್ರಮುಖ ವಿಭಾಗಕ್ಕೆ ಚೀಫ್ ಆಗಿ ನೇಮಕ ಮಾಡಿದ್ದಾರೆ. ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಇವರ ಕಣ್ಣಿಗೆ ಕಾಣಿಸುತ್ತಿಲ್ಲವೇ? ಒಬ್ಬ ಭ್ರಷ್ಟನನ್ನು ಬಿಬಿಎಂಪಿ ಮುಖ್ಯ ಇಂಜಿನಿಯರ್ ಆಗಿ ನೇಮಿಸಲು ನಗರಾಭಿವೃದ್ಧಿ ಇಲಾಖೆಯ ಸಚಿವರೂ ಆಗಿರುವ ಮುಖ್ಯಂಮಂತ್ರಿ ಯಡಿಯೂರಪ್ಪನವರು ಕಮಿಷನ್ ಪಡೆದಿದ್ದಾರೆಯೇ ಎಂಬ ಅನುಮಾನ ಹುಟ್ಟುತ್ತಿದೆ. ಬಿಬಿಎಂಪಿಯನ್ನು ಭ್ರಷ್ಟರ ಕೊಂಪೆಯನ್ನಾಗಿಸಿ ಲೂಟಿ ಮಾಡುವ ಹುನ್ನಾರವಿದ್ದಂತೆ ಕಾಣುತ್ತಿದೆ.

BJP government made BBMP most corrupted: AAP

ತಾನೊಬ್ಬ ಪ್ರಮಾಣಿಕ ಹಾಗೂ ತಾನೇ ಬೆಂಗಳೂರು ಅಭಿವೃದ್ಧಿ ಮಂತ್ರಿ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣರಿಗೆ ಹಾಗೂ ಸರ್ಕಾರಕ್ಕೆ ಸ್ವಲ್ಪವಾದರೂ ನೈತಿಕತೆ ಉಳಿದ್ದರೆ ಎನ್.ಜಿ.ಗೌಡಯ್ಯರನ್ನು ಕೆಲಸದಿಂದ ವಜಾಗೊಳಿಸಿ, ಕಾನೂನು ಕ್ರಮ ಕೈಗೊಳ್ಳುಬೇಕು. ಇಂತಹ ಭ್ರಷ್ಟರ ನೇಮಕವನ್ನು ತಡೆಹಿಡಿಯಬೇಕು. ಇಲ್ಲವಾದರೆ ಮುಖ್ಯಮಂತ್ರಿಗಳ ಮನೆ ಮುಂದೆ ಹಾಗೂ ಬಿಬಿಎಂಪಿ ಕಚೇರಿ ಮುಂದೆ ಆಮ್ ಆದ್ಮಿ ಪಕ್ಷವು ಧರಣಿ ನಡೆಸುತ್ತದೆ ಎಂದು ಎಚ್ಚರಿಸುತ್ತದೆ.

English summary
BJP government made BBMP most corrupted, BBMP chief engineer N.G Gowdaiah is accused having of illegal assets yet government not taken any action against him question AAP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X