ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಸ್ಲಿಮರು ಮೇಲೆ ದ್ವೇಷಕ್ಕೆ ಟಿಪ್ಪು ಜಯಂತಿ ರದ್ದು: ಸಿದ್ದರಾಮಯ್ಯ ಆರೋಪ

|
Google Oneindia Kannada News

ಬೆಂಗಳೂರು, ಜುಲೈ 30: ಮುಸ್ಲೀಮರ ಮೇಲಿನ ದ್ವೇಷದಿಂದಾಗಿ ಬಿಜೆಪಿ ಸರ್ಕಾರವು ಟಿಪ್ಪು ಜಯಂತಿಯನ್ನು ರದ್ದು ಮಾಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದರು.

ಎಸ್‌.ಎಂ.ಕೃಷ್ಣ ಮನೆಗೆ ಭೇಟಿ ನೀಡಿ ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿಯನ್ನು ರದ್ದು ಮಾಡಿ ಸರ್ಕಾರವು ದೊಡ್ಡ ಅಪರಾಧ ಮಾಡಿದೆ ಎಂದು ಹೇಳಿದರು.

ಟಿಪ್ಪು ಅಲ್ಪಸಂಖ್ಯಾತರಿಗೆ ಸೇರಿದವರು ಎಂಬ ಕಾರಣಕ್ಕೆ ನಾವು ಟಿಪ್ಪು ಜಯಂತಿ ಆಚರಿಸುತ್ತಿರಲಿಲ್ಲ, ಆತ ಸ್ವಾತಂತ್ರ್ಯ ಹೋರಾಟಗಾರ, ಮೈಸೂರು ಸಂಸ್ಥಾನಕ್ಕೆ ಟಿಪ್ಪು ನೀಡಿದ ಕೊಡುಗೆಗಳನ್ನು ಪರಿಗಣಿಸಿ ಟಿಪ್ಪು ಜಯಂತಿ ಆಚರಣೆ ಪ್ರಾರಂಭಿಸಿದ್ದೆವು ಎಂದು ಹೇಳಿದರು.

BJP government hate Muslim so it canceled Tippu Jayanthi: Siddaramaiah

ನೀರಾವರಿ ಯೋಜನೆ, ಶಸ್ತ್ರಾಸ್ತ್ರ ತಯಾರಿ, ಬ್ರಿಟೀಷರ ವಿರುದ್ಧ ಮಾಡಿದ ಹೋರಾಟ, ಆಡಳಿತದಲ್ಲಿ ತಂದ ಮಾರ್ಪಾಡುಗಳು ಇನ್ನೂ ಹಲವು ವಿಷಯಗಳನ್ನು ಪರಿಗಣಿಸಿ ಟಿಪ್ಪು ಜಯಂತಿ ಮಾಡುತ್ತಿದ್ದೆವು, ಆದರೆ ಕೋಮಿನ ವಿಷಯ ಮುಂದೆ ಇಟ್ಟುಕೊಂಡು ಸರ್ಕಾರವು ಟಿಪ್ಪು ಜಯಂತಿಯನ್ನು ರದ್ದು ಮಾಡಿದೆ. ನಾವಿದನ್ನು ಖಂಡಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

English summary
BJP government hate Muslim so it canceled Tippu Jayanthi said Siddaramaiah. He said we celebrated Tipu Anniversery because he is a patriote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X