ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೌದು ಹುಲಿಯಾಗಿಂತ ರಾಜಾಹುಲಿ ದೊಡ್ಡದು: ಸಿದ್ದರಾಮಯ್ಯ ಕಾಲೆಳೆದ ಅಶೋಕ್

|
Google Oneindia Kannada News

ಬೆಂಗಳೂರು, ಜನವರಿ 27: ಹೌದು ಹುಲಿಯಾಗಿಂತ ರಾಜಾ ಹುಲಿ ದೊಡ್ಡದು,ರಾಜಾ ಹುಲಿಗೆ ಸರ್ಕಾರ ಹೇಗೆ ನಡೆಸಬೇಕು ಅಂತ ಗೊತ್ತಿದೆ,ಸಿದ್ದರಾಮಯ್ಯ ಅದನ್ನು ಯಡಿಯೂರಪ್ಪಗೆ ಹೇಳಿಕೊಡುವ ಅಗತ್ಯ ಇಲ್ಲ ಎಂದು ಸಚಿವ ಆರ್ ಅಶೋಕ್ ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ.

ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಿತ್ರ ಮಂಡಳಿ ಶಾಸಕರಿಂದ ಒತ್ತಡ ಇದೆ ಎಂದು ಕೊನೆಗೂ ಅಶೋಕ್ ಒಪ್ಪಿಕೊಂಡಿದ್ದು, ನಾನೂ ಕೂಡಾ ಹಲವರನ್ನು ಬಿಜೆಪಿಗೆ ಕರೆದುಕೊಂಡು ಬಂದಿದ್ದೇನೆ.ಅವರೆಲ್ಲ ಮಂತ್ರಿ ಮಂಡಲ ಯಾವಾಗ ಅಂತ ನನಗೂ ಕೇಳುತ್ತಿದ್ದಾರೆ.ಇದನ್ನು ನಾನು ಸಿಎಂ ಅವರ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.

 ಯಾರೆಲ್ಲಾ ಸರ್ಕಾರ ರಚನೆಗೆ ಕಾರ್ಯಕರ್ತರೋ ಅವರಿಗೆ ಸಚಿವ ಸ್ಥಾನ

ಯಾರೆಲ್ಲಾ ಸರ್ಕಾರ ರಚನೆಗೆ ಕಾರ್ಯಕರ್ತರೋ ಅವರಿಗೆ ಸಚಿವ ಸ್ಥಾನ

ಯಾರು ಉಪಚುನಾವಣೆಯಲ್ಲಿ ಗೆದ್ದಿದ್ದಾರೋ ಅವರಿಗೆ ಸಚಿವ ಸ್ಥಾನ ಕೊಡಲು ನಿರ್ಧಾರ ಆಗಿದೆ.ಯಾರೆಲ್ಲ ಸರ್ಕಾರ ರಚನೆಗೆ ಕಾರಣಕರ್ತರೋ ಅವರಿಗೆ ಸಂಪುಟದಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. ಉಳಿದವರ ಬಗ್ಗೆ ಮುಖ್ಯಮಂತ್ರಿಗಳು ಚರ್ಚಿಸಿ ನಿರ್ಧರಿಸುತ್ತಾರೆ.ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂದು ಅಶೋಕ್ ಪರೋಕ್ಷ ಹೇಳಿಕೆ ನೀಡಿದ್ದಾರೆ.

ಸಚಿವ ಸಂಪುಟ ವಿಸ್ತರಣೆ: ಆರ್. ಅಶೋಕ್ ನೀಡಿದ ಬ್ರೇಕಿಂಗ್ ನ್ಯೂಸ್ಸಚಿವ ಸಂಪುಟ ವಿಸ್ತರಣೆ: ಆರ್. ಅಶೋಕ್ ನೀಡಿದ ಬ್ರೇಕಿಂಗ್ ನ್ಯೂಸ್

 ಚುನಾವಣೆಗೂ ಮುನ್ನ ಸಿಎಂ ಕೆಲವರೊಂದಿಗೆ ಚರ್ಚಿಸಿದ್ದಾರೆ

ಚುನಾವಣೆಗೂ ಮುನ್ನ ಸಿಎಂ ಕೆಲವರೊಂದಿಗೆ ಚರ್ಚಿಸಿದ್ದಾರೆ

ಚುನಾವಣೆಗೂ ಮುನ್ನ ಕೆಲವರ ಜೊತೆ ಸಿಎಂ ಚರ್ಚೆ ಮಾಡಿದ್ದಾರೆ, ಸೋತವರಿಗೆ ಯಾವ ಸ್ಥಾನ ಅಂತ ಮುಂದೆ ಸಿಎಂ ಯೋಚನೆ ಮಾಡುತ್ತಾರೆ. ಸೋತವರಿಗೆ ಮಂತ್ರಿ ಸ್ಥಾನ ಕೊಡಲು ತೊಡಕಿದೆ.ಗೆದ್ದ ಮೇಲೆ ಅವರಿಗೆ ಮಂತ್ರಿಸ್ಥಾನ ಕೊಡಬೇಕು ಅಂತ ಸುಪ್ರೀಂಕೋರ್ಟ್ ಆದೇಶ ಇದೆ.ಹಾಗಾಗಿ ಸೋತವರಿಗೆ ಮಂತ್ರಿ ಸ್ಥಾನ ಕೊಡುವ ಪ್ರಸ್ತಾವನೆ ಸರ್ಕಾರದ ಮುಂದೆ ಈಗ ಇಲ್ಲ ಎಂದರು.

 ಸಿದ್ದರಾಮಯ್ಯ ಕಾಲೆಳೆದ ಅಶೋಕ್

ಸಿದ್ದರಾಮಯ್ಯ ಕಾಲೆಳೆದ ಅಶೋಕ್

ಹೌದು ಹುಲಿಯಾಗಿಂತ ರಾಜಾ ಹುಲಿ ದೊಡ್ಡದು,ರಾಜಾ ಹುಲಿಗೆ ಸರ್ಕಾರ ಹೇಗೆ ನಡೆಸಬೇಕು ಅಂತ ಗೊತ್ತಿದೆ,ಸಿದ್ದರಾಮಯ್ಯ ಅದನ್ನು ಯಡಿಯೂರಪ್ಪಗೆ ಹೇಳಿಕೊಡುವ ಅಗತ್ಯ ಇಲ್ಲ, ರಾಜಾ ಹುಲಿ ರಾಜಾಹುಲೀನೇ ಎಂದು ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ.

 ಶೀಘ್ರ ಸಂಪುಟ ವಿಸ್ತರಣೆ

ಶೀಘ್ರ ಸಂಪುಟ ವಿಸ್ತರಣೆ

ಕೆಲವೇ ದಿನಗಳಲ್ಲಿ ಸಂಪುಟ ವಿಸ್ತರಣೆ ನಡೆಯಲಿದೆ. ಮಿತ್ರ ಮಂಡಳಿ ಶಾಸಕರಿಂದ ಒತ್ತಡ ಹೆಚ್ಚಿದೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಶೀಘ್ರ ಗೆದ್ದರುವ ಶಾಸಕರಿಗೆ ಸಚಿವ ಸ್ಥಾನ ನೀಡಲಾಗುತ್ತದೆ. ಕೇವಲ ಮುಖ್ಯಮಂತ್ರಿಗಷ್ಟೇ ಆ ಅಧಿಕಾರವನ್ನು ಹೈಕಮಾಂಡ್ ನೀಡಿದೆ ಶೀಘ್ರ ವಿಸ್ತರಣೆ ಮಾಡಲಾಗುತ್ತದೆ.

English summary
Revenue minister Ashok agreed that BJP has internal pressure from ex disqualified mlas over cabinet expansion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X