• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಂಜು ಬಾಬಿ ಜಾರ್ಜ್ ಬಿಜೆಪಿಗೆ ಸೇರಿದ್ದು ನಿಜವೇ? ಬಿಜೆಪಿ ಸ್ಪಷ್ಟನೆ

|

ಬೆಂಗಳೂರು, ಜುಲೈ 08: ಅಥ್ಲೀಟ್ ಅಂಜು ಬಾಬಿ ಜಾರ್ಜ್ ಅವರು ಬಿಜೆಪಿಗೆ ಸೇರಿದ್ದಾರೆ ಎಂಬ ವರದಿಯ ಕುರಿತಂತೆ ಬಿಜೆಪಿ ಸ್ಪಷ್ಟನೆ ನೀಡಿದ್ದು, ಅವರು ಕೊನೆಯ ಕ್ಷಣದಲ್ಲಿ ತಮ್ಮ ನಿಲುವನ್ನು ಬದಲಿಸಿದ್ದಾರೆ ಎಂದಿದೆ.

ಭಅನುವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಂಜುಬಾಬಿ ಜಾರ್ಜ್ ಅವರು ವೇದಿಕೆಯ ಮೇಲೆ ಬಿಜೆಪಿ ಧ್ವಜ ಹಿಡಿದು ನಿಂತ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿತ್ತು. ಜೊತೆಗೆ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರೇ, 'ಅಂಜು ಬಾಬಿ ಜಾರ್ಜ್ ಬಿಜೆಪಿಗೆ ಸೇರಿದ್ದಾರೆ' ಎಂದಿದ್ದರು. ಆದರೆ ಕೊನೆಯ ಕ್ಷಣದಲ್ಲಿ ತಮ್ಮ ನಿಲುವನ್ನು ಬದಲಿಸಿರುವ ಜಾರ್ಜ, "ತಾವು ಬಿಜೆಪಿಗೆ ಸೇರಿಲ್ಲ. ಅದೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ, ಪಕ್ಷದ ಧ್ವಜ ಹಿಡಿದಿದ್ದೆ" ಎಂದಿದ್ದಾರೆ.

ಎಚ್.ನಾಗೇಶ ಬೆಂಬಲ, 106ಕ್ಕೇರಿದ ಬಿಜೆಪಿ ಸದಸ್ಯರ ಬಲ!

ಪಕ್ಷದ ಧ್ವಜವನ್ನು ಅಧ್ಯಕ್ಷರ ಕೈಯಿಂದ ಪಡೆಯುವುದು ಎಂದರೆ ಏನು? ಅವರು ಕೊನೆಯ ಕ್ಷಣದಲ್ಲಿ ತಮ್ಮ ನಿಲುವನ್ನು ಯಾಕೆ ಬದಲಿಸಿದರು ಎಂಬುದು ಗೊತ್ತಿಲ್ಲ ಎಂದು ಬಿಜೆಪಿ ಮಾಧ್ಯಮ ಸಂಚಾಲಕರಾದ ಎಸ್ ಶಾಂತಾರಾಂ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ ಮುಖಂಡ ಮುರಳಲೀಧರ ರಾವ್ "ನನಗೂ ಮತ್ತು ಅಂಜು ಬಾಬಿ ಜಾರ್ಜ್ ಮತ್ತವರ ಪತಿ ರಾಬರಟ್ ಬಾಬಿ ಜಾರ್ಜ್ ಅವರಿಗೂ ಹಳೆಯ ಪರಿಚಯ. ಬೆಂಗಳೂರಿನಲ್ಲಿ ನಿನ್ನೆ ನಾನು ಪಕ್ಷದ ಕಾರ್ಯಕ್ರಮದಲ್ಲಿದ್ದೆ. ಆ ಸಂದರ್ಭದಲ್ಲಿ ಅವರು ನನಗೆ ಫೋಣ್ ಮಾಡಿ, ಭೇಟಿ ಯಾಗಬೇಕು ಎಂದರು. ಕಾರ್ಯಕ್ರಮಕ್ಕೆ ಬಂದಿದ್ದ ಅವರನ್ನು ವೇದಿಕೆಗೆ ಕರೆಸಿದ್ದೆವು. ಅವರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಅಷ್ಟೆ. ಆದರೆ ಅವರು ಬಿಜೆಪಿಗೆ ಸೇರುವ ಬಗ್ಗೆ ಯಾವುದೇ ಅಭಿಪ್ರಾಯ ತಿಳಿಸಿಲ್ಲ" ಎಂದಿದ್ದಾರೆ.

ರಾಮಲಿಂಗ ರೆಡ್ಡಿ ಮತ್ತು ಪುತ್ರಿಗೆ ಬಿಜೆಪಿ ನೀಡಿದ ಭರ್ಜರಿ ಆಫರ್?

2003 ರಲ್ಲಿ ಪ್ಯಾರಿಸ್ ನಲ್ಲಿ ನಡೆದಿದ್ದ ಲಾಂಗ್ ಜಂಪ್ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಪಡೆವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಅಂಜು ಬಾಬಿ ಜಾರ್ಜ್ ಪಾತ್ರರಾಗಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka BJP media convenor, S Shantaram, on reports Anju Bobby George didn't join BJP said, She came on stage,took party flag and our state President announced she joined BJP. Don't know why she changed stand. Doesn't she know meaning of taking flag on stage from president?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more