ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ಪ್ರಣಾಳಿಕೆಯನ್ನು ಕಾಪಿ ಮಾಡಿದ ಬಿಜೆಪಿ ಅಭ್ಯರ್ಥಿ

|
Google Oneindia Kannada News

ಬೆಂಗಳೂರು, ನವೆಂಬರ್ 22: ಕಾಂಗ್ರೆಸ್‌ ಹೊರತಂದಿದ್ದ ಪ್ರಣಾಳಿಕೆಯನ್ನು ಬಿಜೆಪಿ ಅಭ್ಯರ್ಥಿ ಯಥಾವತ್ತು ಕಾಪಿ ಮಾಡಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಎಂ.ಶಿವರಾಜು ಹೊರತಂದಿದ್ದ ಪ್ರಣಾಳಿಕೆಯನ್ನು ಅದೇ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಗೋಪಾಲಯ್ಯ ಯಥಾವತ್ತು ಕಾಪಿ ಹೊಡೆದು ತಮ್ಮ ಹೆಸರು ಸೇರಿಸಿಕೊಂಡಿದ್ದಾರೆ.

ಉಪ ಚುನಾವಣೆ; ಬೆಂಗಳೂರಿನ 4 ಕ್ಷೇತ್ರದಲ್ಲಿ 56 ಅಭ್ಯರ್ಥಿಗಳುಉಪ ಚುನಾವಣೆ; ಬೆಂಗಳೂರಿನ 4 ಕ್ಷೇತ್ರದಲ್ಲಿ 56 ಅಭ್ಯರ್ಥಿಗಳು

ಈ ಬಗ್ಗೆ ಕೆಪಿಸಿಸಿ ಆಕ್ಷೇಪ ವ್ಯಕ್ತಪಡಿಸಿದ್ದು, 'ಕೇವಲ ಪ್ರಚಾರಕರು ಸುಳ್ಳುಗಾರರು ಅನರ್ಹರು ನಕಲಿನಾಯಕರು ತುಂಬಿರುವ ಬಿಜೆಪಿಯಲ್ಲಿ ವಿಚಾರವಂತರೇ ಇಲ್ಲ. ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದ ಪ್ರಣಾಳಿಕೆಯನ್ನು ಯಥಾವತ್ತಾಗಿ ನಕಲು ಮಾಡಿರುವ ಬಿಜೆಪಿ ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಬೇಕಾದ ಒಂದೇ ಒಂದು ಸಾಲು; ಕೃಪೆ: ಕರ್ನಾಟಕ ಕಾಂಗ್ರೆಸ್' ಎಂದು ಟ್ವೀಟ್ ಮಾಡಿದೆ.

BJP Candidate Copied Congress Manifesto As It Is

ಎಂ.ಶಿವರಾಜು ಅವರು ತಮ್ಮ ಪ್ರಣಾಳಿಕೆಯಲ್ಲಿ 'ಸೈಕಲ್ ಪಥ ನಿರ್ಮಾಣ, ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ, ಬಸ್ಸುಗಳ ಸಂಖ್ಯೆ ಹೆಚ್ಚಳ, ರಸ್ತೆಗಳ ಅಭಿವೃದ್ಧಿ ಮಾಡುವುದಾಗಿ ಪ್ರಣಾಳಿಕೆ ಹೊರಡಿಸಿ, 'ಅರ್ಹ ನಾಯಕ, ನಿಷ್ಠಾವಂತ ಸೇವಕ' ಎಂಬ ಟ್ಯಾಗ್‌ ಲೈನ್ ನೀಡಿ ತಮಗೆ ಮತ ನೀಡುವಂತೆ ಕೋರಿದ್ದಾರೆ.

ವಿಜಯನಗರದಲ್ಲಿ ಬಿಜೆಪಿಗೆ ತಲೆನೋವಾದ ರೆಬೆಲ್ ಕವಿರಾಜ ವಿಜಯನಗರದಲ್ಲಿ ಬಿಜೆಪಿಗೆ ತಲೆನೋವಾದ ರೆಬೆಲ್ ಕವಿರಾಜ

BJP Candidate Copied Congress Manifesto As It Is

ಬಿಜೆಪಿಯ ಅಭ್ಯರ್ಥಿ 'ಅನರ್ಹ' ಗೋಪಾಲಯ್ಯ ಶಿವರಾಜ್ ನೀಡಿರುವ ಭರವಸೆಗಳನ್ನು ಯಥಾವತ್ತು ಕಾಪಿ ಮಾಡಿದ್ದಾರೆ. ಜೊತೆಗೆ ಶಿವರಾಜ್ ಅವರ ಟ್ಯಾಗ್‌ ಲೈನ್ 'ಅರ್ಹ ನಾಯಕ, ನಿಷ್ಠಾವಂತ ಸೇವಕ' ಅನ್ನೂ ಕಾಪಿ ಮಾಡಿ, ತಮ್ಮ ಹೆಸರು ಮುದ್ರಿಸಿಕೊಂಡಿದ್ದಾರೆ.

ಮಹಾಲಕ್ಷ್ಮಿ ಲೇಔಟ್‌ನಲ್ಲಿ ಉಪಚುನಾವಣೆ ಬಿರುಸಾಗಿದ್ದು, ಬಿಜೆಪಿಯಿಂದ ಅನರ್ಹ ಕೆ.ಗೋಪಾಲಯ್ಯ ಸ್ಪರ್ಧಿಸಿದ್ದರೆ, ಕಾಂಗ್ರೆಸ್‌ನಿಂದ ಶಿವರಾಜ್ ಮತ್ತು ಜೆಡಿಎಸ್‌ನಿಂದ ಗಿರೀಶ್ ನಾಶಿ ಸ್ಪರ್ಧಿಸಿದ್ದಾರೆ.

English summary
Karnataka by elections: Mahalakshmi Layout constituency BJP candidate K Gopalaiah copied congress candidates manifesto as it is and added his name to it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X