ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಆಗುವ ಉತ್ಸಾಹದ ಬೆನ್ನಲ್ಲೇ ಮತ್ತೆ ಹೆಸರು ಬದಲಿಸಿಕೊಂಡ ಯಡಿಯೂರಪ್ಪ?

|
Google Oneindia Kannada News

Recommended Video

ಬಿ ಎಸ್ ಯಡಿಯೂರಪ್ಪ ಮತ್ತೆ ತಮ್ಮ ಹೆಸರನ್ನ ಬದಲಿಸಿಕೊಂಡ್ರಾ?

ಬೆಂಗಳೂರು, ಜುಲೈ 24: ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಮತ್ತೆ ಅಧಿಕಾರಕ್ಕೆ ಏರುವ ಹುಮ್ಮಸ್ಸಿನಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಪುನಃ ಹೆಸರು ಬದಲಿಸಿಕೊಂಡಿದ್ದಾರೆಯೇ?

2007ರ ನವೆಂಬರ್‌ನಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಯಡಿಯೂರಪ್ಪ ಅವರು ತಮ್ಮ ಹೆಸರನ್ನು ಸಂಖ್ಯಾಶಾಸ್ತ್ರಕ್ಕೆ ಅನುಗುಣವಾಗಿ 'ಯಡ್ಯೂರಪ್ಪ' (Yeddyurappa) ಎಂದು ಬದಲಿಸಿಕೊಂಡಿದ್ದರು. ಇಂಗ್ಲಿಷ್‌ನಲ್ಲಿ ಅವರ ಹೆಸರು ಯಡ್ಯೂರಪ್ಪ ಎಂದಿದ್ದರೂ, ಕನ್ನಡದಲ್ಲಿ ಯಡಿಯೂರಪ್ಪ ಎಂದೇ ಬರೆಯಲಾಗುತ್ತಿತ್ತು. ತಮ್ಮ ಹೆಸರು ಬದಲಾವಣೆ ಬಗ್ಗೆ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದರು.

"ಸಿಎಂ ಪಟ್ಟಕ್ಕೇರುವ ಮೊದಲೇ ರೈತರ ಹಿತ ಕಾಯುವ ಆಶ್ವಾಸನೆ"

ನಾಲ್ಕನೆಯ ಅವಧಿಗೆ ಮುಖ್ಯಮಂತ್ರಿ ಗಾದಿಗೆ ಏರಲು ಸನ್ನದ್ಧರಾಗಿರುವ ಅವರು ಪುನಃ ನಾಮಬದಲಾವಣೆ ಮಾಡಿಕೊಂಡಿರುವಂತೆ ಕಾಣಿಸುತ್ತಿದೆ. ಕುಮಾರಸ್ವಾಮಿ ಅವರ ಸರ್ಕಾರ ಪತನಗೊಂಡು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ದೊರಕಿದೆ ಎಂದು ಅವರು ಅಮಿತ್ ಶಾ, ಜೆ.ಪಿ. ನಡ್ಡಾ ಸೇರಿದಂತೆ ರಾಷ್ಟ್ರನಾಯಕರಿಗೆ ಪತ್ರ ಬರೆದಿದ್ದರು.

bjp bs yeddyurappa again changed his name to yediyurappa

ತಮ್ಮ ಅಧಿಕೃತ ಲೆಟರ್‌ಹೆಡ್‌ನಲ್ಲಿ ಅವರು ಪತ್ರ ಬರೆದಿದ್ದು, ಅದರಲ್ಲಿ ಅವರ ಹೆಸರು ಬಿ.ಎಸ್. ಯಡಿಯೂರಪ್ಪ (B.S. Yediyurappa) ಎಂದಿದೆ.

ಬಿಎಸ್‌ವೈ ಬಹುಮತ ಸಾಬೀತಾಗುವವರೆಗೂ ಅತೃಪ್ತರು ಬರೊಲ್ಲ?ಬಿಎಸ್‌ವೈ ಬಹುಮತ ಸಾಬೀತಾಗುವವರೆಗೂ ಅತೃಪ್ತರು ಬರೊಲ್ಲ?

2006ರಲ್ಲಿ ಬಿಜೆಪಿ-ಜೆಡಿಎಸ್ 20-20 ಸರ್ಕಾರ ರಚನೆಯಾಗಿ 2007ರಲ್ಲಿ ಕುಮಾರಸ್ವಾಮಿ ಅವರು ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದ ಕಾರಣ ಸರ್ಕಾರ ಪತನಗೊಂಡಿತ್ತು. ಅದರ ಬಳಿಕ ಯಡಿಯೂರಪ್ಪ ಅವರು ಸಂಖ್ಯಾಶಾಸ್ತ್ರಜ್ಞರನ್ನು ಭೇಟಿಯಾಗಿ ತಮ್ಮ ಹೆಸರನ್ನು ಅವರ ಸಲಹೆಯಂತೆ ಬದಲಿಸಿಕೊಂಡಿದ್ದರು.

English summary
BJP state President BS Yeddyurappa in his letters to Party's national leader used his name as 'Yediyurappa'. He had changed his name according numerology as 'Yeddyurappa' in 2007.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X