ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆಶಿ ವಿರುದ್ಧ ಹಣ ಹಂಚಿದ ಆರೋಪ: ಆಯೋಗಕ್ಕೆ ಬಿಜೆಪಿ ದೂರು

|
Google Oneindia Kannada News

ಬೆಂಗಳೂರು, ಮೇ 13: ಸಚಿವ ಡಿ.ಕೆ.ಶಿವಕುಮಾರ್ ಅವರು ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಹಣ ಹಂಚಿಕೆ ನಡೆಸಿದ್ದಾರೆ ಎಂದು ಆರೋಪಿಸಿ ರಾಜ್ಯ ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಇಂದು ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಬಿಜೆಪಿ, ಡಿ.ಕೆ.ಶಿವಕುಮಾರ್ ಅವರು ಉಪಚುನಾವಣೆಯನ್ನು ಹಣದ ಬಲದಿಂದ ಗೆಲ್ಲುವ ಯತ್ನ ಮಾಡುತ್ತಿದ್ದಾರೆ, ಹುಬ್ಬಳ್ಳಿಯಲ್ಲಿ ಅವರು ತಂಗಿರುವ ಕಾಟನ್ ಕೌಂಟಿ ಹೊಟೆಲ್‌ನಲ್ಲಿ ಪಕ್ಷದ ಮುಖಂಡರಿಗೆ ಮತ್ತಿತರಿಗೆ ಹಣ ಹಂಚುತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಹುಬ್ಬಳ್ಳಿಯಲ್ಲಿ ಮುಖಾಮುಖಿಯಾದ ಡಿಕೆಶಿ, ಶ್ರೀರಾಮುಲು! ಹುಬ್ಬಳ್ಳಿಯಲ್ಲಿ ಮುಖಾಮುಖಿಯಾದ ಡಿಕೆಶಿ, ಶ್ರೀರಾಮುಲು!

ಮತದಾರರಿಗೆ ಹಂಚಲು, ಆ ಮೂಲದ ಮತದಾರರ ಮೇಲೆ ಪ್ರಭಾವ ಬೀರಲು ಡಿ.ಕೆ.ಶಿವಕುಮಾರ್‌ ಅವರು ಹೀಗೆ ಹಣ ಹಚುತ್ತಿದ್ದು, ಅಧಿಕಾರಿಗಳನ್ನೂ ಸಹ ತಮ್ಮ ಪಕ್ಷದ ಪರವಾಗಿ ಕೆಲವ ಮಾಡುವಂತೆ ಸೂಚಿಸಿದ್ದಾರೆ, ಡಿಕೆಶಿ ಸಚಿವರಾಗಿರುವ ಕಾರಣ ಅಧಿಕಾರಿಗಳು ಕಾಂಗ್ರೆಸ್‌ ಪರ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ನೀಡಿರವ ದೂರಿನಲ್ಲಿ ಉಲ್ಲೇಖಿಸಿದೆ.

BJP accused that DK Shivakumar distrubuting money in by election

ಡಿ.ಕೆ.ಶಿವಕುಮಾರ್ ಅವರ ವಿರುದ್ಧ ತನಿಖೆ ನಡೆಸಿ, ಪಾರದರ್ಶಕ ಚುನಾವಣೆ ನಡೆಯುವಂತೆ ಮಾಡಬೇಕು ಎಂದು ರಾಜ್ಯ ಬಿಜೆಪಿಯು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದಾರೆ.

ಕುಂದಗೋಳ ಉಪ ಚುನಾವಣೆ : ಬಿಜೆಪಿಗೆ ಶಾಕ್‌ ಕೊಟ್ಟ ಡಿಕೆಶಿ ಕುಂದಗೋಳ ಉಪ ಚುನಾವಣೆ : ಬಿಜೆಪಿಗೆ ಶಾಕ್‌ ಕೊಟ್ಟ ಡಿಕೆಶಿ

ಮತ್ತೊಂದು ಪ್ರತ್ಯೇಕ ದೂರಿನಲ್ಲಿ ಸಿದ್ದರಾಮಯ್ಯ ಮತ್ತು ಸಿ.ಎಂ.ಇಬ್ರಾಹಿಂ ಅವರ ವಿರುದ್ಧವೂ ಸಹ ಸಬಿಜೆಪಿ ದೂರು ನೀಡಿದ್ದು, ಇಬ್ಬರನ್ನೂ ಸಹ 72 ಗಂಟೆಗಳ ಕಾಲ ಉಪಚುನಾವಣೆಯಲ್ಲಿ ಪ್ರಚಾರ ಮಾಡದಂತೆ ನಿಷೇಧ ಹೇರಬೇಕೆಂದು ಕೋರಿದೆ.

English summary
Karnataka BJP accused that minister DK Shivakumar distrubuting money to congress leaders to do the same to voters. BJP gave complaint to Karnataka election commissioner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X