ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಬಿಜೆಪಿಯಲ್ಲಿ 3ನೇ ಸಿಎಂ- ಕಾಂಗ್ರೆಸ್ ಮುಂದುವರಿಸಿದ ಟ್ವೀಟ್ ಅಸ್ತ್ರ

|
Google Oneindia Kannada News

ಬೆಂಗಳೂರು, ಆಗಸ್ಟ್ 10: ಕರ್ನಾಟಕದಲ್ಲಿ ಬಿಜೆಪಿಯ ಮೂರನೇ ಸಿಎಂ ಎಂಬ ಕೂಗು ಜೋರಾಗುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಬದಲಾಗುತ್ತಾರೋ ಇಲ್ಲವೋ ಆದರೆ ಬದಲಾವಣೆಯ ಗಾಳಿ ಸುದ್ದಿಗೆ ಕಾಂಗ್ರೆಸ್ ಟ್ವೀಟ್ ಅಸ್ತ್ರ ಜೋರಾಗಿ ಸದ್ದು ಮಾಡ ತೊಡಗಿದೆ. ಕಾಂಗ್ರೆಸ್ ದಿಗ್ಗಜ ನಾಯಕರಿಗೆ ತಿಳಿಯದಂತೆ ಟ್ವಿಟ್ ಮಾಡಲಾಗುತ್ತಿದೆಯೇ ಅಥವಾ ಟ್ವೀಟ್ ಮಾಡಿಸಿ ಕಣ್ಣ ಮುಚ್ಚಾಲೆ ಆಡುತ್ತಿದ್ದಾರೆಯೇ ಅನ್ನೋದು ತಿಳಿಯ ಬೇಕಿದೆ.

ರಾಜ್ಯಕ್ಕೆ ಅಮಿತ್ ಶಾ ಬಂದು ಹೋದ ಬಳಿಕ ಸಿಎಂ ಬದಲಾವಣೆಯ ಗಾಳಿ ಸುದ್ದಿ ಹಬ್ಬಿದೆ. ದೆಹಲಿಗೆ ತೆರಳಬೇಕಿದ್ದ ಸಿಎಂ ಬಸವರಾಜ ಬೊಮ್ಮಾಯಿ ಕೋವಿಡ್ ಕಾರಣಕ್ಕೆ ದೆಹಲಿ ಯಾತ್ರೆಯನ್ನು ರದ್ದು ಮಾಡಿದ್ದಾರೆ. ಇನ್ನು ಈ ಕುರಿತು ಸಾಲು ಸಾಲು ಟ್ವೀಟ್ ಮಾಡಿರುವ ಕಾಂಗ್ರೆಸ್ ಇಂದು ಕೂಡ ಮುಂದುವರೆಸಿದೆ.

ಕಾಂಗ್ರೆಸ್ ಮುಖಂಡ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, "ಸಿಎಂ ಬದಲಾವಣೆ ಬಗ್ಗೆ ಮಾಹಿತಿಯಿಲ್ಲ. ಯಡಿಯೂರಪ್ಪರನ್ನು ಬದಲಾಯಿಸುವ ಬಗ್ಗೆ ಮಾಹಿತಿಯಿತ್ತು. ಬಸವರಾಜ ಬೊಮ್ಮಾಯಿಯನ್ನು ಬದಲಾಯಿಸುವ ಬಗ್ಗೆ ಮಾಹಿತಿಯಿಲ್ಲ. ಟ್ವೀಟ್ ಮಾಡಿರುವವರನ್ನೇ ಬಗ್ಗೆ ಕೇಳಿ," ಎಂದು ಹೇಳಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಸಹ ತಮಗೆ ತಿಳಿದಿಲ್ಲ ಎಂಬಂತೆ ರಾಜಕೀಯ ಟ್ವೀಟ್ ಮಾಡುವಾಗ ತಮ್ಮ ಗಮನಕ್ಕೆ ತನ್ನಿ ಎಂದಿದ್ದೇನೆ. ಸೋಶಿಯಲ್ ಮೀಡಿಯಾ ಟೀಮ್ ಗೆ ಈ ಬಗ್ಗೆ ಮಾಹಿತಿ ಕೇಳಿದ್ದೇನೆ ಎಂದಿದ್ದಾರೆ.

 'ಸಂತೋಷ ಕೂಟ'ಕ್ಕೆ ಸಂತೋಷ

'ಸಂತೋಷ ಕೂಟ'ಕ್ಕೆ ಸಂತೋಷ

"ಬಿಜೆಪಿ ಹೈಕಮಾಂಡಿಗೆ ಕರ್ನಾಟಕ ಸಿಎಂಗಳೆಂದರೆ #Puppetcm ಇದ್ದ ಹಾಗೆ, ಆಡಿಸಿಯೂ ನೋಡುತ್ತಾರೆ. ಬೀಳಿಸಿಯೂ ನೋಡುತ್ತಾರೆ. @BSYBJP ಅವರಂತಹ ನಾಯಕರನ್ನೇ ಹೇಳದೆ ಕೇಳದೆ ಮನೆಗೆ ಕಳುಹಿಸಿರುವಾಗ ಬೊಂಬೆ ಬಸವರಾಜ ಬೊಮ್ಮಾಯಿ ಯಾವ ಲೆಕ್ಕ, ಸಂತೋಷ ಕೂಟಕ್ಕೆ ಸಂತೋಷ ಪಡಿಸುವ ಬೊಮ್ಮಾಯಿಯವರ ಪ್ರಯತ್ನ ವಿಫಲವಾಗಿದೆ. ಹಗರಣ ವೈಫಲ್ಯಗಳ ಕೊಡ ತುಂಬಿದೆ" ಎಂದು ಟೀಕೆಯನ್ನು ಮಾಡಿದೆ.

 ಸಂಪುಟ ಸಂಕಟಕ್ಕೆ ನಿವಾರಣೆ ಸಿಗಲಿಲ್ಲ

ಸಂಪುಟ ಸಂಕಟಕ್ಕೆ ನಿವಾರಣೆ ಸಿಗಲಿಲ್ಲ

@BSYBJP ಅವರನ್ನು ಸರ್ಕಾರದ ಎರಡನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದ ಸಂದರ್ಭದಲ್ಲೇ ಕಣ್ಣೀರು ಹಾಕಿಸಿಕಳುಹಿಸಲಾಗಿತ್ತು. ಈಗ @BSBOMMAI ಅವರನ್ನು 1ನೇ ವಾರ್ಷಿಕೋತ್ಸವದ ಹೊತ್ತಲ್ಲಿ ಕೆಳಗಿಳಿಸುವ ವೇದಿಕೆ ಸಜ್ಜಾಗಿದೆ. ಒಂದು ವರ್ಷದಲ್ಲಿ 12 ಬಾರಿ ದೆಹಲಿ ಪ್ರವಾಸವನ್ನು ಕೈಗೊಂಡರು #Puppetcm ಗೆ ಸಂಪುಟ ಸಂಕಟ ಬಗೆ ಹರಿಸಲಾಗದ್ದೇ ಇದಕ್ಕೆ ಸಾಕ್ಷಿ. ಎಂದು ಮತ್ತೊಂದು ಟ್ವೀಟ್ ಅನ್ನು ಕಾಂಗ್ರೆಸ್ ಮಾಡಿದೆ.

 ನಾಯಕರಿಗೆ ತಿಳಿಯದಂತೆ ಆಯಿತೇ ಟ್ವೀಟ್

ನಾಯಕರಿಗೆ ತಿಳಿಯದಂತೆ ಆಯಿತೇ ಟ್ವೀಟ್

ಕಾಂಗ್ರೆಸ್ ಮುಖಂಡ ವಿರೋಧ ಪಕ್ಷದ ನಾಯಕ ಸಿಎಂ ಬದಲಾವಣೆ ಬಗ್ಗೆ ಮಾಹಿತಿಯಿಲ್ಲ. ಯಡಿಯೂರಪ್ಪರನ್ನು ಬದಲಾಯಿಸುವ ಬಗ್ಗೆ ಮಾಹಿತಿಯಿತ್ತು. ಬಸವರಾಜ ಬೊಮ್ಮಾಯಿಯನ್ನು ಬದಲಾಯಿಸುವ ಬಗ್ಗೆ ಮಾಹಿತಿಯಿಲ್ಲ. ಟ್ವೀಟ್ ಮಾಡಿರುವವರನ್ನೇ ಬಗ್ಗೆ ಕೇಳಿ ಎಂದು ಹೇಳಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಸಹ ತಮಗೆ ತಿಳಿದಿಲ್ಲ ಎಂಬಂತೆ ರಾಜಕೀಯ ಟ್ವೀಟ್ ಮಾಡುವಾಗ ತಮ್ಮ ಗಮನಕ್ಕೆ ತನ್ನಿ ಎಂದಿದ್ದೇನೆ. ಸೋಶಿಯಲ್ ಮೀಡಿಯಾ ಟೀಮ್ ಗೆ ಈ ಬಗ್ಗೆ ಮಾಹಿತಿ ಕೇಳಿದ್ದೇನೆ ಎಂದಿದ್ದಾರೆ. ಇವೆಲ್ಲಾವನ್ನು ಗಮನಿಸಿದರೆ ನಾಯಕರಿಗೇ ತಿಳಿಯದಂತೆ ಅಫೀಷಿಯಲ್ ಅಕೌಂಟ್‌ನಲ್ಲಿ ಟ್ವೀಟ್ ಮಾಡಿದ್ದು ಯಾರು ಎಂಬ ಪ್ರಶ್ನೆ ಮೂಡುತ್ತದೆ.

 ಅನುಮಾನಗಳಿಗೂ ಸಿಗುತ್ತಾ ಉತ್ತರ

ಅನುಮಾನಗಳಿಗೂ ಸಿಗುತ್ತಾ ಉತ್ತರ

ಸಿಎಂ ಬಸವರಾಜ ಬೊಮ್ಮಾಯಿ ಕೋವಿಡ್ ನಿಂದ ಸುಧಾರಿಸಿಕೊಳ್ಳುತ್ತಿದ್ದಂತೆ ದೆಹಲಿಗೆ ಬರುವಂತೆ ಹೈಕಮಾಂಡ್ ಸೂಚನೆಯನ್ನು ನೀಡಿದೆ. ಸಿಎಂ ಬದಲಾವಣೆಯ ಗಾಳಿ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೆ ಹೈಕಮಾಂಡ್ ಬುಲಾವ್ ನೀಡಿರುವುದು ಅನುಮಾನಕ್ಕೆ ಪುಷ್ಠಿಯನ್ನು ನೀಡುತ್ತಿದ್ದರು. ಬೊಮ್ಮಾಯಿ ಆಪ್ತ ಮೂಲಗಳು ಸಿಎಂ ಬದಲಾವಣೆಯಿಲ್ಲ ಎಂದು ಹೇಳುತ್ತಿವೆ. ಇದರಿಂದಾಗಿ ಸಿಎಂ ದೆಹಲಿಯಾತ್ರೆಯ ಬಳಿಕವಷ್ಟೇ ಸ್ಪಷ್ಟವಾದ ಸೂಚನೆ ಸಿಗಲಿದೆ.

Recommended Video

Bihar Politics : ಬಿಹಾರದ ಸಿಎಂ ನಿತೀಶ್ ಕುಮಾರ್ ಮಹಾ ಪಲ್ಟಿ ರಾಜಕೀಯ | Oneindia Kannada

English summary
The BJP's third CM in Karnataka is getting news louder. Whether CM Basavaraj Bommayi will change or not, but the news of the wind of change, the Congress twitter has started sounding loudly. It is necessary to know whether the tweets are being done without the knowledge of the Congress leaders or they are playing a cover-up by tweeting, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X