ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ವಿಟ್ಟರ್ ನಲ್ಲಿ ಪಾರ್ಲೆ ಜಿ ಬಿಸ್ಕತ್ತು ಗಣೇಶ ಟ್ರೆಂಡಿಂಗ್

By Mahesh
|
Google Oneindia Kannada News

ಬೆಂಗಳೂರು, ಸೆ. 14: ಭಾದ್ರಪದ ಶುಕ್ಲ ಚೌತಿ ದಿನ ಮನೆ ಮನೆಗೆ ಬರುವ ಗೌರಿ ತನಯ ಗಣೇಶ ಎಲ್ಲರ ಅಚ್ಚುಮೆಚ್ಚಿನ ದೇವತೆ. ಮಕ್ಕಳಿಂದ ಮುದುಕರವರೆಗೂ ಎಲ್ಲರೂ ವಿಘ್ನ ನಿವಾರಕನನ್ನು ಆಪ್ತತೆಯಿಂದ ಕಾಣುತ್ತಾರೆ. ಇಂಥ ಗಣೇಶನ ಮೂರ್ತಿಯನ್ನು ಪರಿಸರ ಪ್ರೇಮಿಯಾಗಿಸುವುದರ ಜೊತೆಗೆ ಈಗ ತಿಂಡಿ ತಿನಿಸುಗಳಲ್ಲೂ ಗಣೇಶನ ಆಕೃತಿ ಜನಪ್ರಿಯಗೊಳಿಸಲಾಗುತ್ತಿದೆ. ಸದ್ಯಕ್ಕೆ ಪಾರ್ಲೆ ಜಿ ಮಾಡಿರುವ ಬಿಸ್ಕತ್ತು ಗಣೇಶ ಟ್ರೆಂಡಿಂಗ್ ನಲ್ಲಿದೆ.

ಪಾರ್ಲೆಜಿ ಬಿಸ್ಕತ್ತುಗಳನ್ನು ಬಳಸಿಕೊಂಡು ಸೃಜನಶೀಲತೆಯಿಂದ ಕೂಡಿರುವ ಗಣೇಶ ಮೂರ್ತಿಯನ್ನು ಪಾರ್ಲೆ ಜಿ ಮುಂದಿಡುತ್ತಿದೆ. ಇದನ್ನು ಸಾರ್ವಜನಿಕರಿಂದ ಚೆಂದ ಎತ್ತಿ ನಿರ್ಮಿಸಲಾಗಿದೆ. [ನಮ್ಮ ಸನಾತನ ಸಂಸ್ಕೃತಿ ಹಾಳು ಮಾಡುತ್ತಿರುವವರು ಯಾರು?]

ಇಲ್ಲಿ ಚೆಂದಾ ರೂಪದಲ್ಲಿ ನೀವು ನಿಮ್ಮ ದೇಣಿಗೆ ನೀಡಬೇಕಾದರೆ #BiscuitGanesha ಎಂಬ ಹ್ಯಾಶ್ ಟ್ಯಾಗ್ ಹಾಕಿ ಟ್ವೀಟ್ ಮಾಡಿ. ಪಾರ್ಲೆ ಜಿ (@thegeniushub) ಐಡಿ ಬೇಕಾದರೆ ಟ್ಯಾಗ್ ಮಾಡಿ. ಗಣಪತಿ ಬಪ್ಪಾ ಮೋರಿಯಾ ಎಂದು ಬರೆದು ಹ್ಯಾಶ್ ಟ್ಯಾಗ್ ಜೊತೆ ಟ್ವೀಟ್ ಮಾಡಿದರೆ ಸಾಕು ಬಿಸ್ಕತ್ತು ಗಣೇಶ ನಿರ್ಮಾಣಕ್ಕೆ ಬೇಕಾದ ಬಿಸ್ಕತ್ತು ತಲುಪುತ್ತದೆಯಂತೆ.[ಗೌರಿ ಗಣೇಶ ಮೂರ್ತಿಗಳ ಸೊಬಗು ಸೌಂದರ್ಯ]

ಬಿಸ್ಕತ್ ಗಣೇಶ ಹೇಗೆ ನಿರ್ಮಾಣವಾಗುತ್ತದೆ ಎಂಬುದರ ಬಗ್ಗೆ ಟೀಸರ್ ಕೂಡಾ ಬಿಡುಗಡೆ ಮಾಡಲಾಗಿದ್ದು, ಫುಲ್ ವಿಡಿಯೋ ನಿರೀಕ್ಷಿಸಿ ಎಂದು ಪಾರ್ಲೆ ಜಿ ಹೇಳಿಕೊಂಡಿದೆ.

ಭಾರತದ ಬೆಂಗಳೂರು, ಮುಂಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಬಿಸ್ಕತ್ ಗಣೇಶ ಸಕತ್ ಟ್ರೆಂಡಿಂಗ್ ನಲ್ಲಿದೆ. ಯುಎಸ್ಎ ನಿಂದಲೂ ಕೂಡಾ ಭಕ್ತಾದಿಗಳು ಸಮೂಹ ಗಣೇಶ ನಿರ್ಮಾಣ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಇನ್ನೇಕೆ ತಡ, ನಿಮಗೆ ಗಣೇಶನ ಮೇಲೆ ಪ್ರೀತಿ ಇದ್ದರೆ ಟ್ವೀಟ್ ಮಾಡಿ ನಿಮ್ಮ ಕೊಡುಗೆ ನೀಡಿ...

ಗಣಪತಿ ಬಪ್ಪಾ ಮೋರಿಯಾ ಟ್ವೀಟ್ ಮಾಡಿದರೆ

ಗಣಪತಿ ಬಪ್ಪಾ ಮೋರಿಯಾ ಟ್ವೀಟ್ ಮಾಡಿದರೆ

ಗಣಪತಿ ಬಪ್ಪಾ ಮೋರಿಯಾ ಎಂದು ಬರೆದು ಹ್ಯಾಶ್ ಟ್ಯಾಗ್ (#BiscuitGanesha)ಜೊತೆ ಟ್ವೀಟ್ ಮಾಡಿದರೆ ಸಾಕು ಬಿಸ್ಕತ್ತು ಗಣೇಶ ನಿರ್ಮಾಣಕ್ಕೆ ಬೇಕಾದ ಬಿಸ್ಕತ್ತು ತಲುಪುತ್ತದೆಯಂತೆ.

ಇದೇ ಮೊದಲ ಬಾರಿಗೆ ಇಂಥ ಪ್ರಯತ್ನ

ಪಾರ್ಲೆಜಿ ಬಿಸ್ಕತ್ತುಗಳನ್ನು ಬಳಸಿಕೊಂಡು ಸೃಜನಶೀಲತೆಯಿಂದ ಕೂಡಿರುವ ಗಣೇಶ ಮೂರ್ತಿಯನ್ನು ಪಾರ್ಲೆ ಜಿ ಮುಂದಿಡುತ್ತಿದೆ. ಇದನ್ನು ಸಾರ್ವಜನಿಕರಿಂದ ಚೆಂದಾ ಎತ್ತಿ ನಿರ್ಮಿಸಲಾಗುತ್ತಿದೆ.

ಒಂದು ಟ್ವೀಟ್ ಸಾಕು ಗಣೇಶ ನಿರ್ಮಾಣಕ್ಕೆ

ಒಂದು ಟ್ವೀಟ್ ಸಾಕು ಗಣೇಶ ನಿರ್ಮಾಣಕ್ಕೆ ಇನ್ನೇಕ ತಡ, ಸುಮಾರು 10 ಅಡಿ ಎತ್ತರದ ಮೂರ್ತಿ ಕಾಣಬಹುದು.

ನಾನು ಪಾರ್ಲೆಜಿ ಬಿಗ್ ಫ್ಯಾನ್

ನಾನು ಪಾರ್ಲೆಜಿ ಬಿಗ್ ಫ್ಯಾನ್, ಗಣೇಶ ಕೂಡಾ ನನಗಿಷ್ಟ, ನನ್ನ ಕೊಡುಗೆ ನಾನು ನೀಡುತ್ತಿದ್ದೇನೆ.

ಗಿನ್ನಿಸ್ ವಿಶ್ವದಾಖಲೆ ಮಾಡೋಣ ಬನ್ನಿ

ಗಿನ್ನಿಸ್ ವಿಶ್ವದಾಖಲೆ ಮಾಡೋಣ ಬನ್ನಿ, ಹೀಗೆ ಟ್ವೀಟ್ ಮಾಡೋಣ, ಗಣೇಶ ಮೂರ್ತಿ ನಿರ್ಮಿಸೋಣ.

ಪಾರ್ಲೆ ಜಿ ಬಿಸ್ಕತ್ತು ಗಣೇಶ ನಿರ್ಮಾಣ ಟೀಸರ್

ಪಾರ್ಲೆ ಜಿ ಬಿಸ್ಕತ್ತು ಗಣೇಶ ನಿರ್ಮಾಣ ಟೀಸರ್ ಇಲ್ಲಿದೆ ನೋಡಿ

English summary
#BiscuitGanesha is Trending in Twitter. India’s first crowd-sourced Ganesha Made with Parle-G Biscuits. Tweeples are contributing their help with the #BiscuitGanesha Tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X