ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಟಿಯು: ಎಂಜಿನಿಯರಿಂಗ್ ಪದವಿಯಲ್ಲಿ ಜೀವಶಾಸ್ತ್ರ ಸೇರ್ಪಡೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 25: ವಿಶ್ವೇಶ್ವರಯ್ಯ ತಾಂತ್ರಿಕ ಶಿಕ್ಷಣ ವಿಶ್ವವಿದ್ಯಾಲಯವು(ವಿಟಿಯು) ತನ್ನ ಅಧೀನದಲ್ಲಿರುವ ಎಲ್ಲಾ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ವರ್ಷದಿಂದ ಬಯೋಲಜಿ ವಿಷಯವನ್ನು ಸೇರ್ಪಡೆಗೊಳಿಸಲು ನಿರ್ಧರಿಸಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವಿಟಿಯು ಕುಲಪತಿ ಕರಿಸಿದ್ದಪ್ಪ, ಕೊರೊನಾ ಸಾಂಕ್ರಾಮಿಕ ಬಂದಾಗಿನಿಂದ ಎಂಜಿನಿಯರ್ ಉದ್ಯೋಗಿಗಳು ವೈದ್ಯರ ಜೊತೆ ಸೇರಿಕೊಂಡು ಕಾರ್ಯ ನಿರ್ವಹಿಸುವ ಬೆಳವಣಿಗೆ ಕಂಡುಬಂಡಿತ್ತು. ವೈದ್ಯಕೀಯ ಉಪಕರಣ ಅಭಿವೃದ್ಧಿ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ನಾನ ಮತ್ತಿತರ ಕ್ಷೇತ್ರಗಳಲ್ಲಿ ವೈದ್ಯರ ಜೊತೆ ಎಂಜಿನಿಯರ್ ಗಳೂ ಒಂದಾಗಿದ್ದರು.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸೂಚಿಸಲಾಗಿರುವ ability enhancement courses ಅಡಿ ಈ ನೂತನ ವಿಷಯವನ್ನು ಸೇರ್ಪಡೆಗೊಳಿಸಲಾಗುತ್ತಿದೆ.

 Biology will now be a part of engineering course in All engineering colleges under VTU

ಈ ನೂತನ ಸವಾಲನ್ನು ಸುಲಭವಾಗಿ ಮೆಟ್ಟಿನಿಲ್ಲಲು ಎಂಜಿನಿಯರಿಂಗ್ ಕಲಿಕೆಯ ಮಟ್ತದಲ್ಲೇ ಬಯೋಲಜಿ ವಿಷಯ ಸೇರ್ಪಡೆಗೊಳಿಸುವುದರಿಂದ ಪ್ರತಿ ಎಂಜಿನಿಯರಿಂಗ್ ವಿದ್ಯಾರ್ಥಿ ವೈದ್ಯಕೀಯ ಕ್ಷೇತ್ರದಲ್ಲಿ ಎದುರಾಗಲಿರುವ ಸವಾಲುಗಳನ್ನು ಎದುರಿಸಬಹುದು ಎಂದಿದ್ದಾರೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಈ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಡಬಲ್ ಎಂಜಿನಿಯರಿಂಗ್ ಡಿಗ್ರಿ ಪಡೆಯುವ ಆಯ್ಕೆಯನ್ನು ಒದಗಿಸಿದೆ. ಹೆಚ್ಚುವರಿ ಎರಡನೇ ಡಿಗ್ರಿ ಪಡೆಯಲು ವಿದ್ಯಾರ್ಥಿಗಳು ಹೆಚ್ಚುವರಿ ವರ್ಷಗಳನ್ನು ಕಾಲೇಜಿನಲ್ಲಿ ಕಳೆಯಬೇಕಾಗುವುದು.

ಒಂದು ಡಿಗ್ರಿ ಪಡೆಯಲು ಎಂಜಿನಿಯರಿಂಗ್ ವಿದ್ಯಾರ್ಥಿ ಕನಿಷ್ಟ 4 ವರ್ಷಗಳ ಕಾಲ ವ್ಯಾಸಂಗ ಮಾಡಬೇಕು. ಇದು ಎಲ್ಲರಿಗೂ ಗೊತ್ತಿರುವುದೇ. ಡಬಲ್ ಡಿಗ್ರಿ ಪಡೆಯಲು ಇಚ್ಛಿಸುವ ಎಂಜಿನಿಯರಿಂಗ್ ವಿದ್ಯಾರ್ಥಿ ಹೆಚ್ಚುವರಿ 2 ವರ್ಷ ಅಂದರೆ ಒಟ್ಟು 6 ವರ್ಷಗಳ ಕಾಲ ವ್ಯಾಸಂಗ ಮಾಡಬೇಕಾಗುತ್ತದೆ.

2021- 22ನೇ ಸಾಲಿನಲ್ಲಿ ಎಂಜಿನಿಯರಿಂಗ್ ಸೇರುವ ವಿದ್ಯಾರ್ಥಿಗಳಿಗೆ ಈ ಸವಲತ್ತು ಅನ್ವಯವಾಗಲಿದೆ. ವಿಟಿಯು ಒದಗಿಸಿರುವ ಈ ಸವಲತ್ತಿಗೆ ವ್ಯಾಸಂಗ ಮಂಡಳಿ ಮತ್ತು ಶೈಕ್ಷಣಿಕ ಮಂಡಳಿ ಇನ್ನೂ ಅಂತಿಮ ಆನುಮೋದನೆ ನೀಡಬೇಕಿದೆ. ಈ ವರ್ಷದಿಂದಲೇ ಈ ನೂತನ ವ್ಯವಸ್ಥೆ ಜಾರಿಯಾಗುವ ಬಗ್ಗೆ ವಿಟಿಯು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Recommended Video

Kohli ಹಾಗು Padikkal ಮಾಡಿದ ವಿಶೇಷ ಸಾಧನೆ | Oneindia Kannada

ಬೆಳಗಾವಿಯಲ್ಲಿ ಎಂಜಿನಿಯರಿಂಗ್ ಕೋರ್ಸ್‌ಗಳ ಜತೆಗೆ ಸಂಗೀತ, ಯೋಗ, ಲಲಿತಕಲೆ, ಭೂಗೋಳ, ವಿಜ್ಞಾನ, ಕನ್ನಡ ಸಾಹಿತ್ಯ, ಬೌದ್ಧಿಕ ಆಸ್ತಿ ಹಕ್ಕು, ಸಮಾಜವಿಜ್ಞಾನ, ಇತಿಹಾಸ, ರಾಜಕೀಯ ವಿಜ್ಞಾನ,ಕೃತಕಬುದ್ಧಿಮತ್ತೆ, ರೊಬೊಟಿಕ್ಸ್, ಸಾಮಾಜಿಕ ಎಂಜಿನಿಯರಿಂಗ್ ಸೈಬರ್ ಕ್ರೈಂ ಮೊದಲಾದ ಕೋರ್ಸ್‌ಗಳನ್ನು ತೆಗೆದುಕೊಂಡು ಉತ್ತೀರ್ಣರಾಗುವ ಮೂಲಕ ಹೆಚ್ಚುವರಿಯಾಗಿ ಪದವಿ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗುತ್ತಿದೆ.

English summary
All engineering colleges under Visvesvaraya Technological University (VTU) will offer ‘Biology for Engineers’ as a subject from this year. It will be part of the ‘ability enhancement courses’ under the National Education Policy (NEP).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X