ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನು ಆಮ್ ಆದ್ಮಿ ಆಗೋಲ್ಲವೆಂದ ಕಿರಣ್

By Srinath
|
Google Oneindia Kannada News

biocon-cmd-bpac-president-kiran-mazumdar-not-to-join-aam-aadmi-party
ಬೆಂಗಳೂರು, ಜ.20: ಐಟಿ-ಬಿಟಿ ಜನ ಸಾಲುಗಟ್ಟಿ ಆಮ್ ಆದ್ಮಿ ಪಕ್ಷಕ್ಕೆ ಅಂಕಿತವಾಗುತ್ತಿದ್ದಾರೆ. ಈ ಮಧ್ಯೆ ತಾವೊಬ್ಬ ಮುಖ್ಯಮಂತ್ರಿ ಎಂಬುದನ್ನೂ ಮರೆತು ಅರವಿಂದ್ ಕೇಜ್ರೀವಾಲಾರೇನೋ ದಿಲ್ಲಿ ರಸ್ತೆಯಲ್ಲೇ ಧರಣಿ ಕುಳಿತುಬಿಟ್ಟಿದ್ದಾರೆ.

ಆದರೆ ಬೆಂಗಳೂರಿನಲ್ಲಿ ಬಿಟಿ ಉದ್ಯಮಿ, ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಅವರು ಮಾತ್ರ ತಾನು Aam Adami Party ಸೇರ್ಪಡೆಯಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 'ನಾನು ಆಮ್ ಆದ್ಮಿ ಪಕ್ಷವನ್ನಾಗಲಿ ಅಥವಾ ಮತ್ಯಾವುದೇ ಪಕ್ಷವನ್ನಾಗಲಿ ಸೇರುವುದಿಲ್ಲ' ಎಂದು ಒತ್ತಿ ಹೇಳಿದ್ದಾರೆ.

Biocon ಕಂಪನಿಯ ಮಾಲೀಕರಾದ ಕಿರಣ್ ಮಜುಂದಾರ್ ಷಾ ಅವರು 'ಉತ್ತಮ ಆಡಳಿತ ಮತ್ತು ಅರ್ಥವ್ಯವಸ್ಥೆಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡುವುದಕ್ಕಷ್ಟೇ ನನ್ನನ್ನು ಸೀಮಿತಗೊಳಿಸಿಕೊಳ್ಳುತ್ತೇನೆ' ಎಂದು ಹೇಳಿದ್ದಾರೆ. ( ಕರ್ನಾಟಕದ ಮತ್ತೊಬ್ಬ ಉದ್ಯಮಿ ಆಮ್ ಆದ್ಮಿ ಆದ್ರು! )

ಕ್ಯಾಪ್ಟನ್ ಗೋಪಿನಾಥ್, ವಿ ಬಾಲಕೃಷ್ಣನ್, ಇದೀಗ ನಂದನ್ ನಿಲೇಕಣಿ ಅವರುಗಳು ರಾಜಕೀಯದೊಂದಿಗೆ ಗುರುತಿಸಿಕೊಂಡು, ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ಆರಂಭಿಸಿರುವ ಹೊತ್ತಿನಲ್ಲಿ ಬಿ ಪ್ಯಾಕ್ ಜತೆ ಪ್ರಮುಖವಾಗಿ ಗುರುತಿಸಿಕೊಂಡಿರುವ ( President- Bangalore Political Action Committee) ತಾವು ರಾಜಕೀಯ ಪ್ರವೇಶ ಮಾಡುತ್ತೀರಿ ಎಂದು ಕಿರಣ್ ಮಜುಂದಾರ್ ಅವರನ್ನು ಸುದ್ದಿಗಾರರು ಕೇಳಿದಾಗ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

ನಂದನ್ ನಿಲೇಕಣಿ ರಾಜಕೀಯ ಸೇರಿರುವುದರ ಬಗ್ಗೆ ಮಾತನಾಡಿದ ಕಿರಣ್ ಮಜುಂದಾರ್ ಅವರು ಹೊಸತನ, ಹೊಸ ನೀರು ತರಲು ಬಯಸುವ ಜನ ಆದ್ಯವಾಗಿ ರಾಜಕೀಯಕ್ಕೆ ಬರಬೇಕು. ಅಂತಹವರು ರಾಜಕೀಯ ಸೇರುವುದು ನಿಜಕ್ಕೂ ಸ್ವಾಗತಾರ್ಹ. ನಿಲೇಕಣಿಗೆ ಸ್ಪಷ್ಟ ದೃಷ್ಟಿಕೋನವಿದೆ. ನಿಲೇಕಣಿ ಅಂತಹವರು ಖಂಡಿತ ಬದಲಾವಣೆ ತರಬಲ್ಲರು ಎಂದು ಮೆಚ್ಚುಗೆ ಸೂಚಿಸಿದರು.

ಉದ್ಯಮ ರಂಗದಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರವಿದೆ. ಮೊದಲು ಇದನ್ನು ಸರಿಪಡಿಸಬೇಕಾಗಿದೆ ಎಂದು ಕಿರಣ್ ಮಜುಂದಾರ್ ಅವರು ಮಾರ್ಮಿಕವಾಗಿ ಹೇಳಿದರು.

English summary
Biocon Chief bpac president Kiran Mazumdar not to join aam aadmi party. Contrary to the recent trend of political activism of top some corporate figures who have joined the Aam Adami Party (AAP), Biocon Chairperson Kiran Mazumdar-Shaw on Saturday ruled out joining any political party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X