ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರ್ಕೆಟ್ ನಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ

|
Google Oneindia Kannada News

ಬೆಂಗಳೂರು, ಜೂ.23 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕನಸಿನ ಹಸಿ ತ್ಯಾಜ್ಯದಿಂದ ಜೈವಿಕ ಅನಿಲ ಹಾಗೂ ವಿದ್ಯುತ್‌ ಉತ್ಪಾದನೆ ಮಾಡುವ ಯೋಜನೆಗೆ ಇಂದು ಚಾಲನೆ ಸಿಕ್ಕಿದೆ. ಈ ಘಟಕ ಐದು ಟನ್ ಹಸಿ ತ್ಯಾಜ್ಯವನ್ನು ಸಂಸ್ಕರಿಸಿ ಜೈವಿಕ ಅನಿಲ ಉತ್ಪಾದಿಸುವ ಶಕ್ತಿ ಹೊಂದಿದ್ದು, ಅದನ್ನು ವಿದ್ಯುತ್ ಆಗಿ ಪರಿವರ್ತಿಸಲಾಗುತ್ತದೆ.

ನಗರದ ಕೆ.ಆರ್‌. ಮಾರುಕಟ್ಟೆ ಆವರಣದಲ್ಲಿ ಸೋಮವಾರ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಘಟಕವನ್ನು ಉದ್ಘಾಟಿಸಿದರು. ಮೇಯರ್ ಕಟ್ಟೆ ಸತ್ಯನಾರಾಯಣ, ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಾಬಾ ಆಟೋಮೆಟಿಕ್‌ ರೀಸರ್ಚ್‌ ಸೆಂಟರ್‌ ಮಾರ್ಗದರ್ಶನದಲ್ಲಿ ಅಶೋಕ್‌ ಬಯೋ ಗ್ರೀನ್‌ ಸಂಸ್ಥೆ 79 ಲಕ್ಷ ರೂ. ವೆಚ್ಚದಲ್ಲಿ ಈ ಘಟಕವನ್ನು ನಿರ್ಮಾಣ ಮಾಡಿದೆ. ಮೂರು ವರ್ಷಗಳ ಕಾಲ ಸಂಸ್ಥೆಯೇ ಇದನ್ನು ನಿರ್ವಹಣೆ ಮಾಡಲಿದೆ. ಕೆ.ಆರ್‌. ಮಾರುಕಟ್ಟೆಯ 600 ಚದರ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಘಟಕ ನಿತ್ಯ 5 ಟನ್‌ ಹಸಿ ತ್ಯಾಜ್ಯದಿಂದ 50 ಕಿಲೋ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಲಿದ್ದು, ಇದನ್ನು ಮಾರುಟ್ಟೆಯ ಬೀದಿ ದೀಪಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ಮೇಯರ್ ಕಟ್ಟೆ ಸತ್ಯನಾರಾಯಣ ಮಾಹಿತಿ ನೀಡಿದ್ದಾರೆ.

ಬಿಬಿಎಂಪಿಯ ಕನಸಿನ ಯೋಜನೆ

ಬಿಬಿಎಂಪಿಯ ಕನಸಿನ ಯೋಜನೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕನಸಿನ ಹಸಿ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದಿಸುವ ಯೋಜನೆಗೆ ಇಂದು ಚಾಲನೆ ಸಿಕ್ಕಿದೆ. ಕೆ.ಆರ್‌. ಮಾರುಕಟ್ಟೆ ಆವರಣದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಘಟಕವನ್ನು ಉದ್ಘಾಟಿಸಿದರು.

ಐದು ಟನ್ ಹಸಿ ತ್ಯಾಜ್ಯ ಸಂಸ್ಕರಣೆ

ಐದು ಟನ್ ಹಸಿ ತ್ಯಾಜ್ಯ ಸಂಸ್ಕರಣೆ

ಈ ಘಟಕ ಐದು ಟನ್ ಹಸಿ ತ್ಯಾಜ್ಯವನ್ನು ಸಂಸ್ಕರಿಸಿ ಜೈವಿಕ ಅನಿಲ ಉತ್ಪಾದಿಸುವ ಶಕ್ತಿ ಹೊಂದಿದ್ದು, ಅದನ್ನು ವಿದ್ಯುತ್ ಆಗಿ ಪರಿವರ್ತಿಸಲಾಗುತ್ತದೆ. ವಿದ್ಯುತ್ ಅನ್ನು ಮಾರುಟ್ಟೆಯ ಬೀದಿ ದೀಪಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ಮೇಯರ್ ಕಟ್ಟೆ ಸತ್ಯನಾರಾಯಣ ಮಾಹಿತಿ ನೀಡಿದ್ದಾರೆ.

79 ಲಕ್ಷ ರೂ.ವೆಚ್ಚ

79 ಲಕ್ಷ ರೂ.ವೆಚ್ಚ

ಬಾಬಾ ಆಟೋಮೆಟಿಕ್‌ ರೀಸರ್ಚ್‌ ಸೆಂಟರ್‌ ಮಾರ್ಗದರ್ಶನದಲ್ಲಿ ಅಶೋಕ್‌ ಬಯೋ ಗ್ರೀನ್‌ ಸಂಸ್ಥೆ 79 ಲಕ್ಷ ರೂ. ವೆಚ್ಚದಲ್ಲಿ ಈ ಘಟಕವನ್ನು ನಿರ್ಮಾಣ ಮಾಡಿದೆ. ಕೆ.ಆರ್‌. ಮಾರುಕಟ್ಟೆಯ 600 ಚದರ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಘಟಕ ನಿತ್ಯ 5 ಟನ್‌ ಹಸಿ ತ್ಯಾಜ್ಯದಿಂದ 50 ಕಿಲೋ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಲಿದೆ.

ಒಟ್ಟು 15 ಘಟಕ ಸ್ಥಾಪನೆ

ಒಟ್ಟು 15 ಘಟಕ ಸ್ಥಾಪನೆ

ಬೆಂಗಳೂರಿನ 15 ಸ್ಥಳಗಳಲ್ಲಿ ಜೈವಿಕ ವಿದ್ಯುತ್‌ ಉತ್ಪಾದನಾ ಘಟಕಗಳನ್ನು ನಿರ್ಮಿಸಲು ಬಿಬಿಎಂಪಿ ಉದ್ದೇಶಿಸಿದೆ. ಪ್ರಸ್ತುತ 11 ಸ್ಥಳಗಳಲ್ಲಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕೆ.ಆರ್‌. ಮಾರುಕಟ್ಟೆ ಹೊರತಾಗಿ ಮತ್ತಿಕೆರೆ, ಯಲಹಂಕ, ಫ್ರೀಡಂ ಪಾರ್ಕ್‌ ಹಿಂಭಾಗ, ವರ್ತೂರು, ಕೂಡ್ಲು ಗ್ರಾಮ, ಬೇಗೂರು, ಬೊಮ್ಮನಹಳ್ಳಿ, ಸೌತ್‌ ಎಂಡ್‌ ವೃತ್ತ, ವಿಶ್ವೇಶ್ವರಯ್ಯ ಬಡಾವಣೆಗಳಲ್ಲಿ ಘಟಕಗಳ ಶೀಘ್ರದಲ್ಲೇ ಆರಂಭವಾಗಲಿದೆ.

5 ಟನ್ ತಾಜ್ಯದ ಹೊರೆ ಇಳಿಕೆ

5 ಟನ್ ತಾಜ್ಯದ ಹೊರೆ ಇಳಿಕೆ

ಈ ಘಟಕ ನಿರ್ಮಾಣದಿಂದ ಕೆ.ಆರ್‌. ಮಾರುಕಟ್ಟೆಯಲ್ಲಿ ಉತ್ಪಾದನೆಯಾಗುತ್ತಿರುವ 20 ಟನ್‌ ತ್ಯಾಜ್ಯದಲ್ಲಿ 5 ಟನ್‌ ವಿಲೇವಾರಿ ಮಾಡುವ ಹೊರೆ ಕಡಿಮೆಯಾಗಿದೆ. ಉಳಿದೆಡೆ ಘಟಕಗಳು ಕಾರ್ಯಾರಂಭ ಮಾಡಿದರೆ ಕನಿಷ್ಠ 50 ಟನ್‌ ಹಸಿ ತ್ಯಾಜ್ಯ ವಿಲೇವಾರಿ ಜವಾಬ್ದಾರಿ ಕಡಿಮೆಯಾಗಲಿದೆ.

English summary
The Bruhat Bangalore Mahanagara Palike (BBMP) has established Bio-methanation Plant at Krishna Rajendra Market (K.R.Market). On Monday Union Minister for Chemicals and Fertilizers Ananth Kumar inaugurated the plant. Plant will convert 5 tonnes of waste generated at Market to power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X