• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ವಿ.ವಿ. ತ್ರಿವಿಭಜನೆಗೆ ವಿಧಾನಸಭೆ ಅಸ್ತು

By Vanitha
|

ಬೆಂಗಳೂರು, ಜುಲೈ 17 : ಬೆಂಗಳೂರು ವಿಶ್ವ ವಿದ್ಯಾನಿಲಯದ ತ್ರಿವಿಭಜನೆ ಕುರಿತಂತೆ ಕರ್ನಾಟಕ ರಾಜ್ಯ ವಿಶ್ವ ವಿದ್ಯಾನಿಲಯಗಳ (ತಿದ್ದುಪಡಿ) ವಿಧೇಯಕ 2015 ಅನ್ನು ರಾಜ್ಯ ವಿಧಾನಸಭೆ ಶುಕ್ರವಾರ ಅಂಗೀಕರಿಸಿತು.

ಕರ್ನಾಟಕ ರಾಜ್ಯ ವಿವಿಗಳ (ತಿದ್ದುಪಡಿ) ವಿಧೇಯಕ 2015ಅನ್ನು ವಿಧಾನಸಭೆಯಲ್ಲಿ ಪರ್ಯಾಲೋಚನೆಗೆ ಮಂಡಿಸಿದ ರಾಜ್ಯ ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವ ಆರ್. ವಿ. ದೇಶಪಾಂಡೆ ಅವರು ಪ್ರಾಸ್ತವಿಕವಾಗಿ ಮಾತನಾಡಿ ಆಡಳಿತ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಂಗಳೂರು ವಿವಿಯನ್ನು 3 ಭಾಗಗಳಾಗಿ ವಿಭಜನೆ ಮಾಡುವುದು ಸೂಕ್ತವೆಂದು ಕಂಡುಬಂದಿದೆ. ಈ ಬಗ್ಗೆ ಶಿಕ್ಷಣ ತಜ್ಞರ ಸಮಿತಿಯ ವರದಿಯನ್ನಾಧರಿಸಿ ಈ ವಿಧೇಯಕವನ್ನು ಮಂಡಿಸಲಾಗಿದೆ ಎಂದರು.[ಹುಡುಗರಿಗೂ ತೆರೆದುಕೊಂಡ ಮೌಂಟ್ ಕಾರ್ಮೆಲ್ ಬಾಗಿಲು!]

ಈ ವಿಧೇಯಕದನ್ವಯ ಬೆಂಗಳೂರು ವಿವಿಯು ಜ್ಞಾನಭಾರತಿಯ ಕ್ಯಾಂಪಸ್ಸಿನೊಂದಿಗೆ ಮತ್ತು ಕರ್ನಾಟಕ ವಿಧಾನ ಸಭಾ ಕ್ಷೇತ್ರಗಳಾದ ಬೆಂಗಳೂರಿನ ವಿಜಯನಗರ, ಪದ್ಮನಾಭನಗರ, ಬೊಮ್ಮನಹಳ್ಳಿ, ಆನೇಕಲ್, ಬೆಂಗಳೂರು ದಕ್ಷಿಣ, ಯಶವಂತಪುರ, ರಾಜರಾಜೇಶ್ವರಿನಗರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್ ಮತ್ತು ಗೋವಿಂದರಾಜನಗರ, ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಹಾಗೂ ರಾಮನಗರ ಜಿಲ್ಲೆಯ ಮಾಗಡಿ, ರಾಮನಗರ, ಕನಕಪುರ ಮತ್ತು ಚನ್ನಪಟ್ಟಣ ಪ್ರದೇಶಗಳಲ್ಲಿ ಪ್ರಾದೇಶಿಕ ಅಧಿಕಾರ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ.

ಬೆಂಗಳೂರು ಕೇಂದ್ರ ವಿಶ್ವದ್ಯಾನಿಲಯ ಎಂಬ ಹೊಸ ವಿಶ್ವವಿದ್ಯಾನಿಲಯವು ಸಂಯೋಜನೆಗೊಳಿಸುವ ವಿವಿಯಾಗಿ ಬೆಂಗಳೂರು ಸೆಂಟ್ರಲ್ ಕಾಲೇಜು ಕ್ಯಾಂಪಸ್ಸಿನಲ್ಲಿ ಕೇಂದ್ರ ಕಾರ್ಯಸ್ಥಾನದೊಂದಿಗೆ ಮತ್ತು ಕರ್ನಾಟಕ ವಿಧಾನಸಭಾ ಕ್ಷೇತ್ರಗಳಾದ ಬೆಂಗಳೂರಿನ ಶಾಂತಿನಗರ, ಬ್ಯಾಟರಾಯನಪುರ, ಯಲಹಂಕ, ಮಲ್ಲೇಶ್ವರಂ, ಹೆಬ್ಬಾಳ, ಶಿವಾಜಿನಗರ, ಗಾಂಧಿನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಬಸವನಗುಡಿ, ಬಿಟಿಎಂ ಲೇಔಟ್, ಜಯನಗರ ಮತ್ತು ರಾಜಾಜಿನಗರ ಪ್ರದೇಶಗಳಲ್ಲಿ ಪ್ರಾದೇಶಿಕ ಅಧಿಕಾರ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ.[ಮಾಯವಾಗಲಿದೆ ಪುಟಗಟ್ಟಲೇ ಬರೆಯುವ ಪರಿಪಾಠ]

ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಎಂಬ ನೂತನ ವಿವಿಯನ್ನು ಸಂಯೋಜನೆಗೊಳಿಸುವ ವಿಶ್ವವಿದ್ಯಾನಿಲಯವಾಗಿ ಜಂಗಮ ಕೋಟೆಯಲ್ಲಿ (ಶಿಡ್ಲಘಟ್ಟ) (ಕೋಲಾರ ಸ್ನಾತಕೋತ್ತರ ಕೇಂದ್ರದಲ್ಲಿ ತಾತ್ಕಾಲಿಕ ಕ್ಯಾಂಪಸ್ ಕಚೇರಿ) ಕೇಂದ್ರ ಕಾರ್ಯಸ್ಥಾನದೊಂದಿಗೆ ಮತ್ತು ಕರ್ನಾಟಕ ವಿಧಾನಸಭಾ ಕ್ಷೇತ್ರಗಳಾದ ಕೋಲಾರ ಜಿಲ್ಲೆಯ ಶ್ರಿನಿವಾಸಪುರ, ಮುಳಬಾಗಿಲು,ಕೆ.ಜಿ.ಎಫ್, ಬಂಗಾರಪೇಟೆ, ಕೋಲಾರ, ಮಾಲೂರು ಮತ್ತು ಕೋಲಾರ ಸ್ನಾತಕೋತ್ತರ ಕೇಂದ್ರ ಬೆಂಗಳೂರಿನ ಕೆ.ಆರ್.ಪುರಂ, ಪುಲಿಕೇಶಿನಗರ, ಸರ್ವಜ್ಞನಗರ, ಸಿ.ವಿ. ರಾಮನ್ ನಗರ ಮತ್ತು ಮಹಾದೇವಪುರ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಮತ್ತು ಚಿಂತಾಮಣಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಲಾಪುರ ಮತ್ತು ಹೊಸಕೋಟೆ ಪ್ರದೇಶಗಳಲ್ಲಿ ಪ್ರ್ರಾದೇಶಿಕ ಅಧಿಕಾರ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Karnataka state Universities (Amendment) bill, 2015 trifurcating Bangalore University was passed by state assembly on 17th July by voice vote. The name of the University too will be changed from 'Bangalore University' to 'Bengaluru University'.
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more