ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ದೊಡ್ಡ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಕಡ್ಡಾಯ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 17: ಮಳೆ ನೀರನ್ನು ಸದ್ಬಳಕೆ ಮಾಡುವ ದೃಷ್ಟಿಯಿಂದ ಈಗಿರುವ ಕಾನೂನನ್ನು ರಾಜ್ಯ ಸರ್ಕಾರ ಮತ್ತಷ್ಟು ಬಿಗಿಗೊಳಿಸಿದೆ.

ಈ ಸಂಬಂಧ ಸದನದಲ್ಲಿ ಗುರುವಾರ ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ ವಿಧೇಯಕ ವನ್ನು ಅಂಗೀಸಲಾಗಿತ್ತು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ವಿಧೇಯಕ ಅಂಗೀಕರಿಸುವಂತೆ ಕೋರಿ ಸದನದ ಒಪ್ಪಿಗೆ ಪಡೆದುಕೊಂಡರು.

ಮಳೆ ನೀರು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಪ್ರಸ್ತುತ ಇರುವ ಕಾನೂನನ್ನು ರಾಜ್ಯ ಸರ್ಕಾರ ಮತ್ತಷ್ಟು ಬಿಗಿಗೊಳಿಸಿದ್ದು, ಈ ಕುರಿತ ವಿಧೇಯಕವೊಂದು ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ.

Bengaluru: Bill Mandates Large Buildings To Use Harvested Rainwater By Installing Dual Pipe System

ಈಗಾಗಲೇ ನಗರದಲ್ಲಿ ಮಳೆ ನೀರು ಕೊಯ್ಡು ಕಡ್ಡಾಯವಾಗಿದೆ. ಆದರೂ ಬಹಳಷ್ಟು ಮಂದಿ ನಿರ್ಮಿಸಿಕೊಂಡಿಲ್ಲ. ಇದು ಭವಿಷ್ಯದಲ್ಲಿ ನೀರಿನ ಅಭಾವ ಎದುರಿಸುವ ಸಾಧ್ಯತೆ ಹೆಚ್ಚಿದೆ.

ಹೀಗಾಗಿ ರಾಜ್ಯ ಸರ್ಕಾರ ರಾಜಧಾನಿ ಬೆಂಗಳೂರಿನಲ್ಲಿ 30*40 ಮತ್ತು ಅದಕ್ಕಿಂತ ಮೇಲ್ಪಟ್ಟ ನಿವೇಶನದಲ್ಲಿ ನಿರ್ಮಿಸಲ್ಪಟ್ಟ ಕಟ್ಟಡದಲ್ಲಿ ಮಳೆ ನೀರು ಕೊಯ್ದು ಕಡ್ಡಾಯವಾಗಿರಬೇಕು, 40*60 ಹಾಗೂ ಅದಕ್ಕಿಂತ ಮೇಲ್ಪಟ್ಟ ನಿವೇಶನದಲ್ಲಿ ನಿರ್ಮಿಸುವ ಕಟ್ಟಡದಲ್ಲಿ ಎರಡು ಪೈಪ್ ಗಳನ್ನು ಕಡ್ಡಾಯಗೊಳಿಸಿದೆ.

ಅಲ್ಲದೆ, 40*60 ಮತ್ತು ಅದಕ್ಕಿಂತ ಮೇಲ್ಪಟ್ಟ ನಿವೇಶನದಲ್ಲಿ ನಿರ್ಮಿಸಿುವ ಕಟ್ಟಡದಲ್ಲಿ ಎರಡು ಪೈಪ್ ಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ತಿಳಿಸಿದೆ.

ಒಂದು ಪೈಪ್ ಸಂಗ್ರಹಣೆ ಮತ್ತು ಮತ್ತೊಂದು ಪೈಪ್ ಬಳಕೆಯ ದೃಷ್ಟಿಯಿಂದಾಗಿದೆ. ಸಂಗ್ರ ಮಾಡುವುದರಿಂದ ಅಂತರ್ಜಲ ವೃದ್ಧಿಗೆ ಸಹಕಾರವಾಲಿದೆ.
216 ಚದರ ಮೀಟರ್ ಗಳಿಗಿಂತ ಕಡಿಮೆ ಇರದ ಮತ್ತು 1000 ಚದರ ಮೀಟರ್ ಗಿಂತ ಹೆಚ್ಚಲ್ಲದ ನಿವೇಶನ ಪ್ರದೇಶದಲ್ಲಿ ಕಟ್ಟಡವನ್ನು ಹೊಂದಿರುವವರು ಮಳೆ ನೀರು ಕೊಯ್ಡು ಕಡ್ಡಾಯಗೊಳಿಸಬೇಕು.

2021ರ ಪ್ರಾರಂಭಕ್ಕೆ ಮೊದಲು ಮಳೆ ನೀರು ಕೊಯ್ಲು ರಚನೆಯನ್ನು ಕಲ್ಪಿಸದಿದ್ದರೆ ಕೆಲವು ಷರತ್ತುಗಳಿಗೆ ಒಳಪಟ್ಟು ಮಳೆ ನೀರು ಶೇಖರಣೆಗಾಗಿ, ಬಳಕೆಗಾಗಿ ಅಥವಾ ಅಂತರ್ಜಲ ಪುನಃಭರ್ತಿಗಾಗಿ ಮಳೆ ನೀರು ಕೊಯ್ದು ರಚನೆಯನ್ನು ಒದಗಿಸಬೇಕು.

ಇನ್ನು ಕಾವೇರಿ ನೀರು ಅಥವಾ ಅಂತರ್ಜಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು, ಮಳೆ ನೀರು ಒಳಚರಂಡಿಯಲ್ಲಿ ಹರಿದು ಹೋಗುವುದನ್ನು ತಗ್ಗಿಸುವ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ವಿಧೇಯಕವನ್ನು ಅಂಗೀಕರಿಸಲಾಗಿದೆ. ಅಲ್ಲದೆ ನಗರ ಪ್ರವಾಹವನ್ನು ಇಳಿಸುವುದು ಮೇಲ್ಮೈ ಮತ್ತು ಅಂತರ್ಜಲದ ಅಂಚು ರಹಿತ ಮಾಲಿನ್ಯ ಮೂಲವನ್ನು ಕಡಿಮೆಗೊಳಿಸುವುದು.

ಅಂತರ್ಜಲದ ಗುಣಮಟ್ಟದ ಕಳಪೆಯಾಗಿದ್ದರೆ ಮಳೆ ನೀರು ಕೊಯ್ಲಿನ ಮೂಲಕ ಹೊಸದಾದ ನೀರಿನ ಮೂಲವನ್ನು ಕಲ್ಪಿಸುವುದು ಮತ್ತು ಮಳೆ ನೀರು ಕೊಯ್ಲಿನ ನೀರು ಉಚಿತವಾಗಿದ್ದು, ತಕ್ಷಣವೇ ಲಭ್ಯವಾಗಲಿದೆ.

ಸರಬರಾಜಿನ ವೆಚ್ಚವಿಲ್ಲದಿರುವುದರಿಂದ ಮಳೆನೀರು ಕೊಯ್ಲನ್ನು ಕಡ್ಡಾಯಗೊಳಿಸೋ ಉದ್ದೇಶವನ್ನು ಈ ವಿಧೇಯಕ ಹೊಂದಿದೆ. ಗ್ರಾಹಕರ ಕುಂದುಕೊರತೆಗಳನ್ನು ಆಲಿಸಿ, ಪರಿಹರಿಸುವ ಸಲುವಾಗಿ ನಗರದ 16 ಪ್ರದೇಶಗಳಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಸೆ.18 ರಂದು ಜಲ ಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ನಾಳೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಎಂಜಿನಿಯರ್ ಮತ್ತು ಹೆಚ್ಚುವರಿ ಮುಖ್ಯ ಎಂಜಿನಿಯರ್‌ಗಳು ಗ್ರಾಹಕರ ನೀರು ಮತ್ತು ಒಳಚರಂಡಿ ಸಮಸ್ಯೆಗಳ ಕುರಿತು ದೂರುಗಳನ್ನು ಸ್ವೀಕರಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ, ಜನರು www.bwssb.gov.in ಗೆ ಲಾಗ್ ಇನ್ ಮಾಡಬಹುದು, ಅಥವಾ ಸಹಾಯವಾಣಿ ಸಂಖ್ಯೆ: 1916 ಅಥವಾ ವಾಟ್ಸಾಪ್ ಸಂಖ್ಯೆ ಮೂಲಕ 87622 28888 ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

Recommended Video

ಮೋದಿ ನಡೆದು ಬಂದ ಹಾದಿ | Oneindia Kannada

English summary
The Bangalore Water Supply and Sewerage (Amendment) Bill 2021 was passed in the State Assembly on Thursday that mandates large buildings constructed on 10,000 sqftand above, will have to compulsorily make use of harvested rainwater by installing a dual-pipe system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X