ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲ್ಲೇಶ್ವರಂ ಪೊಲೀಸರಿಂದ ಬೈಕ್, ಆಟೊ ಹರಾಜು

By Kiran B Hegde
|
Google Oneindia Kannada News

ಬೆಂಗಳೂರು, ಡಿ. 27: ವಿವಿಧ ಪ್ರಕರಣಗಳಲ್ಲಿ ನಗರದ ಮಲ್ಲೇಶ್ವರಂ ಸಂಚಾರಿ ಠಾಣೆ ಪೊಲೀಸರು ವಶಪಡಿಸಿಕೊಂಡಿರುವ ಬೈಕ್ ಹಾಗೂ ಆಟೊಗಳನ್ನು ಬಹಿರಂಗ ಹರಾಜು ಹಾಕಲು ಇಲಾಖೆ ನಿರ್ಧರಿಸಿದೆ.

ಈ ಕುರಿತು ಠಾಣೆ ವತಿಯಿಂದ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ. ಠಾಣೆಯಲ್ಲಿ ವಶಪಡಿಸಿಕೊಂಡಿರುವ 15 ದ್ವಿ ಚಕ್ರ ವಾಹನಗಳು ಹಾಗೂ ಒಂದು ಆಟೊ ರಿಕ್ಷಾ ಸೇರಿ 16 ವಾಹನಗಳನ್ನು ಡಿ. 30ರಂದು ಬೆಳಗ್ಗೆ 11 ಗಂಟೆಗೆ ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣೆ ಆವರಣದಲ್ಲಿ ಬಹಿರಂಗವಾಗಿ ಹರಾಜು ಹಾಕಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

bike

ಅಮಾನತು ಮಾಡಿರುವ ವಾಹನಗಳನ್ನು ವಿಲೇವಾರಿ ಮಾಡಲು ನ್ಯಾಯಾಲಯ ಆದೇಶ ನೀಡಿದೆ. ಇದರ ಅನುಸಾರ ಸಾರ್ವಜನಿಕ ಹರಾಜು ಪ್ರಕ್ರಿಯೆ ಕೈಗೊಳ್ಳಲು ವಾಹನಗಳಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕನಿಷ್ಠ ದರ ನಿಗದಿಪಡಿಸಿದ್ದಾರೆಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
Auction of 15 bikes and a auto rickshaw is held at Malleshwaram police station on December 30, at 11 am. Police said auction is held according to instruction of the court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X