ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತ್ಯೇಕ ಬಸ್ ಪಥದಲ್ಲಿ ಕಾರು, ಬೈಕ್ ಸಂಚಾರ, ಇದು ಬೆಂಗಳೂರು!

|
Google Oneindia Kannada News

ಬೆಂಗಳೂರು, ನವೆಂಬರ್ 19 : ನಮ್ಮ ಬೆಂಗಳೂರು ಇರುವುದೇ ಹೀಗೆ. ಫುಟ್‌ಪಾತ್‌ನಲ್ಲಿ ಬೈಕ್ ಬರುತ್ತದೆ, ಒನ್ ವೇನಲ್ಲಿ ಬಂದು ನಮ್ಮನ್ನೇ ಗುರಾಯಿಸುತ್ತಾರೆ. ವಾಹನ ಪಾರ್ಕ್ ಮಾಡುವ ವಿಚಾರದಲ್ಲಂತೂ ಬೆಂಗಳೂರಿನ ಜನರು ಮಾದರಿ.

ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಮಾಡುತ್ತಿರುವ ತಂತ್ರಗಳು ಫಲ ಕೊಡುತ್ತಿವೆಯೇ?. ಇದಕ್ಕೆ ಜನರ ಸಹಕಾರ ಹೇಗಿದೆ? ಎಂಬುದನ್ನು ಜನರೇ ಒಮ್ಮೆ ಅವಲೋಕನ ಮಾಡಿಕೊಳ್ಳಬೇಕಾಗಿದೆ. ಈಗ ನಗರದಲ್ಲಿ ಹೊಸ ಸಮಸ್ಯೆ ಆರಂಭವಾಗಿದೆ.

ಪ್ರತ್ಯೇಕ ಬಿಎಂಟಿಸಿ ಬಸ್ ಪಥ; ಸಾಮಾನ್ಯ ಸೂಚನೆಗಳು ಪ್ರತ್ಯೇಕ ಬಿಎಂಟಿಸಿ ಬಸ್ ಪಥ; ಸಾಮಾನ್ಯ ಸೂಚನೆಗಳು

ನಗರದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಪ್ರತ್ಯೇಕ ಪಥವನ್ನು ಆರಂಭಿಸಲಾಗಿದೆ. ಪ್ರಾಯೋಗಿಕವಾಗಿ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ. ಆರ್. ಪುರ ರೈಲ್ವೆ ನಿಲ್ದಾಣ ಮತ್ತು ಬೈಯಪ್ಪನಹಳ್ಳಿ ತನಕ ಪ್ರತ್ಯೇಕ ಬಸ್ ಪಥವನ್ನು ನಿರ್ಮಾಣ ಮಾಡಲಾಗಿದೆ.

ಪ್ರತ್ಯೇಕ ಬಸ್ ಪಥ; ಬಿಎಂಟಿಸಿ ಬಸ್‌ಗೆ ಚೆಂದದ ಹೆಸರುಪ್ರತ್ಯೇಕ ಬಸ್ ಪಥ; ಬಿಎಂಟಿಸಿ ಬಸ್‌ಗೆ ಚೆಂದದ ಹೆಸರು

ಈ ಪಥದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್, ಆಂಬ್ಯುಲೆನ್ಸ್ ಮತ್ತು ಅಗ್ನಿ ಶಾಮಕ ವಾಹನಗಳು ಬಿಟ್ಟು ಬೇರೆ ವಾಹನಗಳಿಗೆ ಪ್ರವೇಶವಿಲ್ಲ ಎಂದು ನಿಯಮ ರೂಪಿಸಲಾಗಿದೆ. ಆದರೆ, ನಮ್ಮ ಬೆಂಗಳೂರಿನ ಜನರು ಈ ನಿಯಮವನ್ನು ಗಾಳಿಗೆ ತೂರಿದ್ದಾರೆ.

ಬಿಎಂಟಿಸಿ ಪ್ರತ್ಯೇಕ ಬಸ್‌ ಪಥದಲ್ಲಿ ಬೇರೆ ವಾಹನ ಸಂಚರಿಸಿದರೆ ಏನಾಗುತ್ತೆ? ಬಿಎಂಟಿಸಿ ಪ್ರತ್ಯೇಕ ಬಸ್‌ ಪಥದಲ್ಲಿ ಬೇರೆ ವಾಹನ ಸಂಚರಿಸಿದರೆ ಏನಾಗುತ್ತೆ?

ಏನಿದು ಪ್ರತ್ಯೇಕ ಬಸ್ ಪಥ ಯೋಜನೆ?

ಏನಿದು ಪ್ರತ್ಯೇಕ ಬಸ್ ಪಥ ಯೋಜನೆ?

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಸಂಚಾರಿ ಪೊಲೀಸ್, ನಗರ ಭೂ ಸಾರಿಗೆ ನಿರ್ದೇಶನಾಲಯ ಜಂಟಿ ಸಹಭಾಗಿತ್ವದಲ್ಲಿ ಬೆಂಗಳೂರು ನಗರದಲ್ಲಿ 'ನಿಮ್ಮ ಬಸ್' ಎಂಬ ಪರಿಕಲ್ಪನೆಯಲ್ಲಿ ಪ್ರತ್ಯೇಕ ಬಸ್ ಪಥವನ್ನು ನಿರ್ಮಾಣ ಮಾಡಲಾಗಿದೆ. ಬಸ್‌ಗಳು ಸಂಚಾರ ದಟ್ಟಣೆಯಲ್ಲಿ ಸಿಲುಕುವುದನ್ನು ತಪ್ಪಿಸಿ ಪ್ರಯಾಣದ ವೇಳೆಯನ್ನು ಸುಗಮಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಹೊರವರ್ತುಲ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಜಾರಿ

ಹೊರವರ್ತುಲ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಜಾರಿ

ಬೆಂಗಳೂರು ನಗರದ ಹೊರವರ್ತುಲ ರಸ್ತೆಯಲ್ಲಿ ಪ್ರತ್ಯೇಕ ಬಸ್ ಪಥ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ. ಆರ್. ಪುರ ರೈಲ್ವೆ ನಿಲ್ದಾಣ ಮತ್ತು ಬೈಯಪ್ಪನಹಳ್ಳಿ ತನಕ ಪ್ರತ್ಯೇಕ ಬಸ್ ಪಥವಿದೆ. ಆದರೆ, ಈಗ ಪ್ರತ್ಯೇಕ ಪಥದಲ್ಲಿ ಕಾರು, ಬೈಕ್ ಸಂಚಾರ ನಡೆಸುತ್ತಿದ್ದು ಯೋಜನೆಯ ಮೂಲ ಉದ್ದೇಶವೇ ಹಳ್ಳ ಹಿಡಿದಿದೆ.

10 ಲಕ್ಷ ಉದ್ಯೋಗಿಗಳು

10 ಲಕ್ಷ ಉದ್ಯೋಗಿಗಳು

ಹೊರವರ್ತುಲ ರಸ್ತೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಈ ರಸ್ತೆಯು ಉತ್ತರ, ಪೂರ್ವ ಮತ್ತು ದಕ್ಷಿಣದಲ್ಲಿರುವ ಟೆಕ್ ಹಬ್ಸ್‌ಗಳನ್ನು ನಗರದೊಂದಿಗೆ ಸಂಪರ್ಕಿಸುತ್ತದೆ. ಇದೊಂದು ಭಾರಿ ದಟ್ಟಣೆಯ ಕಾರಿಡಾರ್ ಆಗಿದ್ದು, ಇದರಿಂದಾಗಿ ಪ್ರಯಾಣದ ವೇಳೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಪ್ರತ್ಯೇಕ ಬಸ್ ಪಥದಿಂದಾಗಿ ಸಂಚಾರ ದಟ್ಟಣೆಯ ಸಮಸ್ಯೆಗೆ ಪರಿಹಾರ ಸಿಗಲಿದೆ.

ಹೇಗಿದೆ ಪ್ರತ್ಯೇಕ ಬಸ್ ಪಥ

ಹೇಗಿದೆ ಪ್ರತ್ಯೇಕ ಬಸ್ ಪಥ

ಪ್ರಾಯೋಗಿಕವಾದ ಪ್ರತ್ಯೇಕ ಬಸ್ ಪಥದಲ್ಲಿ 24 ಪ್ರಮುಖ ಬಸ್ ನಿಲ್ದಾಣಗಳಿವೆ. 5 ಪ್ರಮುಖ ಇಂಟರ್ ಸೆಕ್ಷನ್ಸ್‌ಗಳಿವೆ. ಸಂಚಾರ ನಡೆಸುವ ಬಸ್‌ಗಳ ಸರಾಸರಿ ವೇಗ 10 ರಿಂದ 15 ಕಿ. ಮೀ. ಗಂಟೆಗೆ. ರಸ್ತೆಯ ಎರಡೂ ಬದಿಯಲ್ಲಿ ಬಿಎಂಟಿಸಿ ಬಸ್‌ಗಳಿಗೆ ಮೀಸಲಾದ ಒಂದು ಪಥ ಇರುತ್ತದೆ. ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಸುಧಾರಿತ ಬಸ್ ನಿಲ್ದಾಣದ ವ್ಯವಸ್ಥೆ ಮಾಡಲಾಗಿದೆ.

ಬೇರೆ ವಾಹನಗಳು ಸಂಚಾರ ನಡೆಸುವಂತಿಲ್ಲ

ಬೇರೆ ವಾಹನಗಳು ಸಂಚಾರ ನಡೆಸುವಂತಿಲ್ಲ

ಪ್ರತ್ಯೇಕ ಬಸ್ ಪಥದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್, ಅಗ್ನಿ ಶಾಮಕ, ಆಂಬ್ಯುಲೆನ್ಸ್‌ ಮಾತ್ರ ಸಂಚಾರ ನಡೆಸಬಹುದು. ಕಾರು ಅಥವ ಬೈಕ್ ಸಂಚಾರ ನಡೆದಂತೆ ಜನರಿಗೆ ಅರಿವು ಮೂಡಿಸಲಾಗಿದೆ. ಬಸ್ ಪಥದಲ್ಲಿ ಸಂಚಾರ ನಡೆಸಿದರೆ ದಂಡ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಆದರೆ, ಜನರು ನಿಯಮವನ್ನು ಗಾಳಿಗೆ ತೂರಿ ಪ್ರತ್ಯೇಕ ಪಥದಲ್ಲಿ ಸಂಚಾರ ನಡೆಸುತ್ತಿದ್ದಾರೆ.

English summary
Bike and Car entering the bus priority lane in Bengaluru city. What is the use of exclusive lane for buses. BMTC and BBMP to take action against vehicle who using the bus lane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X