ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದೇ ಒಂದು ರೂಪಾಯಿ ಪ್ರಶಸ್ತಿ ಮೊತ್ತ ಬೇಡ : 'ಲಾರ್ಡ್' ಪ್ರಥಮ್

ರೈತರಿಗೆ, ಸೈನಿಕರಿಗೆ, ಮಹಿಳೆಯರಿಗೆ, ನಮ್ಮ ತಂದೆ ಅವರ ಊರಿನ ಅಭಿವೃದ್ಧಿಗೆ ಪ್ರಶಸ್ತಿ ಮೊತ್ತವನ್ನು ನೀಡುವೆ: ಬಿಗ್ ಬಾಸ್ ವಿನ್ನರ್ ಪ್ರಥಮ್

By Mahesh
|
Google Oneindia Kannada News

ಬೆಂಗಳೂರು, ಜನವರಿ 30: ಕಲರ್ಸ್ ವಾಹಿನಿಯ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ 4ನೇ ಆವೃತ್ತಿಯ ವಿಜೇತರಾಗಿ ನಿರ್ದೇಶಕ ಪ್ರಥಮ್ ಹೊರಹೊಮ್ಮಿದ್ದಾರೆ. ಪ್ರಶಸ್ತಿ ಗೆದ್ದ ಬೆನ್ನಲ್ಲೇ ಪ್ರಶಸ್ತಿ ಮೊತ್ತವಾದ 50 ಲಕ್ಷ ರುಪಾಯಿಗಳನ್ನು ಸಾಮಾಜಿಕ ಕಾರ್ಯಗಳಿಗೆ ಬಳಸುವುದಾಗಿ ಘೋಷಿಸಿದ್ದಾರೆ.

ಈ ಪ್ರಶಸ್ತಿ ಮೊತ್ತದಲ್ಲಿ ಒಂದೇ ಒಂದು ರೂಪಾಯಿ ಕೂಡಾ ನನಗೆ ಬೇಡ, ರೈತರಿಗೆ, ಸೈನಿಕರಿಗೆ, ಮಹಿಳೆಯರಿಗೆ, ನಮ್ಮ ತಂದೆ ಅವರ ಊರಿನ ಅಭಿವೃದ್ಧಿಗೆ ಪ್ರಶಸ್ತಿ ಮೊತ್ತವನ್ನು ನೀಡುವೆ ಎಂದು ನಿರ್ದೇಶಕ ಪ್ರಥಮ್ ಅವರು ಘೋಷಿಸಿದರು. [ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿಗಳು]

ಬಿಡದಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಅಂತಿಮ ಹಂತದಲ್ಲಿ ಪ್ರಥಮ್, ಕೀರ್ತಿಕುಮಾರ್, ರೇಖಾ ಇದ್ದರು. ಇದಕ್ಕೂ ಮುನ್ನ ಮೋಹನ್ ಮತ್ತು ಮಾಳವಿಕಾ ಮನೆಯಿಂದ ಹೊರ ನಡೆದಿದ್ದರು.

Bigg Boss Kannada 4 reality Show winner Pratham donates entire prize money

ಅತೀ ಹೆಚ್ಚು ವೋಟ್ ಗಳಿಸಿದ ಆಧಾರದ ಮೇಲೆ ಪ್ರಥಮ್ ಅವರು ಅಗ್ರಸ್ಥಾನಕ್ಕೇರಿದರೆ, ಕೀರ್ತಿ ಅವರು ಭಾರಿ ಪೈಪೋಟಿ ನೀಡಿದ್ದರು. ಸಮಚಿತ್ತರಾಗಿ ಎಲ್ಲರ ಗಮನ ಸೆಳೆದ ರೇಖಾ ಅವರು ಮೂರನೇ ಸ್ಥಾನ ಪಡೆದರು.[ಬಿಗ್ ಬಾಸ್ ಕನ್ನಡ-4 ಗೆದ್ದ ಪ್ರಥಮ್]

ಪ್ರಥಮ್ ಅವರು ತಮ್ಮ ತಂದೆಯ ಆಶಯದಂತೆ ಪ್ರಥಮ್ ತಾವು ಗೆದ್ದ 50 ಲಕ್ಷ ರೂ ಹಣವನ್ನು , ಹಳ್ಳಿಗಳ ಉದ್ದಾರಕ್ಕೆ, ಸೈನಿಕರಿಗೆ ಮತ್ತು ರೈತರಿಗೆ ನೀಡುವುದಾಗಿ ಘೋಷಿದರು.

* 5 ಲಕ್ಷ ಟಿ.ನರಸಿಪುರ, ಕೊಳ್ಳೆಗಾಲ ಬಳಿ ಇರುವ ಬಡ ಹೆಣ್ಣುಮಕ್ಕಳ ಮದುವೆ ಸಹಾಯಕ್ಕೆ.
* 5 ಲಕ್ಷ ಮಹದೇಶ್ವರ ಬೆಟ್ಟದ ಬಳಿ ಇರುವ ಮನೆಗಳಿಗೆ ವಿದ್ಯುತ್ ವ್ಯವಸ್ಥೆ
*20 ಲಕ್ಷ ದೇಶ ಕಾಯೋ ಸೈನಿಕರಿಗೆ ಮೀಸಲು
* 20 ಲಕ್ಷ ಮೃತಪಟ್ಟ ರೈತರ ಕುಟುಂಬಗಳಿಗೆ

Pratham donates entire prize money

ಎಂದು ಪ್ರಥಮ್ ಹಾಗೂ ಅವರ ತಂದೆ ಮಲ್ಲಣ್ಣ ಅವರು ಬಿಗ್ ಬಾಸ್ ವೇದಿಕೆಯಲ್ಲಿ ಘೋಷಿಸುವ ಮೂಲಕ ಕನ್ನಡಿಗರ ಮನ ಗೆದ್ದರು. ಈ ನಡುವೆ ಕಿರಿಕ್ ಕೀರ್ತಿ ಅವರ ಆಟದ ವೈಖರಿ ಮೆಚ್ಚಿದ ನಟ, ನಿರೂಪಕ ಸುದೀಪ್ ಅವರು ತಮ್ಮ ಕಡೆಯಿಂದ 10 ಲಕ್ಷ ರು ಘೋಷಿಸಿದರು.

ಬಿಗ್ ಬಾಸ್ ನ ಹಿಂದಿ ಆವೃತ್ತಿಯ ಫಲಿತಾಂಶ ಕೂಡಾ ಹೊರ ಬಂದಿದ್ದು, 10ನೇ ಸೀಸನ್ ಗೆದ್ದ ಮನ್ವೀರ್ ಅವರು ಪ್ರಶಸ್ತಿ ಮೊತ್ತದ 20 ಲಕ್ಷ ರೂಗಳನ್ನು ಬೀಯಿಂಗ್ ಹ್ಯೂಮನ್ ಫೌಂಡೇಶನ್ ಗೆ ಅರ್ಪಿಸಿದ್ದಾರೆ.

English summary
Colors Kannada Channel's popular reality show Bigg Boss Kannada season winner Director Pratham donated his entire prize money to noble cause.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X