ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೈಋತ್ಯ ರೈಲ್ವೆ ಟೆಂಡರ್‌ ಹಗರಣ : ಸಿಬಿಐ ತನಿಖೆಯಿಂದ ಬಹಿರಂಗ

|
Google Oneindia Kannada News

ಬೆಂಗಳೂರು, ಜನವರಿ 21: ಕೇಂದ್ರೀಯ ತನಿಖಾ ದಳವು(ಸಿಬಿಐ) ನೈಋತ್ಯ ರೈಲ್ವೆ ಇಲಾಖೆ ಟೆಂಡರ್‌ನಲ್ಲಿ ನಡೆದ ಅಕ್ರಮವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದೆ.

ನೈಋತ್ಯ ರೈಲ್ವೆ ಇಲಾಖೆ ಅಧಿಕಾರಿಗಳು ಖಾಸಗಿ ಗುತ್ತಿಗೆದಾರರಿಗೆ ಗುತ್ತಿಗೆಯನ್ನು ನೀಡುತ್ತಿದ್ದು, ಕಾಮಗಾರಿಗಳು ಪೂರ್ಣಗೊಳ್ಳುವ ಮುನ್ನವೇ ಕಾಮಗಾರಿ ಮುಗಿದಿದೆ ಎಂದು ಸರ್ಟಿಫಿಕೇಟ್ ನೀಡುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ವಿಡಿಯೋ: ಚಲಿಸುತ್ತಿರುವ ರೈಲಿನಲ್ಲಿ ನಿಮ್ಮ ಬ್ಯಾಗ್ ಹೇಗೆ ಕದೀತಾರೆ ನೋಡಿವಿಡಿಯೋ: ಚಲಿಸುತ್ತಿರುವ ರೈಲಿನಲ್ಲಿ ನಿಮ್ಮ ಬ್ಯಾಗ್ ಹೇಗೆ ಕದೀತಾರೆ ನೋಡಿ

ಇದರಿಂದಾಗಿ ಆ ಗುತ್ತಿಗೆದಾರರಿಗೆ ಇನ್ನಷ್ಟು ಟೆಂಡರ್‌ಗಳು ದೊರೆಯುತ್ತಿದ್ದವು. ಸಿಬಿಐ ರೈಲ್ವೆ ಇಲಾಖೆಯ ನಾಲ್ಕು ಅಧಿಕಾರಿಗಳ ನಿವಾಸ ಹಾಗೂ ಖಾಸಗಿ ಗುತ್ತಿಗೆದಾರರ ಮನೆ ಮೇಲೆ ದಾಳಿ ನಡೆಸಿದೆ. 2011ರಿಂದ 2018ರವರೆಗೆ ಪಡೆದ ಗುತ್ತಿಗೆಯಲ್ಲಿ ಅಕ್ರಮಗಳು ನಡೆದಿರುವುದು ಖಚಿತವಾಗಿದೆ.

Big Tender Scam In South Western Railway

ಮೈಸೂರು-ರಾಮನಗರ ರೈಲ್ವೆ ಹಳಿ ನಿರ್ಮಾಣ, ಮೇಲ್ಸೇತುವೆ, ಕೆಳ ಸೇತುವೆ ಸೇರಿದಂತೆ ಅನೇಕ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವುದು ಬಹಿರಂಗಗೊಂಡಿದೆ. ಈ ಕುರಿತು ಸಿಬಿಐ ಎರಡು ಪ್ರಕರಣಗಳನ್ನು ದಾಖಲಿಸಿದೆ.

ಈ ಅಧಿಕಾರಿಗಳ ವಿರುದ್ಧ ನೈಋತ್ಯ ರೈಲ್ವೆ ಇಲಾಖೆಯು ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.ಕರ್ನಾಟಕ ರೈಲ್ವೆ ವೇದಿಕೆ ಸದಸ್ಯ ಕೆಎನ್ ಕೃಷ್ಣ ಪ್ರಸಾದ್ ಅವರು ಹೇಳುವ ಪ್ರಕಾರ' ಮೊದಲು ಕಡಿಮೆ ಮೊತ್ತದ ಟೆಂಡರ್ ಒಪ್ಪಿಕೊಳ್ಳುತ್ತಾರೆ. ಬಳಿಕ ಅವರು ಹೇಳಿದ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಿಸುವುದಿಲ್ಲ. ಹಾಗೆಯೇ ಅವರು ಒಪ್ಪಿಕೊಂಡಿದ್ದ ಟೆಂಡರ್‌ ಹಣಕ್ಕಿಂತ ಹೆಚ್ಚಾಗಿ ಹಣವನ್ನು ಪಾವತಿಸಲಾಗುತ್ತಿದೆ.

ಮೊದಲು ಖಾಸಗಿ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಬಳಿಕ ಕಾಮಗಾರಿ ಮುಗಿದಿದೆ ಎಂದು ಸರ್ಟಿಫಿಕೇಟ್ ನೀಡಿ, ಹೆಚ್ಚುವರಿ ಕೆಲಸಗಳನ್ನು ಟೆಂಡರ್ ಕರೆಯದೆ ಮುಂದುವರೆಸುತ್ತಾರೆ.

ಮೊದಲು 50 ಕೋಟಿಗೆ ಟೆಂಡರ್ ಪಡೆದಿದ್ದಾರೆ. ಬಳಿಕ ಕಾಮಗಾರಿಯನ್ನು ಎರಡು ಭಾಗಗಳಲ್ಲಿ ಮಾಡುವುದಾಗಿ ಕೇಳಿ ಪ್ರತಿ ಕಾಮಗಾರಿಗೂ 38 ಕೋಟಿಯನ್ನು ವ್ಯಯಿಸಿದ್ದಾರೆ.

English summary
CBI Reveals Tender Scam In South Western Railway, officials issue false certificates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X