ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವರಾತ್ರಿ ಜಾತ್ರೆ:ಮಾಚೋಹಳ್ಳಿಯಲ್ಲಿ ಬೃಹತ್ ಶಿವನ ಮೂರ್ತಿ ಲೋಕಾರ್ಪಣೆ

By ಬೆಂಗಳೂರು ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಫೆಬ್ರವರಿ 27: ಬೆಂಗಳೂರಿನ ಮಾಗಡಿ ರಸ್ತೆ ಮಾಚೋಹಳ್ಳಿ ಶ್ರೀ ಜೋಡಿ ವೀರಭದ್ರೇಶ್ವರ ರುದ್ರೇಶ್ವರ ಸ್ವಾಮಿ ಸನ್ನಿಧಾನದಲ್ಲಿ 51 ಅಡಿಯ ಬೃಹತ್ ಶಿವನ ಮೂರ್ತಿಯ ಲೋಕಾರ್ಪಣೆ, 10ನೇ ವರ್ಷದ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ ಮಾರ್ಚ್ 3 ಮತ್ತು 4ರಂದು ಎರಡು ದಿನಗಳ ಕಾಲ ನಡೆಯಲಿದೆ.

ಮಾರ್ಚ್ 3 ರಂದು ಈ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಮೈಯೆಲ್ಲ ಭಸ್ಮ, ಕೈಯಲ್ಲಿ ತ್ರಿಶೂಲ, ಜನ ಸಾಮಾನ್ಯರ ದೈವ ಶಿವನ ಸ್ಮರಣೆಮೈಯೆಲ್ಲ ಭಸ್ಮ, ಕೈಯಲ್ಲಿ ತ್ರಿಶೂಲ, ಜನ ಸಾಮಾನ್ಯರ ದೈವ ಶಿವನ ಸ್ಮರಣೆ

ಉದ್ಘಾಟನಾ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್ ಯಡಿಯೂರಪ್ಪನವರು ಹಾಗೂ ಅಧ್ಯಕ್ಷತೆಯನ್ನು ಯಲಹಂಕದ ಜನಪ್ರಿಯ ಶಾಸಕರಾದಎಸ್. ಆರ್. ವಿಶ್ವನಾಥ್ ವಹಿಸಲಿದ್ದಾರೆ.

Big shiva statue will inaugurate in Machohalli

ಮಾರ್ಚ್ 4 ರಂದು ಸೋಮವಾರ 10ನೇ ವರ್ಷದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಸ್ವಾಮಿ ಅವರಿಗೆ ನೂತನ ವಜ್ರಾಂಗಿ ಸಮರ್ಪಣಾ ಮಹೋತ್ಸವ ವಿಶೇಷ ರುದ್ರ ಹೋಮ ಜರುಗಲಿದೆ.

ಎರಡು ದಿನವೂ ಉತ್ಸವದಲ್ಲಿ ಅವಳಿ-ಜವಳಿ ಮಕ್ಕಳಿಗೆ ಸನ್ಮಾನ, ಅಂತಾರಾಷ್ಟ್ರೀಯ ಖ್ಯಾತಿಯ ಸವಿತಕನ ಹಳ್ಳಿ ಬ್ಯಾಂಡ್ ಕಾರ್ಯಕ್ರಮ, ವಿಶೇಷ ಜಾದೂ ಪ್ರದರ್ಶನ, ಮಲ್ಲಗಂಬಪ್ರದರ್ಶನ, ಸಂಗೀತ ಕಾರ್ಯಕ್ರಮ ಸೇರಿ ಹಲವಾರು ಸಾಂಸ್ಕೃತಿಕ ಮತ್ತು ಧಾರ್ಮಿಕ ಸಮಾರಂಭಗಳು ಜರುಗಲಿವೆ.

ಪ್ರತಿ ತಿಂಗಳ ಅಮಾವಾಸ್ಯೆಯಂದು ಶ್ರೀ ಸ್ವಾಮಿಯವರಿಗೆ ವಿಶೇಷ ಶತರುದ್ರಾಭಿಷೇಕ ಹಾಗೂ ಬಂದ ಭಕ್ತಾದಿಗಳಿಗೆ ಶಿವ ರುದ್ರಾಕ್ಷಿ ಅನ್ನದಾಸೋಹವನ್ನು ನಡೆಸಲಾಗುತ್ತದೆ. ಪ್ರತಿ ವರ್ಷಮಹಾಶಿವರಾತ್ರಿಯಂದು ಜಾತ್ರಾ ಮಹೋತ್ಸವ ಕಡೇ ಕಾರ್ತಿಕ ಸೋಮವಾರದಂದು ಲಕ್ಷ ದೀಪೋತ್ಸವ ಹಾಗೂ 5 ವರ್ಷಕ್ಕೊಮ್ಮೆ ಅಗ್ನಿಕೊಂಡ ಮಹೋತ್ಸವ ಕಾರ್ಯಕ್ರಮಗಳು ಜರುಗುತ್ತವೆ.

English summary
The 10th year Maha Shivaratri Jatra Mahotsava will be held on March 3 and 4 at Machohalli for two days.In this time big shiva statue will inaugurate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X