ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಊಟಕ್ಕೆ ಬಂದವರಿಗೆ ಕಾಟ ಕೊಡುವ ಮಾರ್ಷಲ್‌ಗಳು: ಇಂದಿರಾ ಕ್ಯಾಂಟೀನ್ ನಲ್ಲಿ ನಿತ್ಯದ ಗೋಳು!

|
Google Oneindia Kannada News

ಬೆಂಗಳೂರು, ಮೇ.7: ಓದುಗರೇ, ಒನ್ ಇಂಡಿಯಾ ಕನ್ನಡ ಟೀಮ್ ಇಂದಿರಾ ಕ್ಯಾಂಟೀನ್ ಬಗ್ಗೆ ರಿಯಾಲಿಟಿ ಚೆಕ್ ಮಾಡಿದೆ. ಜನಸಾಮಾನ್ಯರ ಹೊಟ್ಟೆ ತುಂಬಿಸುವ ಈ ಕ್ಯಾಂಟೀನ್‌ಗಳಲ್ಲಿ ಗೂಂಡಾಗಳಂತೆ ವರ್ತಿಸುವ ಮಾರ್ಷಲ್ ಗಳು, ಕ್ಯಾಂಟೀನ್‌ಗಳಲ್ಲಿ ಅವ್ಯವಸ್ಥೆ, ಲೆಕ್ಕದಲ್ಲಿ ಬರುವ ಊಟಗಳೆಷ್ಟು, ನಿತ್ಯ ಎಷ್ಟು ಜನ ಊಟ ಮಾಡುತ್ತಾರೆ ಎಂಬುದರ ಬಗ್ಗೆ ಗ್ರೌಂಡ್ ರಿಯಾಲಿಟಿ ವರದಿಯೊಂದನ್ನು ನಿಮ್ಮ ಮುಂದೆ ಇದೀಗ ಪ್ರಸ್ತುತಪಡಿಸುತ್ತಿದೆ.

ಬಡವರಿಗೆ ಹೊಟ್ಟೆ ತುಂಬಿಸುವ ಈ ಅನ್ನದಾಸೋಹ ಕೇಂದ್ರಕ್ಕೆ ಬರುವ ಬಹುತೇಕ ಜನರು ಕಟ್ಟಡ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಪೌರಕಾರ್ಮಿಕರು, ಆಟೋ ಡ್ರೈವರ್ ಗಳು. ಹೀಗೆ ಅನೇಕ ಜನರು ಕಡಿಮೆ ದರದಲ್ಲಿ ಊಟ ಸಿಗುತ್ತೆ ಅನ್ನೋ ಒಂದೇ ಕಾರಣಕ್ಕೆ ಬರುತ್ತಾರೆ. ಆದರೆ ಇಲ್ಲಿರುವ ಕೆಲ ಮಾರ್ಷಲ್‌ಗಳು ಜನರನ್ನ ಪ್ರಾಣಿಗಳಂತೆ ನೊಡುವ ದೃಶ್ಯಗಳ ನಮ್ಮ ಗ್ರೌಂಡ್ ರಿಯಾಲಿಟಿ ವರದಿ ವೇಲೆ ಕಂಡುಬಂತು. ನಗರದ ಹೃದಯಭಾಗ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಮೆಟ್ರೋ ನಿಲ್ದಾಣ ಪಕ್ಕದಲ್ಲಿರುವ ಗಾಂಧಿನಗರ ವಾರ್ಡ್ ನಂ.94 ಇಂದಿರಾ ಕ್ಯಾಂಟೀನ್ ನಲ್ಲಿ ಕೆಲಸ ಮಾಡುವ ರಾಜು ವಿ. ಮಾರ್ಷಲ್ ದರ್ಪ ನೋಡಿದ್ರೆ ಎಂತವರಿಗೂ ಕೋಪ ತರಿಸುತ್ತೆ.

ಮಾರ್ಷಲ್ ರಾಜು ವಿ. ಬಗ್ಗೆ ಜನಸಾಮಾನ್ಯರ ಆಕ್ರೋಶ!

ಮಾರ್ಷಲ್ ರಾಜು ವಿ. ಬಗ್ಗೆ ಜನಸಾಮಾನ್ಯರ ಆಕ್ರೋಶ!

ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ ಪಕ್ಕದಲ್ಲಿದ್ದ ಇಂದಿರಾ ಕ್ಯಾಂಟೀನ್‌ನಲ್ಲಿ ರಾಜು ವಿ. ಎಂಬ ಆಸಾಮಿ ಮೇಲೆ ಸಾರ್ವಜನಿಕರು ಮಾಡಿದಂತಹ ಆರೋಪಗಳು ಕೇಳಿ ಬಂದಿದ್ದು, ಸತ್ಯಾಸತ್ಯತೆ ತಿಳಿಯುವ ಸಲುವಾಗಿ ನಾವು ಅಲ್ಲಿಗೆ ಹೋಗಿದ್ದೆವು. ಈ ರಾಜು ನಮ್ಮ ಕಣ್ಣೆದುರೇ ಇಬ್ಬರು ವ್ಯಕ್ತಿಗಳನ್ನು ತರಾಟೆ ತೆಗೆದುಕೊಂಡಿದ್ದ, ಕುತೂಹಲದಿಂದ ಅವರನ್ನು ವಿಚಾರಿಸದಾಗ 'ಸಾಬ್.. ಯಾವಾಗ ಬಂದ್ರೂ ಹಿಂಗೆ ಕೋಪ ಮಾಡ್ತಾನೆ. ಊಟಕ್ಕೆ ಟೋಕನ್ ತೆಗೆದುಕೊಳ್ಳುವುದಕ್ಕೆ ಸಾಲಿನಲ್ಲಿ ಬರುವವರನ್ನು ಏಕವಚನದಲ್ಲೇ ಮಾತಾಡಿಸ್ತಾನೆ. ನಾವು ಒಂದು ಮೊಸರು ಪ್ಯಾಕೇಟ್ ತಂದು ಇಲ್ಲಿ ಊಟ ಮಾಡಲು ಬಿಡ್ತಿಲ್ಲ," ಎಂದು ಅಲ್ಲಿ ಮಧ್ಯಾಹ್ನ ಊಟಕ್ಕೆ ಬಂದಿದ್ದ ಜನ ಹೇಳಿದರು.

ಊಟ ಮಾಡುತ್ತಿದ್ದವರ ಮೇಲೆ ಎರಗಿಬಿದ್ದಿದ್ದ ಮಾರ್ಷಲ್!

ಊಟ ಮಾಡುತ್ತಿದ್ದವರ ಮೇಲೆ ಎರಗಿಬಿದ್ದಿದ್ದ ಮಾರ್ಷಲ್!

ಅಂದಹಾಗೆ ಹೊರಗಿನಿಂದ ಊಟ ತಂದು ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡಬಾರದು ಸತ್ಯ. ಆದರೇ.. ಒಂದು ಮೊಸರು ಪ್ಯಾಕೇಟ್ ತಂದು ಇಂದಿರಾ ಕ್ಯಾಂಟೀನ್‌ನ ಊಟದ ಜೊತೆ ತಿನ್ನಬಾರದು ಎಂದು ಅದ್ಯಾವ ಅಧಿಕಾರಿ ಆದೇಶ ಮಾಡಿದ್ದಾನೋ ಗೊತ್ತಿಲ್ಲ. ಮಾರ್ಷಲ್‌ನ ಈ ವರ್ತನೆ ಕಂಡು ಅಲ್ಲಿ ಪ್ರತಿನಿತ್ಯ ಬರುವವರಿಗೆ ಕೋಪ ತರಿಸಿದೆ. ಕಾವೇರಿಪುರ, ವಸಂತನಗರ, ಮಲ್ಲೇಶ್ವರ ಹೀಗೆ ಅನೇಕ ಭಾಗಗಳಲ್ಲಿ ಭೆಟಿ ಮಾಡಿದಾಗ ಮಾರ್ಷಲ್‌ಗಳ ಮಾತಿನ ದಾಟಿ ಬಹುತೇಕ ಹೀಗೆಯೇ ಇತ್ತು.

ಜನಾಭಿಪ್ರಾಯ ಸಂಗ್ರಹ ವೇಳೆ ಗೇಟ್ ಲಾಕ್ ಮಾಡಿ ದರ್ಪ!

ಜನಾಭಿಪ್ರಾಯ ಸಂಗ್ರಹ ವೇಳೆ ಗೇಟ್ ಲಾಕ್ ಮಾಡಿ ದರ್ಪ!

ಇನ್ನೂ ವಸಂತನಗರದಲ್ಲಿರುವ ವಾರ್ಡ್ ನಂ.93 ಇಂದಿರಾ ಕ್ಯಾಂಟೀನ್ ಬಗ್ಗೆ ಒನ್‌ಇಂಡಿಯಾ ಕನ್ನಡ ಟೀಮ್ ಜನಾಭಿಪ್ರಾಯ ಸಂಗ್ರಹಣೆ ಮುಂದಾದಾಗ ಅಲ್ಲೂ ಮಾರ್ಷಲ್‌ಗಳು ರೌಡಿಗಳಂತೆ ವರ್ತಿಸಿದ್ದು ಕಂಡುಬಂತು. ಸಾಮಾಜಿಕ ಕಳಕಳಿಯಿಂದ ಜನರ ಸಮಸ್ಯೆಗಳ ಬಗ್ಗೆ, ಇಂದಿರಾ ಕ್ಯಾಂಟೀನ್‌ಗಳ ಬಗ್ಗೆ ವರದಿ ಮಾಡಲು ತೆರಳಿದಾಗ ನಮ್ಮನ್ನೂ ಕೂಡಿಹಾಕಿ ಗೇಟ್ ಮುಚ್ಚಿದ ಪ್ರಸಂಗ ನಡೆಯಿತು. ಬಡ ಜನರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮಾರ್ಷಲ್‌ಗಳ ದರ್ಪ ಹೆಚ್ಚಾಗಿದೆ ಎಂಬುದು ನಮ್ಮ ವರದಿ ಮೇಲೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ಮಾಡಲಾಯಿತು.

ಜನ ತಿನ್ನೋ ಅನ್ನದಲ್ಲಿ ಸರ್ಕಾರಕ್ಕೆ ಸುಳ್ಳು ಲೆಕ್ಕ ಹೋಗ್ತಿದ್ಯಾ?

ಜನ ತಿನ್ನೋ ಅನ್ನದಲ್ಲಿ ಸರ್ಕಾರಕ್ಕೆ ಸುಳ್ಳು ಲೆಕ್ಕ ಹೋಗ್ತಿದ್ಯಾ?

ಇದರ ಮದ್ಯೆಯೇ ಇನ್ನೊಂದು ವಿಚಾರ ಬಗ್ಗೆ ಸತ್ಯ ಹುಡಕುವ ಪ್ರಯತ್ನಕ್ಕೆ ಮುಂದಾಯಿತು. 400- 500 ಜನರಿಗೆ ಊಟ ತರುವ ಕೆಲ ಕ್ಯಾಂಟೀನ್‌ಗಳಲ್ಲಿ ಒಂದೆರಡು ಗಂಟೆಯಲ್ಲೇ ಊಟ ಖಾಲಿ ಅನ್ನುವ ಬಗ್ಗೆ ವಿವರ ಸಿಕ್ಕಿತು. ಅದ್ದೇಗೆ ಎರಡು ಗಂಟೆರಯಲ್ಲಿ ಊಟ ಖಾಲಿಯಾಗುತ್ತೆ..? ನಿಜವಾಗಿ ತರುವ ಊಟಗಳ ಲೆಕ್ಕ ಎಷ್ಟು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡ್ತೀವಿ ಇನ್ನೊಂದು ಶೀರ್ಷಿಕೆಯಲ್ಲಿ.. ನಿರೀಕ್ಷಿಸಿ.

Recommended Video

Rajat Patidar ಯಾರು?RCB ಸೇರೋದಕ್ಕೆ ಏನೆಲ್ಲಾ ಕಷ್ಟ ಪಟ್ಟಿದ್ದಾರೆ ಗೊತ್ತಾ? | #cricket | Oneindia Kannada

English summary
Oneindia Kannada Exposed Indira Canteens Real Situation. We asked people opinion on Indira Canteens cleaness, food quality, staffs behaviour and etc. Read more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X