• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಐಇಸಿ ಕೋವಿಡ್ ಕೇರ್ ಸೆಂಟರ್‌ ರೋಗಿಗಳ ಆರೈಕೆಗೆ ಸಿದ್ಧ

|

ಬೆಂಗಳೂರು, ಜುಲೈ 27 : ಬೆಂಗಳೂರು ನಗರದಲ್ಲಿ ಕೋವಿಡ್ 19 ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಹಾಸಿಗೆಗಳ ಕೊರತೆಯೂ ಕಾಡುತ್ತಿದೆ. ನಗರದಲ್ಲಿ ನಿರ್ಮಿಸಿರುವ ನೂತನ ಕೋವಿಡ್ ಕೇರ್ ಸೆಂಟರ್ ರೋಗಿಗಳ ಆರೈಕೆಗೆ ಸಿದ್ಧವಾಗಿದೆ.

   ಎಲ್ಲಾ ಓಕೆ.. 'Vivo' IPL ಯಾಕೆ | Oneindia Kannada

   ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಬಿಐಇಸಿ)ಯಲ್ಲಿ 10, 100 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಲಾಗುತ್ತಿದೆ. ಇವುಗಳಲ್ಲಿ 5000 ಹಾಸಿಗೆಗಳು ರೋಗಿಗಳ ಆರೈಕೆ ಸಿದ್ಧವಾಗಿವೆ ಎಂದು ಬಿಬಿಎಂಪಿ ಆಯುಕ್ತರು ಹೇಳಿದ್ದಾರೆ.

   ಚಿತ್ರ: ದೇಶದಲ್ಲೇ ದೊಡ್ಡದಾದ ಬೆಂಗಳೂರಿನ ಕೋವಿಡ್ ಆರೈಕೆ ಕೇಂದ್ರ

   ಸೋಮವಾರ ಕೋವಿಡ್ ಆರೈಕೆ ಕೇಂದ್ರಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್. ಅಶೋಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್. ಆರ್. ವಿಶ್ವನಾಥ್, ಬಿಬಿಎಂಪಿ ಮೇಯರ್, ಆಯುಕ್ತರು ಭೇಟಿ ನೀಡಿದರು.

   ಚಿತ್ರಗಳು; ಕೋರಮಂಗಲದ ಕೋವಿಡ್ ಆರೈಕೆ ಕೇಂದ್ರ

   ಕೋವಿಡ್ ಕೇರ್ ಸೆಂಟರ್‌ನಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾರ್ಷಲ್, ಕೆ. ಎಸ್. ಆರ್. ಪಿ ಪ್ಲಟೂನ್ ಸಿಬ್ಬಂದಿ, ಅಗ್ನಿ ಶಾಮಕ ವಾಹನಗಳನ್ನು ಸಿದ್ಧವಾಗಿ ಇರಿಸಲಾಗಿದೆ. ಕೇಂದ್ರದಲ್ಲಿ ವಿದ್ಯುತ್ ಸಮಸ್ಯೆ ಆಗದಂತೆ ಎಚ್ಚರವಹಿಸಲು ಪ್ರತ್ಯೇಕ ಲೈನ್ ವ್ಯವಸ್ಥೆ ಮಾಡಲಾಗಿದೆ.

   ಮನೆಯೇ ಕೋವಿಡ್ ಆರೈಕೆ ಕೇಂದ್ರ; ವ್ಯವಸ್ಥೆ ಹೀಗಿರಲಿ

   ಕೋವಿಡ್ ಕೇರ್ ಸೆಂಟರ್ ಪ್ರಮುಖ ಅಂಶಗಳು

   ಕೋವಿಡ್ ಕೇರ್ ಸೆಂಟರ್ ಪ್ರಮುಖ ಅಂಶಗಳು

   ಕೋವಿಡ್ ಆರೈಕೆ ಕೇಂದ್ರದಲ್ಲಿ ಒಟ್ಟು 5,000 ಹಾಸಿಗೆಗಳು ಆರೈಕೆಗೆ ಸಿದ್ಧವಾಗಿದೆ. ಜೊತೆಗೆ 1,500 ಹಾಸಿಗೆಗಳನ್ನು ಪ್ರತ್ಯೇಕವಾಗಿ ವೈದ್ಯರು ಮತ್ತು ಇತರೆ ಸಿಬ್ಬಂದಿಗೆ ಹಾಲ್ ಸಂಖ್ಯೆ 1ರಲ್ಲಿ ಮೀಸಲಿರಿಸಲಾಗಿದೆ. ಹಾಲ್ ಸಂಖ್ಯೆ 5 ರಲ್ಲಿ 1,536 ಹಾಸಿಗಳನ್ನು ಸೋಂಕಿತರ ಆರೈಕೆಗೆ ಸೋಮವಾರ ಮುಕ್ತಗೊಳಿಲಾಗಿದೆ.

   24 ವಾರ್ಡ್‌ ನಿರ್ಮಾಣ

   24 ವಾರ್ಡ್‌ ನಿರ್ಮಾಣ

   ಬಿಐಇಸಿಯ ಹಾಲ್ ಸಂಖ್ಯೆ 5ರಲ್ಲಿ 24 ವಾರ್ಡ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಊಟದ ಕೊಠಡಿಯಲ್ಲಿ ಒಂದು ಬಾರಿಗೆ 350 ಮಂದಿ ಆಹಾರ ಸೇವಿಸಬಹುದಾಗಿದೆ. ಮನರಂಜನಾ ಕೊಠಡಿಯಲ್ಲಿ ಟಿವಿ, ಕೂರಲು ಆಸನದ ವ್ಯವಸ್ಥೆ, ಸೋಫಾ, ಚೇರ್ ಹಾಗೂ ಫ್ಯಾನ್ ವ್ಯವಸ್ಥೆ ಕಲ್ಪಿಸಲಾಗಿದೆ.

   ನಿಯಂತ್ರಣ ಕೊಠಡಿ ಸ್ಥಾಪನೆ

   ನಿಯಂತ್ರಣ ಕೊಠಡಿ ಸ್ಥಾಪನೆ

   ಕೋವಿಡ್ ಕೇರ್ ಸೆಂಟರ್‌ನಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ನಾನ ಮಾಡಲು, ಮೂತ್ರ ವಿಸರ್ಜನೆ, ಕೈ ತೊಳೆಯಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಕೇಂದ್ರದಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ನಿಯಂತ್ರಣ ಕೊಠಡಿ ಸ್ಥಾಪಿಸಲಾಗುತ್ತಿದೆ.

    ಪ್ರತ್ಯೇಕ ಸಿಬ್ಬಂದಿ ವ್ಯವಸ್ಥೆ

   ಪ್ರತ್ಯೇಕ ಸಿಬ್ಬಂದಿ ವ್ಯವಸ್ಥೆ

   ಕೋವಿಡ್ ಆರೈಕೆ ಕೇಂದ್ರವನ್ನು ನಿರ್ವಹಣೆ ಮಾಡಲು ಪ್ರತ್ಯೇಕ ಸಿಬ್ಬಂದಿ ವ್ಯವಸ್ಥೆ ಮಾಡಲಾಗಿದೆ. ಹೌಸ್ ಕೀಪಿಂಗ್, ಲ್ಯಾಂಡ್ರಿ ವ್ಯವಸ್ಥೆಗೂ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಸುರಕ್ಷತಾ ಕ್ರಮವಾಗಿ ಮಾರ್ಷಲ್, ಕೆ. ಎಸ್. ಆರ್. ಪಿ ಪ್ಲಟೂನ್ ಸಿಬ್ಬಂದಿ, ಅಗ್ನಿ ಶಾಮಕ ವಾಹನಗಳನ್ನು ಇರಿಸಲಾಗಿದೆ. ಸರ್ಕಾರದ ಸುತ್ತೋಲೆ ಆಹಾರದ ಮೆನುವಿನ ಪ್ರಕಾರ ಕಾಲಕಾಲಕ್ಕೆ ಆಹಾರ ಒದಗಿಸಲಾಗುತ್ತದೆ.

   English summary
   Bangalore International Exhibition Centre (BIEC) COVID care centre 5000 bed ready for patients. COVID care centre has total 10,100 beds.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X