• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

9999 ಫ್ಯಾನ್ಸಿ ನೋಂದಣಿ ಸಂಖ್ಯೆ ಬೀದರ್ ಶಾಸಕರ ಪಾಲು

By Mahesh
|

ಬೆಂಗಳೂರು, ಜುಲೈ 29: ವಾಹನಗಳಿಗೆ ಫ್ಯಾನ್ಸಿ ನಂಬರ್, ಲಕ್ಕಿ ನಂಬರ್ ಪಡೆದುಕೊಳ್ಳಲು ಸುಲಭ ವಿಧಾನವನ್ನು ಪ್ರಾದೇಶಿಕ ಸಾರಿಗೆ ಕಚೇರಿ(ಆರ್ ಟಿಒ) ನೀಡಿದ ಮೇಲೆ ಫ್ಯಾನ್ಸಿ ನಂಬರ್ ಕ್ರೇಜ್ ಇನ್ನಷ್ಟು ಹೆಚ್ಚಿದೆ. ಏಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ನಡೆದ ಫ್ಯಾನ್ಸಿ ಸಂಖ್ಯೆ ಹರಾಜಿನಲ್ಲಿ ಮತ್ತೊಮ್ಮೆ '9999' ಸಂಖ್ಯೆ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ.

ಕಳೆದ ಬಾರಿ ಇಂದಿರಾನಗರ ಆರ್ ಟಿಒನಲ್ಲಿ ನಡೆದ ಬಿಡ್ಡಿಂಗ್ ನಲ್ಲೇ '9999' ಸಂಖ್ಯೆಯನ್ನು ನಂ.1 ಫ್ಯಾನ್ಸಿ ನಂಬರ್, ಅತಿ ಹೆಚ್ಚು ಬೇಡಿಕೆಯ ನಂಬರ್ ಎಂದು ಘೋಷಿಸಲಾಗಿತ್ತು. [ರಿಚ್ಮಂಡ್ ರಸ್ತೆ ಆರ್ ಟಿಒ ಜತೆ 'ರಿಚ್' ಯುವತಿ ರಚ್ಚೆ]

ಬುಧವಾರ(ಜುಲೈ 29) ಎಲೆಕ್ಟ್ರಾನಿಕ್ಸ್ ಸಿಟಿ ಆರ್ ಟಿಒ ಕಚೇರಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಕೆಎ 51 ಸರಣಿಯ ಜೊತೆಗೆ ಫ್ಯಾನ್ಸಿ ನಂಬರ್ ಗಳ ಹರಾಜು ಪ್ರಕ್ರಿಯೆ ಆರಂಭಗೊಂಡಿತು. [50 ಸಾವಿರದ ಸ್ಕೂಟರ್ ಫ್ಯಾನ್ಸಿ ನಂಬರ್ ಗೆ 8 ಲಕ್ಷ ರು!]

ಈ ಬಾರಿ ಬೀದರ್ ನ ಬಿಜೆಪಿ ಶಾಸಕ ಗುರುಪಾದಪ್ಪ ನಾಗಮಾರಪಲ್ಲಿ ಅವರ ಪರ ಅವರ ಆಪ್ತ ಕಾರ್ಯದರ್ಶಿಗಳೊಬ್ಬರು ಬಿಡ್ಡಿಂಗ್ ನಡೆಸಿ 9999 ಸಂಖ್ಯೆಯನ್ನು 3.35 ಲಕ್ಷ ರು ಗೆ ಕೊಂಡು ಕೊಂಡರು.

ಒಟ್ಟಾರೆ ಬಿಡ್ಡಿಂಗ್ ನಂತರ ಸರ್ಕಾರಕ್ಕೆ 8.20 ಲಕ್ಷ ರು ಆದಾಯ ಸಿಕ್ಕಿದೆ. ಈ ಆರ್ ಟಿಒನಲ್ಲಿ 12 ಫ್ಯಾನ್ಸಿ ನಂಬರ್ ಮಾತ್ರ ಬಿಡ್ಡಿಂಗ್ ಗೆ ಲಭ್ಯವಿತ್ತು. ಈ ಪೈಕಿ ‘0999', ‘0045', ‘0099', ‘0007', ‘5555, ‘0666' ಮುಂತಾದ ಸಂಖ್ಯೆಗಳು 1,000 ರು ಪ್ಲಸ್ ಬಿಡ್ಡಿಂಗ್ ಕನಿಷ್ಠ ಮೊತ್ತ 75,000 ರು ಮೊತ್ತಕ್ಕೆ ಹರಾಜಾಗಿದೆ ಎಂದು ಆರ್ ಟಿಒ ಅಧಿಕಾರಿಗಳು ತಿಳಿಸಿದ್ದಾರೆ. [ಹೊಗೆ ಪ್ರಮಾಣಪತ್ರವಿರದಿದ್ದರೆ ಇಂಧನ ಸಿಗಲ್ಲ]

ಕಳೆದ ಬಿಡ್ಡಿಂಗ್ ನಲ್ಲಿ ಸುಮಾರು 22 ಜನ ಬಿಡ್ಡರ್ ಗಳು 50 ಕ್ಕೂ ಅಧಿಕ ನಂಬರ್ ಗಳಿಗೆ ಬಿಡ್ ಮಾಡಿದ್ದರು. ಬಿಡ್ಡಿಂಗ್ ಕೊನೆಗೆ 1.30 ಲಕ್ಷರು ಪ್ಲಸ್ 75,000 ರು (ಕನಿಷ್ಠ ಬಿಡ್ ಮೊತ್ತ) ನೀಡಿ ನಟರಾಜ್ ನಗರಹಳ್ಳಿ ಎಂಬ ಉದ್ಯಮಿ '9999' ಸಂಖ್ಯೆ ಪಡೆದುಕೊಂಡು ಐಷಾರಾಮಿ ಎಸ್ ಯುವಿ ವಾಹನಕ್ಕೆ KA 03 9999 ಎಂದು ನಂಬರ್ ಪ್ಲೇಟ್ ಹಾಕಿಕೊಂಡು ಖುಷಿಯಿಂದ ಹೊರನಡೆದಿದ್ದರು. ಕಳೆದ ಹರಾಜಿನ ನಂತರ ಸರ್ಕಾರಕ್ಕೆ ಸುಮಾರು 10.05 ಲಕ್ಷ ರು ಆದಾಯ ಬಂದಿತ್ತು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The winner, of bidding held for fancy vehicle number Bidar MLA Gurupadappa Nagarapalli eventually pledged Rs. 3.35 lakh – in addition to the Rs. 75,000 placed as a minimum bid amount, and walked away on Wednesday with a vehicle registration plate saying ‘9999’. at Electronics City RTO, Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more