ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟೆಂಡರ್ ಶ್ಯೂರ್ ರಸ್ತೆಗಳಲ್ಲಿ ಸೈಕಲ್‌ಗೆ ವಿಶೇಷ ಪಥ

|
Google Oneindia Kannada News

ಬೆಂಗಳೂರು, ಏಪ್ರಿಲ್ 26: ಟೆಂಡರ್ ಶ್ಯೂರ್ ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿ ಇನ್ನುಮುಂದೆ ಜನರಷ್ಟೇ ಅಲ್ಲ ಸೈಕಲ್ ಗಳು ಸಂಚರಿಸಲಿವೆ. ಬೈಸಿಕಲ್ ಶೇರಿಂಗ್ ವ್ಯವಸ್ಥೆ ಅಡಿಯಲ್ಲಿ ನಗರದಲ್ಲಿ ಜಾರಿಗೊಳಿಸಲಾಗುತ್ತಿರುವ ಬಾಡಿಗೆ ಸೈಕಲ್ ಯೋಜನೆಗಾಗಿ 6 ಟೆಂಡರ್ ಶ್ಯೂರ್ ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿ ಸೈಕಲ್ ಪಥ ನಿರ್ಮಿಸಲಾಗುತ್ತಿದೆ.

ಪರಿಸರ ಸಂರಕ್ಷಣೆ ಮತ್ತು ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಮೈಸೂರಿನಲ್ಲಿ ಟ್ರಿಣ್ ಟ್ರಿಣ್ ಸೈಕಲ್ ಯೋಜನೆ ಜಾರಿಗೊಳಿಸಲಾಗಿದೆ. ಅದೇ ಮಾದರಿಯಲ್ಲಿ ನಗರ ಭೂಸಾರಿಗೆ ನಿರ್ದೇಶನಾಲಯ ಬೆಂಗಳೂರಿನಲ್ಲಿ ಯೋಜನೆ ಜಾರಿಗೊಳಿಸುತ್ತಿದೆ. ಅದಕ್ಕಾಗಿ 125 ಕಿ.ಮೀ ಉದ್ದ ಸೈಕಲ್ ಪಥ ನಿರ್ಮಿಸಬೇಕಿದೆ.

ಬೆಂಗಳೂರಿನಲ್ಲೂ ಬಾಡಿಗೆ ಸೈಕಲ್ ಪ್ರತಿ ಗಂಟೆಗೆ 5 ರೂ.ಬೆಂಗಳೂರಿನಲ್ಲೂ ಬಾಡಿಗೆ ಸೈಕಲ್ ಪ್ರತಿ ಗಂಟೆಗೆ 5 ರೂ.

ಈಗ 6 ಟೆಂಡರ್ ಶ್ಯೂರ್ ರಸ್ತೆಗಳ ಪಾದಚಾರಿ ಮಾರ್ಗದಲ್ಲೂ ಒಟ್ಟು 11 ಕಿಮೀ ಉದ್ದದ ಸೈಕಲ್ ಪಥ ನಿರ್ಮಿಸಲಾಗುತ್ತಿದೆ. ರೆಸಿಡೆನ್ಸಿ ರಸ್ತೆ, ರಿಚ್ ಮಂಡ್ ರಸ್ತೆ, ಮ್ಯೂಸಿಯಂ ರಸ್ತೆ, ಕನ್ನಿಂಗ್ ಹ್ಯಾಮ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಕಮಿಷನರೇಟ್ ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿ ಜನರ ಓಡಾಟಕ್ಕೆ ಜಾಗವನ್ನು ಬಿಟ್ಟು, ಉಳಿದ ಭಾಗದಲ್ಲಿ ಸೈಕಲ್ ಪಥ ನಿರ್ಮಿಸಲಾಗುತ್ತದೆ.

Bicycle path in six tender sure roads in Bengaluru

ಯಾವೆಲ್ಲ ಮಾರ್ಗಗಳಲ್ಲಿ ಸೈಕಲ್ ಪಥ: ಬಿಬಿಎಂಪಿ ಗುರುತಿಸಿರುವಂತೆ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಬೈಯಪ್ಪನಹಳ್ಳಿ, ಸ್ವಾಮಿ ವಿವೇಕಾನಂದ ರಸ್ತೆ, ಇಂದಿರಾಗಾಂಧಿ, ಹಲಸೂರು, ಮಾಗಡಿ ರಸ್ತೆ, ಹೊಸಹಳ್ಳಿ, ವಿಜಯನಗರ, ದೀಪಾಂಜಲಿನಗರ, ಮೈಸೂರು ರಸ್ತೆ ಹಾಗೂ ಹಸಿರು ಮಾರ್ಗದಲ್ಲಿ ಪೀಣ್ಯ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ರಾಜಾಜಿನಗರ, ಜಯನಗರ, ಅರ್ ವಿ ರಸ್ತೆ, ಬನಶಂಕರಿ ಮತ್ತು ಜೆಪಿನಗರ ನಿಲ್ದಾಣಗಳಿಗೆ ಸಂಪರ್ಕಿಸುವಂತೆ ಪಥ ನಿರ್ಮಿಸಲಾಗುತ್ತದೆ.

English summary
To curb the traffic jam in Bengaluru and promote the bicycle riding in the city under Trin Trin project BBMP has decided to include bicycle path in tender sure model road work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X