• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ಏರ್‌ಪೋರ್ಟ್‌ ಮೆಟ್ರೊ: ಮಾರ್ಗ ವಿನ್ಯಾಸಕ್ಕೆ ಬಿಐಎಎಲ್ ಆಹ್ವಾನ

|

ಬೆಂಗಳೂರು, ನವೆಂಬರ್ 27:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ಮಾರ್ಗ ಸ್ಥಾಪನೆಯಾಗುತ್ತಿದ್ದು, ಮಾರ್ಗ ವಿನ್ಯಾಸಕ್ಕೆ ಬಿಐಎಎಸ್ ಆಹ್ವಾನಿಸಿದೆ.

ಎರಡು ನಿಲ್ದಾಣಗಳಿಗೆ ನವೆಂಬರ್ 18 ರಂದು ಹೊರಡಿಸಲಾದ ಪ್ರಸ್ತಾವನೆ ಕೋರಿಕೆಗೆ ಸಂಬಂಧಿಸಿದಂತೆ ನವೆಂಬರ್ 24 ರಂದು ಸಭೆ ನಡೆದಿದೆ. ಈ ಹಿಂದೆ ಹೇಳಿಗೆ ನೀಡಿದ್ದ ಬಿಎಂಆರ್ಸಿಎಲ್, ವಿಮಾನ ನಿಲ್ದಾಣ ಮೆಟ್ರೋ ವಿಭಾಗವನ್ನು ಇತರ ಸೌಲಭ್ಯಗಳೊಂದಿಗೆ ನಿರ್ಮಿಸಲಾಗುತ್ತದೆ.

ಡಿಸೆಂಬರ್‌ನಲ್ಲಿ ಯಲಚೇನಹಳ್ಳಿ ಅಂಜನಾಪುರ ನಡುವೆ ನಮ್ಮ ಮೆಟ್ರೋ ಸಂಚಾರ

ನಾಗರಿಕ ಕಾರ್ಯಗಳು ಮಾರ್ಚ್ 2021ರ ವೇಳೆಗೆ ಆರಂಭಗೊಳ್ಳಲಿದೆ. ಎರಡು ಮೆಟ್ರೋ ನಿಲ್ದಾಣಗಳ ಅಭಿವೃದ್ಧಿ ಹಾಗೂ ನಿರ್ವಹಣೆಯನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ನೋಡಿಕೊಳ್ಳಲಿದೆ ಎಂದು ತಿಳಿಸಿತ್ತು.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಹಾದುಹೋಗುವ 2ನೇ ಹಂತದ ಮೆಟ್ರೋ ನಿಲ್ದಾಣಗಳಿಗೆ ಮಾರ್ಗ ವಿನ್ಯಾಸಗೊಳಿಸಲು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ಆಹ್ವಾನ ನೀಡಿದೆ.

ಮೆಟ್ರೋ ನಿಲ್ದಾಣ ಮಾರ್ಗ ವಿನ್ಯಾಸಕ್ಕೆ ಸಲಹೆಗಳನ್ನು ನೀಡಲು ಡಿಸೆಂಬರ್ 14ರವರೆಗೂ ಗಡುವು ನೀಡಲಾಗಿದೆ. ಕೆ.ಆರ್.ಪುರಂ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು 37 ಕಿಮೀ ಮಾರ್ಗದಲ್ಲಿ ಮೆಟ್ರೋ ಮಾರ್ಗವನ್ನು ನಿರ್ಮಿಸಲು ಚಿಂತನೆ ನಡೆದಿದ್ದು, ಕೇಂದ್ರ ಸರ್ಕಾರದ ಇದಕ್ಕೆ ಅನುಮತಿ ನೀಡಬೇಕಿದೆ.

ಯಲಚೇನಹಳ್ಳಿ ಹಾಗೂ ಅಂಜನಾಪುರ ನಡುವೆ ನಮ್ಮ ಮೆಟ್ರೋ ಸಂಚಾರಕ್ಕೂ ಅಂತೂ ಕಾಲ ಕೂಡಿ ಬಂದಿದೆ. ಡಿಸೆಂಬರ್‌ನಲ್ಲಿ ಈ ಎರಡು ನಿಲ್ದಾಣಗಳ ನಡುವೆ ಮೆಟ್ರೋ ಸಂಚರಿಸಲಿದೆ.

ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಸೋಮವಾರ ಬಿಎಂಆರ್ ಸಿಎಲ್ ಗೆ ಈ ಮಾರ್ಗದಲ್ಲಿ ವಾಣಿಜ್ಯ ರೈಲು ಕಾರ್ಯಾಚರಣೆ ಪ್ರಾರಂಭಿಸಲು ಅಧಿಕಾರ ನೀಡಿದ್ದಾರೆ. ಹೀಗಾಗಿ ಹಸಿರು ಮಾರ್ಗದ ಈ ದಕ್ಷಿಣ ವಿಸ್ತರಣೆಯ ಮೆಟ್ರೋ ರೈಲು ಸಂಚಾರ ಹದಿನೈದು ದಿನಗಳಲ್ಲಿ ಆರಂಭಿಸುವ ಸಾಧ್ಯತೆಯಿದೆ.

   ನಾನು ಶ್ವೇತಭವನ ಬಿಟ್ಟುಕೊಡಬೇಕಾ!! ಸಾಧ್ಯಾನೇ ಇಲ್ಲಾ | Trump | Oneindia Kannada

   ಈ ಮಾರ್ಗದಲ್ಲಿ ನವೆಂಬರ್ 1 ರಂದು ರೈಲು ಸಂಚಾರ ಆರಂಭಿಸಲು ತೀರ್ಮಾನಿಸಲಾಗಿತ್ತು. ಬಿಎಂಆರ್‌ಸಿಎಲ್ ಕೂಡ ನವೆಂಬರ್ 1ರ ಗಡುವು ನೀಡಿತ್ತು.

   English summary
   Bangalore International Airport Limited (BIAL) has invited proposals for submitting Design Consultancy Services for two of the Metro stations in Phase-II that would pass through the airport’s boundary.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X