ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಯ್ ಮಲ್ಯ ವಿರುದ್ಧ ಎಫ್ ಐಆರ್ ದಾಖಲು

By Mahesh
|
Google Oneindia Kannada News

ಬೆಂಗಳೂರು, ಅ.25: ಕಿಂಗ್ ಫಿಶರ್ ವಿಮಾನಯಾನ ಸಂಸ್ಥೆ ಹಾಗೂ ಯುಬಿ ಸಮೂಹದ ಒಡೆಯ ವಿಜಯ್ ಮಲ್ಯ ಅವರ ವಿರುದ್ಧ ವಂಚನೆ ಪ್ರಕರಣ ದಾಖಲಾದ ಬೆನ್ನಲ್ಲೇ ಶುಕ್ರವಾರ ಎಫ್ ಐಆರ್ ದಾಖಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ಸಂಸ್ಥೆ(BIAL) ಇತ್ತೀಚೆಗೆ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಪ್ರಕರಣ ದಾಖಲಿಸಿತ್ತು.

ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ಸಂಸ್ಥೆ ಬಳಕೆದಾರರ ಅಭಿವೃದ್ಧಿ ಹಾಗೂ ಪ್ರಯಾಣಿಕರ ಸೇವಾ ಶುಲ್ಕಗಳನ್ನು ಪಾವತಿಸದೆ ವಂಚನೆ ಮಾಡಿದೆ ಎಂದು ಬಿಐಎಎಲ್ ಆರೋಪಿಸಿತ್ತು. ನಾವು ಅ.21ರಂದೇ ಈ ಕುರಿತು ವಿಜಯ್ ಮಲ್ಯ ಮೇಲೆ ಕೇಸು ದಾಖಲಿಸಿದ್ದೇವೆ ಎಂದಿ ಬಿಐಎಎಲ್ ವಕ್ತಾರರು ಗುರುವಾರ(ಅ.24) ಹೇಳಿದ್ದರು.

2008-12 ರ ಅವಧಿಯಲ್ಲಿ ಕಿಂಗ್ ಫಿಷರ್ ಸಂಸ್ಥೆ ಬಳಕೆದಾರರ ಅಭಿವೃದ್ಧಿ ಹಾಗೂ ಪ್ರಯಾಣಿಕರ ಸೇವಾ ಶುಲ್ಕಗಳನ್ನು ಪಾವತಿಸಿಲ್ಲ. ಹೀಗಾಗಿ ಬಿಐಎಎಲ್ ಸಂಸ್ಥೆಗೆ ಸುಮಾರು 40ಕೋಟಿ ರು.ಗೂ ಅಧಿಕ ಮೊತ್ತದ ನಷ್ಟ ಉಂಟಾಗಿದೆ ಎನ್ನಲಾಗಿದೆ.

ಯುಬಿ ಗ್ರೂಪ್ ಉಪಾಧ್ಯಕ್ಷ(ಕಾರ್ಪೊರೇಟ್ ಕಮ್ಯೂನಿಕೇಷನ್) ಪ್ರಕಾಶ್ ಮಿರ್ ಪುರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ನಮಗೆ ಈ ಬಗ್ಗೆ ಯಾವುದೇ ಅಧಿಕೃತ ನೋಟಿಸ್ ಬಂದಿಲ್ಲ. ಹೀಗಾಗಿ ಮಾಧ್ಯಮಗಳಿಗೆ ನಾವು ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ವಿಚಾರಣೆಗೆ ಖುದ್ದು ಹಾಜರಾಗುವಂತೆ ಆದೇಶಿಸಿತ್ತು. ಮಲ್ಯ ಅವರಿಗೆ ಒದಗಿರುವ ಸದ್ಯದ ಸಂಕಷ್ಟಗಳ ಬಗ್ಗೆ ಮುಂದೆ ಓದಿ (ಪಿಟಿಐ)

ಷೇರು ಮಾರಾಟ ಕಿರಿಕಿರಿ

ಷೇರು ಮಾರಾಟ ಕಿರಿಕಿರಿ

ಯುಬಿ ಸಮೂಹಕ್ಕೆ ಸಾಲ ಕೊಟ್ಟಿರುವ ಆರು ಸಂಸ್ಥೆಗಳು ಕೋರ್ಟಿನಲ್ಲಿ ದಾವೆ ಹೂಡಿದ್ದು ಪ್ರಕರಣದ ವಿಚಾರಣೆ ನಡೆದು. ಯುಬಿ ಸಮೂಹ ಸಂಸ್ಥೆ ಮಾಲೀಕ ವಿಜಯ್ ಮಲ್ಯ ಅವರು ಪಾಸ್ ಪೋರ್ಟ್ ಸಮೇತ ನಾಳೆ ಕೋರ್ಟಿಗೆ ಹಾಜರಾಗಬೇಕು ಎಂದು ಕೋರ್ಟ್ ಆದೇಶಿಸಿತ್ತು.

ಡಿಯಾಜಿಯೋ ಸಂಸ್ಥೆ ಜತೆ ಆಗಿರುವ ಒಪ್ಪಂದ, ಷೇರು ಮಾರಾಟ ವರದಿಯನ್ನು ಯುಬಿ ಹೋಲ್ಡಿಂಗ್ಸ್ ಸಂಸ್ಥೆ ಕೋರ್ಟಿಗೆ ಸಲ್ಲಿಸುವಲ್ಲಿ ವಿಫಲವಾಗಿತ್ತು. ಯುನೈಟೆಡ್ ಸ್ಪಿರಿಟ್ಸ್ ನ ಷೇರುಗಳನ್ನು ಡಿಯಾಜಿಯೋಗೆ ಮಾರಾಟ ಮಾಡಲಾಗಿದೆ.

ಯುಬಿ ಸಮೂಹದ ನೆರವು

ಯುಬಿ ಸಮೂಹದ ನೆರವು

ಮೊದಲ ಹಂತದ ಪುನಶ್ಚೇತನಕ್ಕೆ ಯುಬಿ ಸಮೂಹ ಸುಮಾರು 650 ಕೋಟಿ ರು ನೀಡುವ ಭರವಸೆ ಕೊಟ್ಟಿತ್ತು. ಎರಡನೇ ಹಂತದಲ್ಲಿ ಹೊಸ ಹೂಡಿಕೆದಾರರನ್ನು ಹುಡುಕುವುದು, ಸಾಲ ಪಾವತಿ, ಸೇವೆ ಹಾಗೂ ರೀ ಪೆಮೆಂಟ್ ಬಗ್ಗೆ ಯೋಜನೆ ಇತ್ತು. ಎಲ್ಲವೂ ಮಲ್ಯ ಅವರ ಆತುರದಿಂದ ವಿಫಲವಾಯಿತು.

ಪೈಲಟ್ ಗಳ ಮುಷ್ಕರ, ವಿಮಾನ ಹಾರಾಟ ರದ್ದು, ವಿಮಾನಯಾನ ಸಂಸ್ಥೆ ಉಳಿಸಲು ಇತರೆ ಆಸ್ತಿ ಮಾರಾಟ ಮುಂತಾದ ಕಷ್ಟಕರ ಪರಿಸ್ಥಿತಿಯನ್ನು ಮಲ್ಯ ಎದುರಿಸಿರುವುದರಿಂದ ಆಸ್ತಿ ಮಾರಾಟ ಹಾಗೂ ಹೊಸ ಹೂಡಿಕೆದಾರರನ್ನು ಸೆಳೆಯಬೇಕು. ತಪ್ಪೊಪ್ಪಿಗೆ ಹೇಳಿಕೆ ನೀಡಿದರೂ ಷೇರುದಾರರು ಸುಮ್ಮನೆ ಕೂರುವುದು ಕಷ್ಟ

ಮತ್ತೆ ಕಾಡುವ ನಿರಶನ

ಮತ್ತೆ ಕಾಡುವ ನಿರಶನ

ವಾರ್ಷಿಕ ವರದಿಯಲ್ಲಿ ಹೇಳಿರುವಂತೆ ನಿರಂತರವಾಗಿ ಕೆಲಸ ನಿಂತಿದ್ದು ಸಂಸ್ಥೆಯ ನಿರ್ವಹಣೆ ವೆಚ್ಚ ಏರಲು ಕಾರಣವಾಯಿತು. ಅನಗತ್ಯವಾಗಿ ಸಿಬ್ಬಂದಿಗಳು ಮುಷ್ಕರ ಹೂಡಿದ್ದು ಕಾರಣ ಎಂದಿದ್ದರು.

ಸುಮಾರು 17ಕ್ಕೂ ಅಧಿಕ ಬ್ಯಾಂಕುಗಳಿಂದ 8,000 ಕೋಟಿ ರು ಗೂ ಅಧಿಕ ಸಾಲದ ಹೊರೆಯನ್ನು ಮಲ್ಯ ಹೊತ್ತಿದ್ದು ಈ ಪೈಕಿ 1000 ಕೋಟಿ ರು ಮಾತ್ರ ಚುಕ್ತಾ ಮಾಡಿದ್ದರು. ಆದರೆ, ತಿಂಗಳುಗಳಿಂದ ಸಂಬಳ ಸಿಗದೆ ಒದ್ದಾಡುತ್ತಿದ್ದ ಸಿಬ್ಬಂದಿಗೆ ಬರಿ ಗೈ ತೋರಿಸಿದ್ದರು. ಸಂಬಳ ಸಿಗದೆ ಸಿಬ್ಬಂದಿಗಳು ನಿರಶನ ಮುಂದುವರೆಸಿದ್ದರು.ಈಗಲೂ ನಿರಶನ ಕಾಡಲಿದೆ.

ಇಂಜಿನ್ ದೋಷ ಕಾರಣ

ಇಂಜಿನ್ ದೋಷ ಕಾರಣ

ಬ್ರೂವರೀಸ್ (ಹೋಲ್ಡಿಂಗ್ಸ್) ಲಿ. ಸಂಸ್ಥೆ ಈಗ ವಿಮಾನಗಳಿಗೆ ದೋಷ ಪೂರಿತ ಇಂಜಿನ್ ಒದಗಿಸಿದ ಇಂಟರ್ ನ್ಯಾಷನಲ್ ಏರೋ ಇಂಜಿನ್ಸ್ ಎಜಿ ವಿರುದ್ಧ ಹೈಕೋರ್ಟಿನಲ್ಲಿ ದೂರು ಸಲ್ಲಿಸಲಾಗಿತ್ತು. ಒಟ್ಟಾರೆ 1477 ಕೋಟಿ ರು ಪರಿಹಾರ ಧನ ಕೋರಲಾಗಿದೆ.

ವಿಮಾನ ಹಾರಾಟದ ಸ್ಥಗಿತಕ್ಕೆ ಸಂಬಂಧಿಸಿದಂತೆ ಮಲ್ಯ ಮಾಧ್ಯಮದವರ ವಿರುದ್ಧ ಹರಿಹಾಯ್ದಿದ್ದರು. ವಿಮಾನ ಯಾನ ಪುನರ್ ಆರಂಭಕ್ಕೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿರುವುದಾಗಿ ಅವರು ಇತ್ತೀಚೆಗೆ ಷೇರುದಾರರಿಗೆ ತಿಳಿಸಿದ್ದರು. ಮುಂಬೈ ಉದ್ಯೋಗಿಗಳ ತಂಡವು ವ್ಯವಸ್ಥಾಪಕರ ಜೊತೆ ಕೆಲವು ಸಭೆಗಳನ್ನು ನಡೆಸಿದ್ದಾರಾದರೂ ಕಂಪೆನಿ ನೀಡಿರುವ ಆಶ್ವಾಸನೆಯನ್ನು ಈಡೇರಿಸಿರಲಿಲ್ಲ.

English summary
Bengaluru International Airport Limited (BIAL) has filed case in a Magisterial Court against Vijay Mallya-led Kingfisher airlines for non-payment of user development and passenger service fees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X