ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ವಾರಂಟೈನ್‌ನಿಂದ ತಪ್ಪಿಸಿಕೊಂಡವರಿಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ

|
Google Oneindia Kannada News

ಬೆಂಗಳೂರು, ಜೂನ್ 2: ಕ್ವಾರಂಟೈನ್‌ನಿಂದ ತಪ್ಪಿಸಿಕೊಂಡು ಊರೂರು ತಿರುಗುತ್ತಿರುವವರಿಗೆ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.

Recommended Video

ಆರೋಗ್ಯವನ್ನೇ ಮರೆತ ಅನಾರೋಗ್ಯ ಸಚಿವ..ಇದೇನ್ ಸನ್ಮಾನ ಮಾಡಿಸಿಕೊಳ್ಳೋ ಟೈಮೆನ್ರೀ | Oneindia Kannada

ಕ್ವಾರಂಟೈನ್‌ನಿಂದ ತಪ್ಪಿಸಿಕೊಂಡು ಓಡಿಹೋಗಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಅವರು ತಿಳಿಸಿದ್ದಾರೆ. ಬೆಳಗ್ಗೆ ಮುಂಬೈಯಿಂದ ಉದ್ಯಾನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ 667 ಪ್ರಯಾಣಿಕರು ಬಂದಿದ್ದಾರೆ.

ಪ್ರಯಾಣಿಕರ ರೈಲು ಸಂಚಾರ ಆರಂಭ, ಟಿಕೆಟ್ ಬುಕ್ ಹೇಗೆ?ಪ್ರಯಾಣಿಕರ ರೈಲು ಸಂಚಾರ ಆರಂಭ, ಟಿಕೆಟ್ ಬುಕ್ ಹೇಗೆ?

ಮುಂಬೈಯಿಂದ ಬಂದವರನ್ನ ಕ್ವಾರಂಟೈನ್ ಮಾಡಲು ರಾಜ್ಯ ಸರ್ಕಾರ ಸೂಚಿಸಿದೆ. ಆದರೆ ಕ್ವಾರಂಟೈನ್ ತಪ್ಪಿಸಿಕೊಳ್ಳಲು ಬಹಳ ಜನರು ಓಡಿಹೋಗಿದ್ದಾರೆ. ಆದರೆ ಅವರ ಹಿಂದೆ ಹೋಗುವುದು ಸರಿಯಲ್ಲ ಎಂದು ನಾವು ಹೋಗಿಲ್ಲ ಎಂದು ತಿಳಿಸಿದರು.

Bhaskar Rao Strict Warning To Mumbai Train Passengers

ಪಾಲಿಕೆ ಆರೋಗ್ಯ ಅಧಿಕಾರಿಗಳು ಹಾಗೂ ಪೊಲೀಸರು ಮುಂಬೈಯಿಂದ ಬಂದ ಪ್ರಯಾಣಿಕರಿಗೆ ಕ್ವಾರಂಟೈನ್ ಮಾಡಲು ಮುಂದಾಗಿದ್ದಾರೆ. ಆಗ ಪ್ರಯಾಣಿಕರು ಕ್ವಾರಂಟೈನ್ ಆಗಲು ವಿರೋಧಿಸಿ ಗಲಾಟೆ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ. ತಪ್ಪಿಸಿಕೊಂಡು ಹೋಗಿರುವವರು ಪ್ಯಾಸೆಂಜರ್ಸ್ ತಕ್ಷಣ ಪಾಲಿಕೆ ಆರೋಗ್ಯ ಅಧಿಕಾರಿಗಳನ್ನ ಸಂಪರ್ಕ ಮಾಡಿದರೆ ಕ್ರಿಮಿನಲ್ ಕೇಸ್‍ನಿಂದ ಮುಕ್ತಿ ಸಿಗುತ್ತದೆ.

ರೈಲ್ವೆ ಇಲಾಖೆಯಿಂದ ಅವರ ವಿಳಾಸ ತೆಗೆದುಕೊಂಡು ಅವರನ್ನು ಪತ್ತೆ ಮಾಡುತ್ತೇವೆ. ನಂತರ ಅವರನ್ನು ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸುತ್ತೇವೆ. ಪ್ರಯಾಣಿಕರು ಅವರಾಗಿ ಬಂದು ಬಿಬಿಎಂಪಿ, ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕ ಮಾಡಬೇಕು. ಒಂದು ವೇಳೆ ಅವರು ಆರೋಗ್ಯ ಅಧಿಕಾರಿಗಳನ್ನು ಸಂಪರ್ಕ ಮಾಡದೆ ಹೋದರೆ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುತ್ತದೆ ಎಂದು ಸೂಚಿಸಿದರು.

ಮುಂಬೈನಿಂದ ಗದಗ ತಲುಪಿದ ರೈಲು: 124 ಪ್ರಯಾಣಿಕರ ಮೇಲೆ ಡಿಸಿ, ಎಸ್‌ಪಿ ನಿಗಾಮುಂಬೈನಿಂದ ಗದಗ ತಲುಪಿದ ರೈಲು: 124 ಪ್ರಯಾಣಿಕರ ಮೇಲೆ ಡಿಸಿ, ಎಸ್‌ಪಿ ನಿಗಾ

ಇಲ್ಲದೇ ಹೋದರೆ ರೈಲ್ವೇ ಇಲಾಖೆಯಿಂದ ಮಾಹಿತಿ ಪಡೆದು ತಪ್ಪಿಸಿಕೊಂಡು ಹೋದ ಪ್ರಯಾಣಿಕರನ್ನು ಹುಡುಕಿ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

English summary
Bengaluru Police Commissioner Strict Warning To Mumbai Returnees Who Escaped At KSR Railway Station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X