ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆಯಾದ ಭಾರತಿ ಶೆಟ್ಟಿ

ಮಾಜಿ ವಿಧಾನ ಪರಿಷತ್ ಸದಸ್ಯೆ ಭಾರತಿಶೆಟ್ಟಿ ಅವರು ಬಿಜೆಪಿ ಮಹಿಳಾ ಮೋರ್ಚಾ ನೂತನ ರಾಜ್ಯಾಧ್ಯಕ್ಷೆಯಾಗಿ ಗುರುವಾರ ಪಕ್ಷದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

By Mahesh
|
Google Oneindia Kannada News

ಬೆಂಗಳೂರು, ನವೆಂಬರ್ 17: ಮಾಜಿ ವಿಧಾನ ಪರಿಷತ್ ಸದಸ್ಯೆ ಭಾರತಿಶೆಟ್ಟಿ ಅವರು ಬಿಜೆಪಿ ಮಹಿಳಾ ಮೋರ್ಚಾ ನೂತನ ರಾಜ್ಯಾಧ್ಯಕ್ಷೆಯಾಗಿ ಗುರುವಾರ ಪಕ್ಷದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷೆ ಭಾರತಿ ಮುಗ್ಧಂ ಅವರಿಂದ ಬಾವುಟ ಪಡೆಯುವುದರ ಮೂಲಕ ಭಾರತಿ ಶೆಟ್ಟಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಪಕ್ಷದ ಮುಖಂಡ ಆರ್.ಅಶೋಕ್, ಮಾಜಿ ವಿಧಾನ ಪರಿಷತ್ ಸದಸ್ಯ ಎಸ್. ಆರ್.ಲೀಲಾ ಸೇರಿದಂತೆ ಮತ್ತಿತರರು ಹಾಜರಿದ್ದರು.

Bharathi Shetty takes charge as President of Karnataka Mahila Morcha

ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಭಾರತಿ ಶೆಟ್ಟಿ, ಯಡಿಯೂರಪ್ಪ ನವರು ರಾಜ್ಯಾಧ್ಯಕ್ಷರಾಗಿ ಪಕ್ಷದಲ್ಲಿ ಅನೇಕ ಬದಲಾವಣೆ ತಂದಿದ್ದಾರೆ. ಸಂಘಟನೆಯಿಂದ ಮಾತ್ರ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯ. ಅವರ ನಾಯಕತ್ವದಲ್ಲಿ ನಾವು ಕೂಡ ಕೈ ಜೋಡಿಸಿದರೆ ಅಧಿಕಾರ ಹಿಡಿಯುವುದರಲ್ಲಿ ಯಾವ ಸಂದೇಹವೂ ಇಲ್ಲ.

ಯಡಿಯೂರಪ್ಪ ಮತ್ತು ಪ್ರಧಾನಿ ನರೇಂದ್ರಮೋದಿಯವರದು ಹೋರಾಟದ ಬದುಕು. ಅವರ ಮಾರ್ಗದರ್ಶನದಲ್ಲೇ ನಾವು ಕೂಡ ಮುನ್ನಡೆಯಬೇಕು. ಅಧಿಕಾರದ ಆಸೆಗೆ ಯಾರೊಬ್ಬರೂ ಬಲಿಯಾಗಬಾರದು ಎಂದು ಸಲಹೆ ಮಾಡಿದರು.

Bharathi Shetty takes charge as President of Karnataka Mahila Morcha

ಈಗ ಮಾತೃ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯಾಧ್ಯಕ್ಷರು ನೇಮಿಸಿದ್ದಾರೆ. ಅವರಿಗೆ ನನ್ನ ಅಭಿನಂದನೆಗಳು ಎಂದರು. ನಮ್ಮ ಪಕ್ಷದಲ್ಲಿರುವವರು ಹೋರಾಟದ ಹಿನ್ನೆಲೆಯಿಂದ ಬಂದವರು. ಇದೇ ರೀತಿ ರಾಜಕೀಯಕ್ಕೆ ಬಂದಿರುವ ಮಹಿಳೆಯರು ಹೋರಾಟ ಮಾಡುವ ಮೂಲಕ ಪಕ್ಷ ಸಂಘಟನೆ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸುವಂತೆ ಮನವಿ ಮಾಡಿದರು.

ಆರ್. ಅಶೋಕ್: ಕಪ್ಪುಹಣ ವಿರುದ್ಧದ ಕ್ರಮವನ್ನು ವಿರೋಧಿಸುತ್ತಿರುವವರು ಕಾಂಗ್ರೆಸ್ಸಿಗರು ಮಾತ್ರ. ಜನರು, ಬಡವರು ಖುಷಿಯಾಗಿದ್ದಾರೆ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಈ ವಿಚಾರವನ್ನು ರಾಜಕೀಯಕ್ಕೆ ಎಳೆದುತಂದು ನಿಲ್ಲಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

Bharathi Shetty takes charge as President of Karnataka Mahila Morcha

ಪಕ್ಷಕ್ಕೆ ಶಕ್ತಿ ತುಂಬುವವರು ಮಹಿಳಾ ಮೋರ್ಚಾ ಅಧ್ಯಕ್ಷರಾಗಿದ್ದಾರೆ. ಭಾರತಿ ಶೆಟ್ಟಿ ತಮಗೆ ಸಿಕ್ಕ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ಎದುರಿಸುವ ವಿಶ್ವಾಸವಿದೆ. ಪಕ್ಷವನ್ನು ಅಧಿಕಾರಕ್ಕೆ ತರುವ ಗುರಿ ನಮ್ಮೆಲ್ಲರ ಮುಂದಿದ್ದು, ಈ ನಿಟ್ಟಿನಲ್ಲಿ ಭಾರತಿ ಶೆಟ್ಟಿ ತಮ್ಮ ಸಾಮರ್ಥ್ಯವನ್ನು ಬಳಸಿಕೊಳ್ಳುವ ವಿಶ್ವಾಸ ಇದೆ ಎಂದರು.

English summary
Former legislator Bharathi Shetty today took charge as BJP Mahila Morcha of Karnataka unit of the party. Former DCM R Ashoka was present at the occasion
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X