ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಿಭಾವಂತೆ ಶರ್ಮಿಳಾ ಉಡುಪ ರಂಗ ಪ್ರವೇಶ ಯಶಸ್ವಿ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 20: ತಾಯಿಯ ಬಲವಂತಕ್ಕೆ ಭರತನಾಟ್ಯ ಶಾಲೆಗೆ ಹೋಗಲಾರಂಭಿಸಿದ ಶರ್ಮಿಳಾ ಅವರು ಇತ್ತೀಚೀಗೆ ರಂಗ ಪ್ರವೇಶ ಯಶಸ್ವಿಯಾಗಿದೆ. ವಿದ್ಯೆ, ಉದ್ಯೋಗದ ಜತೆಗೆ ಕಲೆಗೂ ಒತ್ತು ನೀಡಬೇಕು ಎಂಬ ದನಿಗೆ ಶರ್ಮಿಳಾ ಸಾಕ್ಷಿಯಾಗಿದ್ದಾರೆ.

ರಮೇಶ್ ಉಡುಪ ಮತ್ತು ಸುಜಾತ ರಮೇಶ್ ಇವರ ಪುತ್ರಿ ಶರ್ಮಿಳಾ ಉಡುಪ. ಇವಳ ವಿದ್ಯಾಭ್ಯಾಸ ಎಲ್ ಕೆ ಜಿ ಯಿಂದ ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ ಜಾಲಹಳ್ಳಿಯ ಕ್ಲೂನಿ ಕಾನ್ವೆಂಟ್ ನಲ್ಲಿ ಮಾಡಿದ್ದಾರೆ.

Bharatanatyam Rangapravesha of Sharmila Udupa

ಎಸ್ಎಸ್ಎಲ್ಸಿ ನಂತರ ತಾಯಿಯ ಬಲವಂತಕ್ಕೆ ಭರತನಾಟ್ಯ ಶಾಲೆಗೆ ಹೋಗಲಾರಂಭಿಸಿದ್ದಾರೆ. 2003 ರಿಂದ 2007ರವರೆಗೆ ವಿದುಷಿ "ಶುಭ ಧನಂಜಯ" ಇವರ ಬಳಿ ಅಭ್ಯಾಸ ಮಾಡಿ ಅಲ್ಲೇ ಜೂನಿಯರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

Bharatanatyam Rangapravesha of Sharmila Udupa

ಕೆಎಲ್ಇ ಕಾಲೇಜಿನಲ್ಲಿ 3 ವರ್ಷ ಪದವಿ ಪೂರ್ವ ಶಿಕ್ಷಣವನ್ನು, ಅಂಬೇಡ್ಕರ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿ ನಂತರ ಎಂಬಿಎ ಸಹ ಮುಗಿಸಿದ್ದಾರೆ.

ವಿದುಷಿ ಚಂದ್ರಿಕಾ ರಾಘವೇಂದ್ರ ರವರು ನಡೆಸುತ್ತಿರುವ "ಭರತ ಕಲಾ ಯೋಗ ಸ್ಕೂಲ್ ಆಫ್ ಆರ್ಟ್ಸ್" ನಲ್ಲಿ ಅಭ್ಯಾಸ ಮಾಡಿ ಸೀನಿಯರ್ ಪರೀಕ್ಷೆ ಮುಗಿಸಿದ್ದಾರೆ.

Bharatanatyam Rangapravesha of Sharmila Udupa

ಈಗ ರಂಗಪ್ರವೇಶದ ತಯಾರಿಯನ್ನು ಗುರು ಚಂದ್ರಿಕಾ ರಾಘವೇಂದ್ರ ಅವರ ಬಳಿಯೇ ಕಲಿತು ನೃತ್ಯವನ್ನು ಇತ್ತೀಚೆಗೆ ಪ್ರದಶಿಸಿದ್ದಾರೆ.

ಪೋಷಕರ ಪ್ರೋತ್ಸಾಹ ಮತ್ತು ಗುರು ಚಂದ್ರಿಕಾ ರಾಘವೇಂದ್ರ ಅವರ ಸರಿಯಾದ ತರಬೇತಿ, ಮಾರ್ಗದರ್ಶನ ಇವಳ ನೃತ್ಯ ಕಲೆಗೆ ಸಹಕಾರಿಯಾಗಿದೆ.

Bharatanatyam Rangapravesha of Sharmila Udupa

ನೃತ್ಯಕಲೆ ಮನುಷ್ಯನ ವಾಸ್ತವಿಕತೆ ಮತ್ತು ಜೀವನದಲ್ಲಿ ನಡೆಯುವ ಕಷ್ಟಸುಖಗಳ ಸಮಾಗಮವನ್ನು ನೃತ್ಯದಲ್ಲಿ ತೋರಿಸುವ ಮಾರ್ಗ. ಅಂತ ಕಲೆಯನ್ನು ಚಂದ್ರಿಕಾ ರಾಘವೇಂದ್ರ ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಶಿಷ್ಯರೆಲ್ಲರಿಗೂ ಧಾರೆಯೆರೆಯುತ್ತಿದ್ದರೆ. ಅಂಥ ಗುರುವಿಗೆ ನಮ್ಮ ಸಾಷ್ಟಾಂಗ ಪ್ರಣಾಮಗಳು. ನೃತ್ಯವೇ ಇವರ ಜೀವನಾಡಿ ಎಂದರೆ ಸುಳ್ಳಲ್ಲ .

ಇನ್ನು ಶರ್ಮಿಳಾ ಅವರು ಇಸ್ಕಾನ್, ಅಪೋಲೋ, ಐಐಎಂ ನಲ್ಲಿ ಕೆಲಸ ಮಾಡಿದ್ದಾಳೆ. ಪ್ರಸ್ತುತ ವಾತ್ಸಲ್ಯ ಸೆಂಟರ್ ಫಾರ್ ಓರಲ್ ಹೆಲ್ತ್ ನಲ್ಲಿ ಹೆಡ್ ಆಪರೇನಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

English summary
Bharatanatya tradition "Ranga Pravesh" or Arangatram is ritual is an official stamp of recognition to a dancer to exhibit one's talents before the public and art-connoisseurs. Here is the introduction about Ranga pravesham of Shamitha Udupa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X